ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿ ಶ್ರೀಮಾರಿಕಾಂಬಾ ದೇವಾಲಯದ ಕೋಣ ಇನ್ನಿಲ್ಲ

By ಕಾರವಾರ ಪ್ರತಿನಿಧಿ
|
Google Oneindia Kannada News

ಶಿರಸಿ, ಜುಲೈ.19: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಮಾರಿಕಾಂಬಾ ದೇವಾಲಯದ ಕೋಣ ಇಂದು ಬೆಳಗಿನ ಜಾವ ಅಸುನೀಗಿದೆ. ಕೋಣಕ್ಕೆ 25 ವರ್ಷ ವಯಸ್ಸಾಗಿತ್ತು. ಇದೇ ಕಾರಣದಿಂದಾಗಿ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಸಂಪ್ರದಾಯದಂತೆ ವಿಧಿವಿಧಾನಗಳೊಂದಿಗೆ ಬೆಳಗ್ಗೆ ಕೋಣದ ಅಂತ್ಯಕ್ರಿಯೆ ನಡೆಸಲಾಯಿತು.

ಕೋಣ ಸಾಕುವ ಹಿಂದಿನ ಇತಿಹಾಸವೇನು?
12ನೇ ಶತಮಾನದಲ್ಲಿ ಶಿರಿಯೂರು ಎಂದು ಕರೆಯಿಸಿಕೊಳ್ಳತ್ತಿದ್ದ ಶಿರಸಿಯಲ್ಲಿ ಬ್ರಾಹ್ಮಣ ಮಹಿಳೆಯೋರ್ವಳನ್ನು (ಮಾರಿಯಮ್ಮ) ಕೆಳವರ್ಗದ ಯುವಕನೋರ್ವ ಸುಳ್ಳುಹೇಳಿ ಮೋಸದಿಂದ ವಿವಾಹವಾಗುತ್ತಾನೆ.

ರಾಷ್ಟ್ರ ರಾಜಧಾನಿಯಲ್ಲೇ ಕೋಣ ಒಯ್ಯುತ್ತಿದ್ದವರ ಮೇಲೆ ಹಲ್ಲೆರಾಷ್ಟ್ರ ರಾಜಧಾನಿಯಲ್ಲೇ ಕೋಣ ಒಯ್ಯುತ್ತಿದ್ದವರ ಮೇಲೆ ಹಲ್ಲೆ

ವಿವಾಹವಾಗಿ ಕೆಲವು ವರ್ಷಗಳ ಬಳಿಕ ಅವಳಿಗೆ ಈ ವಿಷಯ ತಿಳಿದು ಬರುತ್ತದೆ. ಇದರಿಂದ ಕೆಂಡಾಮಂಡಲವಾಗುವ ಆಕೆ ಅವನನ್ನು ವಧಿಸಲು ಬೆನ್ನಟ್ಟಿ ಬರುತ್ತಾಳೆ. ಹೀಗಾಗಿ ಕೆಳ ವರ್ಗದ ಪತಿಯು ಮೊದಲು ಕೋಳಿಯ ಶರೀರದಲ್ಲಿ, ನಂತರ ಕುರಿಯ ಶರೀರದಲ್ಲಿ, ಆಮೇಲೆ ಕೋಣನ ದೇಹದಲ್ಲಿ ಸೇರಿಕೊಂಡು ಅವಿತುಕೊಳ್ಳುತ್ತಾನೆ.

Bull of Shirasi died today morning

ಆತನು ಕೋಣನ ಶರೀರದಲ್ಲಿ ಅವಿತುಕೊಂಡಿರುವುದು ತಿಳಿದು ಆಕೆ ಕೋಣವನ್ನು ಸಂಹರಿಸುವ ಮೂಲಕ ಪತಿಯ ಬಲಿ ತೆಗೆದುಕೊಳ್ಳುತ್ತಾಳೆ. ಬಳಿಕ ಮಾರಿಕಾಂಬೆಯಾಗಿ ಇಲ್ಲಿ ನೆಲೆನಿಲ್ಲುತ್ತಾಳೆ.

Bull of Shirasi died today morning

ಕೋಪಗೊಂಡ ದೇವಿಯನ್ನು ಶಾಂತಗೊಳಿಸುವ ಕಾರಣಕ್ಕಾಗಿ ದೇವಸ್ಥಾನದಲ್ಲಿ ಕೋಣ ಬಲಿಯನ್ನು ನೀಡಲು ಕೋಣವನ್ನು ಸಾಕಲಾಗುತ್ತಿತ್ತು. ಆದರೆ 1930ರಿಂದ ಕೋಣ ಬಲಿ ಇಲ್ಲಿ ‌ನಿಂತಿದೆ. ಈಗೆಲ್ಲ ಸಿರಿಂಜ್ ಮೂಲಕ ಅಲ್ಪ ರಕ್ತವನ್ನು ತೆಗೆದು ಅರ್ಪಿಸಲಾಗುತ್ತದೆ.

English summary
Bull of Shirasi died yesterday.Today morning funeral was conducted with customary procedures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X