ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿ; ಕಾಲೇಜು ಸಮವಸ್ತ್ರದಲ್ಲೇ ಮದ್ಯ ಸೇವಿಸಿದ ವಿದ್ಯಾರ್ಥಿಗಳು ವಶಕ್ಕೆ

|
Google Oneindia Kannada News

ಶಿರಸಿ, ಫೆಬ್ರವರಿ 04: ನಗರದ ಬಾರ್‌ವೊಂದರಲ್ಲಿ ಪದವಿ ಕಾಲೇಜಿನ ಮೂರ್ನಾಲ್ಕು ಯುವಕರು ಮದ್ಯ ಸೇವನೆ ಮಾಡಲು ಹೋಗಿ ಪೋಲಿಸರಿಗೆ ಸಿಕ್ಕಿ ಬಿದ್ದ ಘಟನೆ ಸೋಮವಾರ ನಡೆದಿದೆ.

ನಗರದ ಪ್ರಮುಖ ಬಾರ್ ಮತ್ತು ರೆಸ್ಟೋರೆಂಟ್ ‌ಗೆ ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿಗೆ ಮದ್ಯ ಸೇವಿಸಲು ಕಾಲೇಜು ಸಮವಸ್ತ್ರದಲ್ಲಿ ಹೋದ ಯುವಕರನ್ನು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದು ಠಾಣೆಗೆ ಕರೆ ತಂದಿದ್ದಾರೆ. ಇದರಲ್ಲಿ ಮೂವರು ಪದವಿ ವಿದ್ಯಾರ್ಥಿಗಳಾಗಿದ್ದು, ಓರ್ವ ನಗರದ ಪ್ರತಿಷ್ಠಿತ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ.

ಮುಚ್ಚಿದ್ದ ಹುಕ್ಕಾ ಬಾರ್ ಗೆ ಮತ್ತೆ ಲೈಸನ್ಸ್, ಲಂಚಮುಕ್ತ ವೇದಿಕೆ ಆಕ್ರೋಶಮುಚ್ಚಿದ್ದ ಹುಕ್ಕಾ ಬಾರ್ ಗೆ ಮತ್ತೆ ಲೈಸನ್ಸ್, ಲಂಚಮುಕ್ತ ವೇದಿಕೆ ಆಕ್ರೋಶ

ಇಂತಹ ದುಶ್ಚಟಕ್ಕೆ ಬಲಿಯಾಗುತ್ತಿರುವ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮದ್ಯವೊಂದೇ ಅಲ್ಲದೇ ಡ್ರಗ್ಸ್, ಗಾಂಜಾ ದಾಸರಾಗುತ್ತಿದ್ದಾರೆ. ಇಂಥವರಿಗೆ ಕಾಲೇಜು ಪ್ರಾಂಶುಪಾಲರ ಹಿಡಿತವಿಲ್ಲದೇ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ರೀತಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

College Students Arrested For Drinking Alcohol In Bar In Sirsi

ಮುಂಬೈನಂತೆ ಬೆಂಗಳೂರು ಮಲ್ಟಿಪ್ಲೆಕ್ಸ್ ಸಂಸ್ಕೃತಿಗೆ ಒಗ್ಗಬೇಕೇ? ಮುಂಬೈನಂತೆ ಬೆಂಗಳೂರು ಮಲ್ಟಿಪ್ಲೆಕ್ಸ್ ಸಂಸ್ಕೃತಿಗೆ ಒಗ್ಗಬೇಕೇ?

ಈಗಾಗಲೇ ನಗರದ ವಿದ್ಯಾರ್ಥಿಗಳಲ್ಲಿ ಗಾಂಜಾ, ಮದ್ಯದ ಚಟ ಹೆಚ್ಚಾಗಿದೆ. ಇದರ ಅಮಲಿನಲ್ಲಿ ಹೊಡೆದಾಟ- ಬಡಿದಾಟಗಳು, ಇನ್ನಿತರ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಪಾಲಕರಿಗೆ ಇದರ ಅರಿವೇ ಇರದೇ ಈ ಕಾರ್ಯ ನಡೆಯುತ್ತಿದೆ. ಈ ಕುರಿತು ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದ್ದರೂ ಇಂತಹ ಹಲವಾರು ಪ್ರಕರಣಗಳು ನಗರದಲ್ಲಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

English summary
Four college students arrested by police in sirsi for drinking alcohol at a bar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X