ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಚೆ ಮತ ಪತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಮುನ್ನಡೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ ಮೇ 15 : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದ ಅಂಚೆ ಮತ ಪತ್ರಗಳ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಆರ್. ವಿ.ದೇಶಪಾಂಡೆ 654 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ದೇಶಪಾಂಡೆ ಅಂಚೆ ಮತ ಪತ್ರಗಳಿಂದ 4,134 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಸುನೀಲ್ ಹೆಗಡೆ 3,480 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಸಿಪಿಐಎಂನ ಅಭ್ಯರ್ಥಿ ಯಮುನಾ ಗಾಂವಕರ 70, ಜೆಡಿಎಸ್ ನ ಕೆ.ಆರ್.ರಮೇಶ್ 172, ಎಂಇಪಿಯ ಕಕ್ಕೇರಿ ಬಡೇಸಾಬ್ ಹುಸೇನ್ ಸಾಬ್ 58, ಭಾರತೀಯ ಹೊಸ ಕಾಂಗ್ರೆಸ್ ಪಕ್ಷದ ಜಹಾಂಗೀರ್ ಬಾಬಾ ಖಾನ್ 33, ಶಿವಸೇನೆಯ ಶಂಕರ ಬಸವಂತ ಫಾಕರಿ 43, ಪಕ್ಷೇತರರಾದ ಇಲಿಯಾಸ್ ಕಾಟಿ 17, ಟಿ.ಆರ್.ಚಂದ್ರಶೇಖರ 51 ಮತಗಳನ್ನು ಪಡೆದಿದ್ದಾರೆ.

LIVE: ಫಲಿತಾಂಶ: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಭಾರೀ ಹಿನ್ನಡೆLIVE: ಫಲಿತಾಂಶ: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಭಾರೀ ಹಿನ್ನಡೆ

93 ಮತಗಳು ನೋಟಾಗೆ ಚಲಾವಣೆಯಾಗಿದೆ. ಇಲ್ಲಿ 1,71,846 ಮತದಾರರಿದ್ದು, ಶೇ 76.92 ರಷ್ಟು ಮತದಾನವಾಗಿತ್ತು. 1,32,181 ಮತಗಳು ಚಲಾವಣೆಯಾಗಿತ್ತು.

Congress candidate RV Deshpande took lead in a postal ballot.
English summary
Karnataka Election Results 2018: counting of postal ballots in the Haila constituency in Uttara Kannada district has been completed.Congress candidate RV Deshpande took lead in a postal ballot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X