ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಮ್ಮಕ್ಕಳೊಂದಿಗೆ ಬಂದು ಮತ ಚಲಾಯಿಸಿದ ಅಸ್ನೋಟಿಯ ಶತಾಯುಷಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಏಪ್ರಿಲ್ 24:ಶತಾಯುಷಿ ಮತದಾರ ತಾಲೂಕಿನ ಅಸ್ನೋಟಿಯ ಮಾಜೇವಾಡದ ನಿವಾಸಿ, 101ರ ಹರೆಯದ ಗಣಪತಿ ಶಂಬಾ ಸಾಳುಂಕೆ ಅವರು ಮತ ಚಲಾವಣೆ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಅವರು ಒಮ್ಮೆಯೂ ತಪ್ಪಿಸದೇ ಮತದಾನ ಮಾಡುತ್ತಿದ್ದಾರೆ. ಒಟ್ಟು 16 ಲೋಕಸಭಾ ಚುನಾವಣೆಗಳಲ್ಲಿ ಅವರು ಹಕ್ಕು ಚಲಾಯಿಸಿದ್ದಾರೆ. ಗಣಪತಿ ಅವರು ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ನಿವೃತ್ತರಾದವರು.

ಕರ್ನಾಟಕ ಲೋಕಸಮರ 2ನೇ ಹಂತ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?ಕರ್ನಾಟಕ ಲೋಕಸಮರ 2ನೇ ಹಂತ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಶತಾಯುಷಿಯಾದರೂ ವಯಸ್ಸು ದೇಹಕ್ಕಾಗಿದೆಯೇ ಹೊರತು, ತಮ್ಮ ಮನಸ್ಸಿಗೆ ಅಲ್ಲ ಎನ್ನುವ ಮೂಲಕ ಉತ್ಸಾಹದಿಂದಲೇ ಮಕ್ಕಳು-ಮೊಮ್ಮಕ್ಕಳೊಂದಿಗೆ ಮತಗಟ್ಟೆಗೆ ಬಂದು ಅವರು ಮತ ಚಲಾಯಿಸಿದರು. 1918 ರ ಜುಲೈ 18ರಂದು ಜನಿಸಿದ್ದ ಗಣಪತಿ ಸಾಳುಂಕೆ, ಪೊಲೀಸ್ ಇನ್ಸ್​ಪೆಕ್ಟರ್ ಆಗಿ ರಾಜ್ಯದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾದ ಬಳಿಕ ಕಾರವಾರದ ಅಸ್ನೋಟಿ ಬಳಿ ಮಕ್ಕಳ ಜೊತೆ ನೆಲೆಸಿದ್ದಾರೆ.

Centenary is voted in 16 Lok Sabha elections at Asnoti

ಫಲ ನೀಡಿದ ತಂತ್ರಾಂಶ:ಉ.ಕ.ಜಿಲ್ಲೆಯಲ್ಲಿ ಶೇ.89 ರಷ್ಟು ಅಂಗವಿಕಲರಿಂದ ಮತದಾನಫಲ ನೀಡಿದ ತಂತ್ರಾಂಶ:ಉ.ಕ.ಜಿಲ್ಲೆಯಲ್ಲಿ ಶೇ.89 ರಷ್ಟು ಅಂಗವಿಕಲರಿಂದ ಮತದಾನ

'ನಾನು ಆರಂಭದಲ್ಲಿ ಮಾಡಿದ್ದ ಮತದಾನ ಸರಿಯಾಗಿ ನೆನಪಿಲ್ಲ. ಆದರೆ ಮತದಾನದ ಚೀಟಿ ಸಿಕ್ಕ ಬಳಿಕ ತಪ್ಪದೇ ಮತದಾನ ಮಾಡಿದ್ದೇನೆ. ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆಯೂ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದೆ. ಈ ಚುನಾವಣೆಗೂ ತಪ್ಪದೇ ಮತದಾನ ಮಾಡಿದ್ದೇನೆ' ಎಂದು ಈ ವೇಳೆ ಅವರು ನುಡಿದರು. ಗಣಪತಿ ಅವರ ಆಸಕ್ತಿ ಎಲ್ಲರನ್ನು ಚಕಿತಗೊಳಿಸಿದ್ದಂತೂ ಸುಳ್ಳಲ್ಲ.

English summary
Centenary is voted in 16 Lok Sabha elections at Asnoti. Centenary Ganapati Shambha Salunke said Since 1952, I did not miss the poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X