ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆದ್ದಾರಿಗಳಲ್ಲಿ ಹಗಲು ದರೋಡೆ: ತೈಲ ಬೆಲೆ ಏರಿಕೆಯ ನಡುವೆ ಫಾಸ್ಟ್ಯಾಗ್ ಹೆಸರಿನಲ್ಲೂ ಬರೆ!

|
Google Oneindia Kannada News

ಕಾರವಾರ, ಫೆಬ್ರವರಿ 17: ಕೇಂದ್ರ ಸರ್ಕಾರ ಫೆ.16ರಿಂದ ಎಲ್ಲಾ ಟೋಲ್ ಗೇಟ್ ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತೈಲ ಬೆಲೆ ಏರಿಕೆಯಾಗುತ್ತಿರುವ ಈ ಹೊತ್ತಲ್ಲೇ ಟೋಲ್ ಗೇಟ್ ಗಳಲ್ಲಿ ಫಾಸ್ಟ್ಯಾಗ್ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದೆಯೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಅಂಕೋಲಾದ ಹಟ್ಟಿಕೇರಿ, ಕುಮಟಾದ ಹೊಳೆಗದ್ದೆ ಹಾಗೂ ಭಟ್ಕಳ ಸಮೀಪದ ಶಿರೂರಿನಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಂಡಿರುವ ಐ.ಆರ್.ಬಿ‌ ಕಂಪನಿ ಟೋಲ್ ಗೇಟ್ ನಿರ್ಮಿಸಿ ಎರಡು ವರ್ಷ ಕಳೆಯುತ್ತಿದೆ. ಇಲ್ಲಿನ ಟೋಲ್ ಗೇಟ್ ಗಳಲ್ಲಿ ಸುಮಾರು 10 ಗೇಟುಗಳಿದ್ದು, ಈ ಪೈಕಿ ನಾಲ್ಕರಲ್ಲಿ ವಾಹನಗಳಿಗೆ ಪ್ರತಿದಿನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಉಳಿದ ಮಾರ್ಗಗಳಲ್ಲಿ ಕೆಲವೊಮ್ಮೆ ವಿಐಪಿ, ಅಂಬ್ಯುಲೆನ್ಸ್ ಗಳ ಸಂಚಾರಕ್ಕೆ ತೆರೆಯಲಾಗುತ್ತದೆ.

ಫಾಸ್ಟ್ಯಾಗ್ ಸೃಷ್ಟಿಸಿದ ಗೊಂದಲ: ಟೋಲ್ ಪ್ಲಾಜಾಗಳಲ್ಲಿ ಗದ್ದಲಫಾಸ್ಟ್ಯಾಗ್ ಸೃಷ್ಟಿಸಿದ ಗೊಂದಲ: ಟೋಲ್ ಪ್ಲಾಜಾಗಳಲ್ಲಿ ಗದ್ದಲ

ಸದ್ಯ ಫಾಸ್ಟ್ಯಾಗ್ ಕಡ್ಡಾಯ ಆದಾಗಿನಿಂದ ಫಾಸ್ಟ್ಯಾಗ್ ಅಳವಡಿಸಿಕೊಳ್ಳದವರಿಗೆ ಒಂದೇ ಒಂದು ಗೇಟಿನ ಮೂಲಕ ಮಾತ್ರ ಬಿಡಲಾಗುತ್ತಿದೆ. ಅದು ಕೂಡ ದುಪ್ಪಟ್ಟು ಹಣ ವಸೂಲಿ ಮಾಡಿ ಬಿಡಲಾಗುತ್ತಿದೆ. ಒಂದೇ ಗೇಟಿನಲ್ಲಿ ವಾಹನಗಳನ್ನು ಬಿಡುತ್ತಿರುವ ಕಾರಣ ನೂರಾರು ವಾಹನಗಳು ಗೇಟ್ ನಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದೆ.

Karwar: Chaos Prevailed At Several Toll Booths As Center Made FASTag Mandatory

37 ಕಿ.ಮೀ ಪ್ರಯಾಣಕ್ಕೆ ದುಪ್ಪಟ್ಟು ಹಣ

ಅಂಕೋಲಾದಿಂದ ಕಾರವಾರಕ್ಕೆ 37 ಕಿ.ಮೀ ಅಂತರವಿದೆ. ಅಂಕೋಲಾದಿಂದ ನೂರಾರು ಜನರು ಉದ್ಯೋಗ ಇನ್ನಿತರ ಕೆಲಸಕ್ಕಾಗಿ ಜಿಲ್ಲಾ ಕೇಂದ್ರ ಕಾರವಾರಕ್ಕೆ ಪ್ರತಿನಿತ್ಯ ಪ್ರಯಾಣಿಸುತ್ತಾರೆ. ಈ ಪೈಕಿ ಅದೆಷ್ಟೋ ಜನ ಹೊರ ಜಿಲ್ಲೆಯ ಆರ್.ಟಿ.ಒ‌ ನೋಂದಣಿ ಹೊಂದಿದ್ದಾರೆ. ಆದರೆ ಕಾರು ಅಥವಾ ಇನ್ನಿತರ ಸಣ್ಣಪುಟ್ಟ ವಾಣಿಜ್ಯ ವಾಹನಗಳನ್ನು ಹೊಂದಿರುವವರಿಗೆ ಈಗ ಈ 37 ಕಿ.ಮೀ. ಪ್ರಯಾಣ ದುಬಾರಿಯಾಗಿದೆ.

ಫಾಸ್ಟ್ಯಾಗ್ ಇದ್ದವರಿಗೆ 80, ಇಲ್ಲದವರಿಗೆ 160 ರೂ. ಟೋಲ್ ನೀಡಬೇಕಿದೆ. ಅಂಕೋಲಾದಿಂದ ಕಾರವಾರಕ್ಕೆ ಹೋಗಿ ಬರುವವರಾದರೆ ಫಾಸ್ಟ್ಯಾಗ್ ಇದ್ದವರು 160, ಇಲ್ಲದವರು 320 ರೂ. ನೀಡಬೇಕಾಗಿದೆ.

Karwar: Chaos Prevailed At Several Toll Booths As Center Made FASTag Mandatory

Recommended Video

ಇಂದಿನಿಂದ ಟೋಲ್ಗೇಟ್ ಗಳಲ್ಲಿ ಪಾಸ್ಟ್ಯಾಗ್ ಕಡ್ಡಾಯ-ಲಾರಿ ಚಾಲಕರ ಫೈಟ್ | Oneindia Kannada

37 ಕಿ.ಮೀ. ಪ್ರಯಾಣಿಸಲು ಕಡಿಮೆಯೆಂದರೂ ನಾಲ್ಕು ಲೀಟರ್ ಪೆಟ್ರೋಲ್/ ಡೀಸೆಲ್ ಅಗತ್ಯವಿದೆ. ಅಂದರೆ ಸುಮಾರು 400 ರೂ. ಇಂಧನ ತುಂಬಿಸಿಕೊಳ್ಳುವುದಷ್ಟೇ ಅಲ್ಲದೆ,‌ ಗೇಟ್ ನಲ್ಲಿ ಮತ್ತೆ ಟೋಲ್ ಎಂದು ಹಣ ನೀಡಬೇಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

English summary
The public outrage has been triggered by the central government's Mandatory of Fastag at all toll gates since February 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X