ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಟ್ ವರ್ಕ್ ಇಲ್ಲ; ಕಾರವಾರದಲ್ಲಿ ಬಸ್ ನಿಲ್ದಾಣವೇ ಈ ಮಕ್ಕಳ ಕಲಿಕಾ ತಾಣ

|
Google Oneindia Kannada News

ಕಾರವಾರ, ಅಕ್ಟೋಬರ್ 8: ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಗೆ, ಶಿರ್ವೆ ಹಾಗೂ ಕೋವೆ ಗ್ರಾಮದಲ್ಲಿ ಈತನಕ ನೆಟ್ ವರ್ಕ್ ಸಂಪರ್ಕ ಇಲ್ಲದರಿಂದ ಗ್ರಾಮದ ವಿದ್ಯಾರ್ಥಿಗಳು, ಗ್ರಾಮಸ್ಥರು ಪರದಾಡುವಂತಾಗಿದೆ.

ಕಾರವಾರ ತಾಲೂಕಿನಿಂದ 28 ಕಿ. ಮೀ. ಇರುವ ದೇವಳಮಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 8 ಗ್ರಾಮಗಳು ಇವೆ. ಅದರಲ್ಲಿ 5 ಗ್ರಾಮದಲ್ಲಿ ನೆಟ್ ವರ್ಕ್ ಸಂಪರ್ಕ ಸಿಗಲಿದ್ದು, ಉಳಿದ ದೇವಳಮಕ್ಕಿ ಸಮೀಪದ ಗ್ರಾಮವಾದ ನಗೆ, ಶಿರ್ವೆ, ಕೋವೆ ಗ್ರಾಮದಲ್ಲಿ ಹಲವು ವರ್ಷಗಳಿಂದ ನೆಟ್ ವರ್ಕ್ ಸಂಪರ್ಕವೇ ಇಲ್ಲದಂತಾಗಿದೆ. ಮುಂದೆ ಓದಿ...

 ಗುಡ್ಡ ಹತ್ತಬೇಕು, ಕೆಸರು ರಸ್ತೆಯಲ್ಲೇ ಸಾಗಬೇಕು; ಓದಿಗೆ ಇವೆಲ್ಲ ಅಡ್ಡಿಯಾಗಲಿಲ್ಲ ಗುಡ್ಡ ಹತ್ತಬೇಕು, ಕೆಸರು ರಸ್ತೆಯಲ್ಲೇ ಸಾಗಬೇಕು; ಓದಿಗೆ ಇವೆಲ್ಲ ಅಡ್ಡಿಯಾಗಲಿಲ್ಲ

 ಬಸ್ ನಿಲ್ದಾಣದಲ್ಲೇ ಕಲಿಕೆ

ಬಸ್ ನಿಲ್ದಾಣದಲ್ಲೇ ಕಲಿಕೆ

ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ BSNL ಟವರ್ ಬಿಟ್ಟರೆ ಬೇರೆ ಯಾವುದೇ ಖಾಸಗಿ ನೆಟ್ ವರ್ಕ್ ಸಂಪರ್ಕ ಇಲ್ಲ. ಹಿಂದುಳಿದ ವರ್ಗಗಳು ಹೆಚ್ಚು ವಾಸ ಮಾಡುವ ನಗೆ, ಶಿರ್ವೆ, ಕೋವೆ ಗ್ರಾಮದಲ್ಲಿ ಪ್ರೌಢಶಾಲೆ, ಪಿಯು, ಪದವಿ ಸೇರಿ ಅಂದಾಜು 150ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಅದರಲ್ಲಿ ಕೆಲ ವಿದ್ಯಾರ್ಥಿಗಳು ಆನ್ಲೈನ್ ತರಗತಿ ಸಲುವಾಗಿ ತಮ್ಮ ಊರಿನಿಂದ ಪ್ರತಿದಿನ ಬೆಳಿಗ್ಗೆ ಕಾಲ್ನಡಿಗೆ ಅಥವಾ ಬೈಸಿಕಲ್ ಮೂಲಕ ದೇವಳಮಕ್ಕಿ ಗ್ರಾಮದಲ್ಲಿ ಬಂದು ಅಲ್ಲಿನ ಬಸ್ ತಂಗುದಾಣ, ಅಂಗಡಿ ಹಾಗೂ ತಮ್ಮ ಸ್ನೇಹಿತರ ಮನೆಯಲ್ಲಿ ಹೋಗಿ ಕುಳಿತುಕೊಂಡು ಕಲಿಯುವಂತಾಗಿದೆ.

 ಕಷ್ಟಪಟ್ಟು ಮೊಬೈಲ್ ಕೊಡಿಸಿದ ಪೋಷಕರು

ಕಷ್ಟಪಟ್ಟು ಮೊಬೈಲ್ ಕೊಡಿಸಿದ ಪೋಷಕರು

ಈ ಮೂರು ಗ್ರಾಮದ ಗ್ರಾಮಸ್ಥರು ಬಡತನ ಇದ್ದರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಕಷ್ಟಪಟ್ಟು ದುಡಿದು ಶಿಕ್ಷಣವನ್ನು ನೀಡುತ್ತಿದ್ದಾರೆ. ಈಗ ಸರಕಾರ ಕೊರೊನಾದಿಂದಾಗಿ ಆನ್ಲೈನ್ ತರಗತಿ ಪರಿಚಯಿಸಿದೆ. ಹೀಗಾಗಿ ಈ ಮೂರು ಗ್ರಾಮದ ವಿದ್ಯಾರ್ಥಿಯ ಪೋಷಕರು ತಮ್ಮ ಮಕ್ಕಳಿಗೆ ಕಷ್ಟಪಟ್ಟು ಹೊಸ ಮೊಬೈಲ್ ಖರೀದಿಸಿಕೊಟ್ಟಿದ್ದಾರೆ. ಆದರೆ ಗ್ರಾಮದಲ್ಲಿ ನೆಟ್ ವರ್ಕ್ ಸಂಪರ್ಕ ಇಲ್ಲದಿರುವುದರಿಂದ ಹೊಸ ಮೊಬೈಲ್ ಪ್ರಯೋಜನಕ್ಕೆ ಬಾರದೆ, ದಿನಗಳು ಕಳೆದಂತೆ ವಿದ್ಯಾರ್ಥಿಗಳಿಗೆ ತರಗತಿಯ ಶಿಕ್ಷಣದಲ್ಲೂ ಹಿನ್ನಡೆಯಾಗುತ್ತಿದೆ.

 ಪ್ರವಾಸಿಗರಿಗೂ ತೊಂದರೆ

ಪ್ರವಾಸಿಗರಿಗೂ ತೊಂದರೆ

ಗ್ರಾಮದಲ್ಲಿ ಸುಂದರವಾದ ಪ್ರವಾಸಿ ತಾಣಗಳೂ ಇದ್ದು, ಬೇರೆ ರಾಜ್ಯ, ಜಿಲ್ಲೆ, ತಾಲೂಕಿನಿಂದ ಪ್ರವಾಸಿಗಳು ಇಲ್ಲಿಗೆ ಬರುತ್ತಾರೆ. ಇಲ್ಲಿನ ರಮಣೀಯ ಪ್ರದೇಶ, ಚಾರಣ ಸ್ಥಳವನ್ನು ನೋಡಿ ಮನ ಮೆಚ್ಚಿದ್ದಾರೆ. ಆದರೆ ಇಲ್ಲಿ ನೆಟ್ ವರ್ಕ್ ಇಲ್ಲದೆ ಇರುವುದೇ ದೊಡ್ಡ ಸಮಸ್ಯೆಯಾಗಿದೆ.

Recommended Video

Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02
 ನೆಟ್ ವರ್ಕ್ ವ್ಯವಸ್ಥೆಗೆ ಗ್ರಾಮಸ್ಥರ ಆಗ್ರಹ

ನೆಟ್ ವರ್ಕ್ ವ್ಯವಸ್ಥೆಗೆ ಗ್ರಾಮಸ್ಥರ ಆಗ್ರಹ

ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ನೆಟ್ ವರ್ಕ್ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ಹೀಗಾಗಿ ಆದಷ್ಟು ಬೇಗನೆ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವುದೇ ಒಂದು ಗ್ರಾಮದಲ್ಲಿ ಖಾಸಗಿ ನೆಟ್ ವರ್ಕ್ ಟವರ್ ನಿರ್ಮಾಣ ಆಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

English summary
This three villages nage, shirve and kove which come under devalamakki gram panchayat of karwar have network problem and students, villagers are facing serious problem due to this,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X