ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಆಸ್ಪತ್ರೆಯಲ್ಲಿ ‘ಸುರಕ್ಷಿತ ಗರ್ಭಪಾತ ಸೇವೆ’?; ಗೊಂದಲ ತಂದ ಫಲಕ

|
Google Oneindia Kannada News

ಜೊಯಿಡಾ, ಜನವರಿ 23: ಗರ್ಭಪಾತ ಮಾಡಿಸುವುದು ಗಂಭೀರ ಅಪರಾಧ, ಕಾನೂನು ರೀತಿಯಲ್ಲಿ, ಕೆಲವು ಪ್ರಕರಣಗಳನ್ನು ಹೊರತುಪಡಿಸಿ ಗರ್ಭಪಾತ ಮಾಡಿದವರ, ಮಾಡಿಸಿಕೊಂಡವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರವೇ ಕಟ್ಟೆಚ್ಚರ ನೀಡಿದೆ. ಆದರೆ ಇಲ್ಲಿನ ತಾಲೂಕು ಆಸ್ಪತ್ರೆ ಎದುರಿನ ಫಲಕವೊಂದು ಗೊಂದಲ ಮೂಡಿಸುವಂತಿದೆ.

21 ವಾರಗಳ ಭ್ರೂಣವನ್ನು ತೆಗೆಯಲು ಹೈಕೋರ್ಟ್ ಸಮ್ಮತಿ, ಪ್ರಕರಣ ಏನು?21 ವಾರಗಳ ಭ್ರೂಣವನ್ನು ತೆಗೆಯಲು ಹೈಕೋರ್ಟ್ ಸಮ್ಮತಿ, ಪ್ರಕರಣ ಏನು?

ತಾಲೂಕು ಆಸ್ಪತ್ರೆ ಎದುರು ತೂಗಿಹಾಕಿರುವ 'ಸುರಕ್ಷಿತ ಗರ್ಭಪಾತ ಸೇವೆ ಲಭ್ಯ" ಎಂಬ ಮಾಹಿತಿ ಫಲಕವನ್ನು ಹಾಕಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಈ ಫಲಕ ಏನನ್ನು ಹೇಳಲು ಹೊರಟಿದೆ ಎಂದೇ ನೋಡಿದವರಿಗೆ ಅಚ್ಚರಿ ಮೂಡಿಸಿದೆ.

 ಗರ್ಭಪಾತ ನಿಷೇಧದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಾಗೃತಿ

ಗರ್ಭಪಾತ ನಿಷೇಧದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಾಗೃತಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗರ್ಭಪಾತ ನಿಷೇಧದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಆರೋಗ್ಯ ಇಲಾಖೆ ಸುರಕ್ಷಿತ ಗರ್ಭಪಾತ ಸೇವೆ ಲಭ್ಯವಿರುವ ಬಗ್ಗೆ ಪ್ರಚಾರ ನಡೆಸುತ್ತಿದೆ. ಕಾನೂನಿನ ಪ್ರಕಾರ ಆರು ಬಗೆಯ ಪ್ರಕರಣಗಳಲ್ಲಿ ಮಾತ್ರ ಗರ್ಭಪಾತಕ್ಕೆ ಅವಕಾಶ ನೀಡಲಾಗಿದ್ದು, ಅದರಲ್ಲಿ ಮುಖ್ಯವಾಗಿ ತಾಯಿ ಅಥವಾ ಮಗುವಿನ ಜೀವಕ್ಕೆ ಅಪಾಯ ಇದ್ದರೆ ಸುರಕ್ಷಿತ ಗರ್ಭಪಾತ ಮಾಡಿಸಬಹುದು ಎಂದು ಕುಟುಂಬ ಕಲ್ಯಾಣಾಧಿಕಾರಿ ಅನ್ನಪೂರ್ಣ ವಸ್ತದ್ ತಿಳಿಸಿದರು.

 ನಾಮಫಲಕ ಹಾಕುವಂತಿಲ್ಲ

ನಾಮಫಲಕ ಹಾಕುವಂತಿಲ್ಲ

ಸುರಕ್ಷಿತ ಗರ್ಭಪಾತಕ್ಕೆ ತಜ್ಞ ವೈದ್ಯರ ವರದಿ ಕಡ್ಡಾಯವಾಗಿದ್ದು, ಗರ್ಭ ಧರಿಸಿದ 2 ತಿಂಗಳ ನಂತರ ಯಾವುದೇ ರೀತಿಯಲ್ಲಿಯೂ ಗರ್ಭಪಾತಕ್ಕೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಸುರಕ್ಷಿತ ಗರ್ಭಪಾತ ಮಾಡುವ ಬಗ್ಗೆಯೂ ಆಸ್ಪತ್ರೆಗಳಲ್ಲಿ ನಾಮಫಲಕ ಅಳವಡಿಸುವಂತಿಲ್ಲ ಎಂದು 104ರ ಸಹಾಯವಾಣಿಯಲ್ಲಿ ಮಾಹಿತಿ ನೀಡಲಾಗುತ್ತಿದೆ.

ಕನ್ನಡತಿ ಸವಿತಾ ಬಲಿದಾನದಿಂದ ಬದಲಾಯಿತು ಐರ್ಲೆಂಡ್‌ ಕಾನೂನುಕನ್ನಡತಿ ಸವಿತಾ ಬಲಿದಾನದಿಂದ ಬದಲಾಯಿತು ಐರ್ಲೆಂಡ್‌ ಕಾನೂನು

 ನಾಮಫಲಕದ ಕುರಿತು ಇಲಾಖೆ ಉಪನಿರ್ದೇಶಕರ ವಿಚಾರಣೆ

ನಾಮಫಲಕದ ಕುರಿತು ಇಲಾಖೆ ಉಪನಿರ್ದೇಶಕರ ವಿಚಾರಣೆ

ಅತ್ಯಾಚಾರ ಪ್ರಕರಣಗಳಲ್ಲಿ ಕೂಡ ಗರ್ಭಪಾತ ಮಾಡಿಸುವುದು ತಪ್ಪಾಗುತ್ತದೆ. ಸುರಕ್ಷಿತ ಗರ್ಭಪಾತದ ಬಗ್ಗೆ ಆರೋಗ್ಯ ಇಲಾಖೆ ನಾಮಫಲಕ ಹಾಕಿರುವುದು ಅಚ್ಚರಿಯ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜೇಂದ್ರ ಬೇಕಲ್ ಹೇಳಿದರು. ಗರ್ಭಪಾತ ಸೇವೆ ಲಭ್ಯವಿರುವ ಬಗ್ಗೆ ನಾಮಫಲಕ ಹಾಕಿದ ಕುರಿತು ವಿಚಾರಣೆ ನಡೆಸುವುದಾಗಿ ಅವರು ತಿಳಿಸಿದರು. ಒಟ್ಟಿನಲ್ಲಿ ಎರಡು ಇಲಾಖೆಗಳ ಸಮನ್ವಯ ಕೊರತೆ ಹಾಗೂ ಕಾಯ್ದೆ ಕುರಿತು ಅರಿವಿಲ್ಲದ ಕಾರಣ ಸುರಕ್ಷಿತ ಗರ್ಭಪಾತ ಮಾಡಿಸುವ ನಾಮಫಲಕ ಗೊಂದಲ ಹುಟ್ಟಿಸಿದೆ.

 ಕುಮಟಾ-ಹೊನ್ನಾವರದಲ್ಲಿ ಅತಿ ಹೆಚ್ಚು ಪ್ರಮಾಣದ ಗರ್ಭಪಾತ

ಕುಮಟಾ-ಹೊನ್ನಾವರದಲ್ಲಿ ಅತಿ ಹೆಚ್ಚು ಪ್ರಮಾಣದ ಗರ್ಭಪಾತ

ಉತ್ತರ ಕನ್ನಡ ಜಿಲ್ಲೆಯಲ್ಲಿ 33 ತಿಂಗಳ ಅವಧಿಯಲ್ಲಿ 4,592 ಜನರಿಗೆ ವೈದ್ಯಕೀಯ ವಿಧಾನಗಳ ಮೂಲಕ ಗರ್ಭಪಾತ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗಿಂತಲೂ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗರ್ಭಪಾತ ಪ್ರಕರಣಗಳು ನಡೆದಿವೆ. 2017-18ರ ಸಾಲಿನಲ್ಲಿ 1444, 2018-19ರ ಸಾಲಿನಲ್ಲಿ 1980 ಹಾಗೂ 2019ರ ಡಿಸೆಂಬರ್ ವರೆಗೆ 1168 ಗರ್ಭಿಣಿಯರು ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಕುಮಟಾ- ಹೊನ್ನಾವರದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಗರ್ಭಪಾತ ಪ್ರಕರಣಗಳು ವರದಿಯಾಗಿವೆ.

English summary
The board infront of joida government hospital is confusing. The board having "The Safe Abortion Service is available" is creating confusion in people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X