ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ ಕಡಲ ತೀರದಲ್ಲಿ 2 ಭಾಗವಾಗಿ ಬಿದ್ದಿದ್ದ ನೀಲಿ ತಿಮಿಂಗಿಲ ಕಳೇಬರ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಫೆಬ್ರವರಿ 19 : ಇಲ್ಲಿನ ಟಾಗೋರ್ ಕಡಲತೀರದ ರಾಕ್ ಗಾರ್ಡನ್ ಸಮೀಪ ಮತ್ತು ದಿವೇಕರ ಕಾಲೇಜ್ ಹಿಂಭಾಗದಲ್ಲಿ ಮೃತ ತಿಮಿಂಗಿಲದ ಎರಡು ಭಾಗಗಳು ಭಾನುವಾರ ಪತ್ತೆಯಾಗಿವೆ. 15 ಮೀಟರ್ ಉದ್ದವಿದ್ದ ನೀಲಿ ತಿಮಿಂಗಿಲದ (ಬ್ಲೂ ವ್ಹೇಲ್) ಕಳೇಬರವನ್ನು ತೀರದಲ್ಲಿಯೇ ಹೂಳಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಹೆಚ್ಚಾಗಿ ಕಂಡುಬರುವ ನೀಲಿ ತಿಮಿಂಗಿಲ ಅಥವಾ ಬಲೇನ್ ವ್ಹೇಲ್ ತಳಿಯ ತಿಮಿಂಗಿಲ ಇದಾಗಿದೆ. ತಿಮಿಂಗಿಲದ ಮೃತದೇಹ ಎರಡು ಬೇರೆ ಬೇರೆ ಭಾಗಗಳಾಗಿ ಬಿದ್ದಿದ್ದವು. ಒಂದು ಭಾಗ ರಾಕ್ ಗಾರ್ಡನ್ ಬಳಿ ತೀರದಲ್ಲಿ ದೊರೆತಿದ್ದರೆ, ಮತ್ತೊಂದು ಭಾಗ ದಿವಾಕರ ವಾಣಿಜ್ಯ ಕಾಲೇಜಿನ ಹಿಂಭಾಗದಲ್ಲಿ ಪತ್ತೆಯಾಗಿತ್ತು.

ಕಾರವಾರ ಕಡಲ ತೀರದಲ್ಲಿ ತೇಲಿತು ಮೂರು ಮೀಟರ್ ಉದ್ದದ ಡಾಲ್ಫಿನ್ ಕಳೇಬರಕಾರವಾರ ಕಡಲ ತೀರದಲ್ಲಿ ತೇಲಿತು ಮೂರು ಮೀಟರ್ ಉದ್ದದ ಡಾಲ್ಫಿನ್ ಕಳೇಬರ

ದೇಹಕ್ಕೆ ಹಳದಿ ಬಣ್ಣದ ಪ್ಲಾಸ್ಟಿಕ್ ಹಗ್ಗ ಬಿಗಿದುಕೊಂಡಿತ್ತು. ಕಳೇಬರ ದೊರೆತ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಕಡಲಜೀವಶಾಸ್ತ್ರ ಅಧ್ಯಯನ ಕೇಂದ್ರದ ಶಿವಕುಮಾರ್ ಹರಗಿ ನೇತೃತ್ವದ ತಂಡ, 14 ರಿಂದ 16 ವರ್ಷ ಪ್ರಾಯದ ತಿಮಿಂಗಿಲ ಇರಬಹುದು ಎಂದು ಅಂದಾಜಿಸಿದ್ದಾರೆ.

Blue wale corpse found in Karwar beach

ಸಂಪೂರ್ಣ ಕೊಳೆತ ಅವಸ್ಥೆಯಲ್ಲಿ ಇದ್ದದರಿಂದ ಸಾವಿಗೆ ಸ್ಪಷ್ಟ ಕಾರಣ ತಿಳಿಯಲು ಕಷ್ಟವಾಗಿದೆ ಎಂದು ತಂಡ ತಿಳಿಸಿದೆ. ಆದರೆ ಸುಮಾರು 3 ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ದೊಡ್ಡ ಗಾತ್ರದ ತಿಮಿಂಗಿಲದ ಕಳೇಬರವನ್ನು ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಡಲತೀರದಲ್ಲಿ ಹೂತಿದ್ದಾರೆ. ಕಳೇಬರವನ್ನು ಸಾಗಿಸಲು ನಗರಸಭೆ ಮತ್ತು ರಾಕ್ ಗಾರ್ಡನ್ ಕಾಮಗಾರಿ ನಡೆಯುವ ಸ್ಥಳದಲ್ಲಿದ್ದ ಜೆಸಿಬಿ ಬಳಸಿಕೊಳ್ಳಲಾಯಿತು.

ಕಡಲತೀರದಲ್ಲಿ ಎರಡು ಭಾಗವಾಗಿ ದೊರೆತ ತಿಮಿಂಗಿಲದ ದೇಹಕ್ಕೆ ಹಳದಿ ಬಣ್ಣದ ಹಗ್ಗ ಬಿಗಿದುಕೊಂಡಿತ್ತು. ಸಮುದ್ರದಲ್ಲಿ ತೇಲುತ್ತಿದ್ದ ಕಳೇಬರವನ್ನು ಮೀನುಗಾರಿಕಾ ಬೋಟ್ ನವರು ಹಗ್ಗ ಕಟ್ಟಿ ದಡಕ್ಕೆ ತಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

English summary
Blue wale corpse found in Karwar beach on Sunday. There was suspicion of killing blue wale. It was cremated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X