ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಕಟ್ಟಿಂಗ್: ಅಣ್ಣ-ತಮ್ಮಂದಿರ ಕೊರೊನಾ ಜಾಗೃತಿ

|
Google Oneindia Kannada News

ಅಂಕೋಲಾ, ಏಪ್ರಿಲ್ 29: ಎಲ್ಲಿ ನೋಡಿದರೂ ಕೊರೊನಾ. ಈ ಕೊರೊನಾ ಹಾವಳಿಯ ನಡುವೆ ಅಂಕೋಲಾದ ಅಣ್ಣತಮ್ಮಂದಿರು ಅದರ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಕೊರೊನಾ ಕಟ್ಟಿಂಗ್ ಮೂಲಕ ಅರಿವು ಮೂಡಿಸಲು ಮುಂದಾಗಿದ್ದಾರೆ.

ಅಂಕೋಲಾದ ಡ್ರೋಂಗಿ ಎಂದು ಗ್ರಾಮದ ಸುಬ್ರಾಯ ನಾರಾಯಣ ಅವರ ಸಹೋದರನ ತಲೆಯ ಮೇಲೆ ಕೊರೊನಾ ವಿನ್ಯಾಸದ ಕಟ್ಟಿಂಗ್ ಮಾಡಿದ್ದಾರೆ. ಚಿತ್ರಕಾರನಾಗಿರುವ ಅವರು ತಮ್ಮ ಕಲೆಯ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಸಹೋದರ ಹರೀಶ್ ಕೂದಲಿನಿಂದ ಕೊರೊನಾ ಚಿತ್ರ ಮೂಡಿಸಿದ್ದಾರೆ. ತಲೆಯ ಮೇಲೆ ಕೊರೊನಾ ಚಿತ್ರ ಬಿಡಿಸಿದ್ದು, ಗೋ ಕೊರೊನಾ ಎಂದು ಬರೆಯಲಾಗಿದೆ.

Corona Cutting Ankola Brothers Spreading Awareness About Coronavirus

ಕೊರೊನಾ ವಾರಿಯರ್ಸ್‌ ಸಹಾಯಕ್ಕೆ ಬಂದ 'ಬೌನ್ಸ್' ಸಂಸ್ಥೆ ಕೊರೊನಾ ವಾರಿಯರ್ಸ್‌ ಸಹಾಯಕ್ಕೆ ಬಂದ 'ಬೌನ್ಸ್' ಸಂಸ್ಥೆ

ಈ ಬಗ್ಗೆ ಒನ್ ಇಂಡಿಯಾ ಕನ್ನಡ ಜೊತೆಗೆ ಮಾತನಾಡಿರುವ ''ಸುಬ್ರಾಯ ನಾರಾಯಣ ಟಿವಿಯಲ್ಲಿ ಅನೇಕರು ಬೇರೆ ಬೇರೆ ರೀತಿಯಲ್ಲಿ ಅರಿವು ಮೂಡಿಸುವುದನ್ನು ನೋಡಿದೆ. ಕೆಲವರು ರಸ್ತೆಯ ಮೇಲೆ ಚಿತ್ರ ಬಿಡಿಸಿದರು. ನಾವು ಕೂಡ ಏನಾದರು ಮಾಡಬೇಕು ಎಂದು ಈ ರೀತಿಯ ವಿನ್ಯಾಸ ಮಾಡಿದೆ'' ಎಂದಿದ್ದಾರೆ.

Corona Cutting Ankola Brothers Spreading Awareness About Coronavirus

ಸುಬ್ರಾಯ ನಾರಾಯಣ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ ಆಫ್ ವಿಜ್ವಲ್ ಆರ್ಟ್ ಪದವಿ ಪಡೆದಿದ್ದಾರೆ. ಸದ್ಯ, ಬೆಂಗಳೂರಿನ ಶೇಷಾದ್ರಿಪುರಂ ಬಳಿ ತಮ್ಮದೆ ಟ್ಯಾಟೂ ಅಂಗಡಿ ಇಟ್ಟುಕೊಂಡಿದ್ದಾರೆ.

English summary
Ankola brothers Subraya Narayan and Harish spreading awareness about Coronavirus by his corona cutting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X