ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೀಳ್ಮಾತಿ ತೀರದಲ್ಲಿ ಬರಿದಾಗುತ್ತಿದೆ ಕಪ್ಪು ಮರಳು; ಅಕ್ರಮವಾಗಿ ಒಯ್ಯುತ್ತಿರುವ ಪ್ರವಾಸಿಗರು

|
Google Oneindia Kannada News

ಕಾರವಾರ, ಜನವರಿ 30: ವಿಶ್ವದಲ್ಲೇ ಅತಿ ವಿರಳವಾಗಿರುವ, ದೇಶದ ಏಕೈಕ ಕಪ್ಪು ಮರಳಿನ ಕಡಲತೀರ ಕಾರವಾರ ತಾಲೂಕಿನ ಮಾಜಾಳಿಯಲ್ಲಿದೆ. ಕಪ್ಪು ಮರಳಿಗಾಗಿಯೇ ಪ್ರಸಿದ್ಧಿಯಾಗಿರುವ ಇಲ್ಲಿನ ತೀಳ್ಮಾತಿ ನೋಡಲು ಬರುವ ಪ್ರವಾಸಿಗರು ಇಲ್ಲಿಂದ ಮರಳನ್ನು ಒಯ್ಯುತ್ತಿದ್ದಾರೆನ್ನಲಾಗಿದ್ದು, ಕಡಲತೀರದಿಂದ ಕಪ್ಪು ಮರಳು ಬರಿದಾಗುತ್ತಿದೆ.

ಕಾರವಾರದಿಂದ ಎಂಟು ಕಿ.ಮೀ ದೂರದಲ್ಲಿರುವ ತೀಳ್ಮಾತಿ ಕಡಲತೀರವು, ಮೀನುಗಾರರೇ ಹೆಚ್ಚಾಗಿ ವಾಸವಾಗಿರುವ ಮಾಜಾಳಿ ಗ್ರಾಮದಲ್ಲಿದೆ. ಕಪ್ಪು ಮರಳಿಗೆ ಹೆಸರುವಾಸಿಯಾದ ಈ ತೀರಕ್ಕೆ ಯಾವುದೇ ರಕ್ಷಣೆಯಿಲ್ಲ.

ಕೆಐಡಿಬಿ ಸ್ವಾಧೀನಪಡಿಸಿಕೊಂಡಿರುವ ಜಮೀನು ಬಳಕೆಗೆ ಕ್ರಮ; ಮುಡಗೇರಿಯಲ್ಲಿ ನೌಕಾನೆಲೆ ಕೈಗಾರಿಕಾ ವಸಾಹತುಕೆಐಡಿಬಿ ಸ್ವಾಧೀನಪಡಿಸಿಕೊಂಡಿರುವ ಜಮೀನು ಬಳಕೆಗೆ ಕ್ರಮ; ಮುಡಗೇರಿಯಲ್ಲಿ ನೌಕಾನೆಲೆ ಕೈಗಾರಿಕಾ ವಸಾಹತು

ಇದಕ್ಕೆ ಗುಡ್ಡಗಳನ್ನು ಇಳಿದು ಸಾಗಬೇಕಾಗಿದ್ದು, ಹೀಗಾಗಿ ಇಲ್ಲಿ ಮೀನುಗಾರಿಕೆಗೆ ಮಾತ್ರ ಮೀನುಗಾರರು ಇರುತ್ತಾರೆಯೇ ಹೊರತು ಬಾಕಿ ಸಮಯದಲ್ಲಿ ಯಾರೂ ಇರುವುದಿಲ್ಲ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಸಮಯ ಕಳೆಯುತ್ತಾರೆ. ರಾತ್ರಿ ಹೊತ್ತಿನಲ್ಲಿ ಇದು ನಿರ್ಜನ ಪ್ರದೇಶವಾಗಿದೆ.

Karwar: Black Sand Draining On The Thilmati Beach; Tourists Who Carring Illegally

ಹೀಗಾಗಿ ಇಲ್ಲಿಂದ ಇತ್ತೀಚಿನ ದಿನಗಳಲ್ಲಿ ಕಪ್ಪು ಮರಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ತಮ್ಮ‌ ಮನೆಯಲ್ಲಿ ಅಕ್ವೇರಿಯಂಗೆ ಬಳಸಲು ಹಾಗೂ ಕೆಲವು ಅಕ್ವೇರಿಯಂ ವ್ಯಾಪಾರಸ್ಥರು ಲಾಭಕ್ಕಾಗಿ ಇಲ್ಲಿಂದ ಕಪ್ಪು ಮರಳು ಸಾಗಾಟ ಮಾಡುತ್ತಿದ್ದಾರೆನ್ನಲಾಗಿದೆ. ಈ ತೀರ ಗೋವಾಕ್ಕೆ ಹೊಂದುಕೊಂಡಿದ್ದು, ಆ ಭಾಗದಿಂದಲೂ ಸಾಕಷ್ಟು ಜನ ದೋಣಿಯ ಮೇಲೆ ಬಂದು ಚೀಲಗಟ್ಟಲೆ ಮರಳನ್ನು ಒಯ್ಯುತ್ತಿದ್ದಾರೆಂದು ಸ್ಥಳೀಯ ಕೆಲ ಮೀನುಗಾರರು ಆರೋಪಿಸಿದ್ದಾರೆ.

Karwar: Black Sand Draining On The Thilmati Beach; Tourists Who Carring Illegally

ತಜ್ಞರ ಪ್ರಕಾರ, ಕಪ್ಪು ಇಗ್ನಾಸಿಯಸ್ ಬಂಡೆಗಳ ಸವೆತದಿಂದಾಗಿ ಈ ಕಡಲತೀರ ರೂಪುಗೊಂಡಿದ್ದು, ಇಲ್ಲಿ ಕಪ್ಪು ಎಳ್ಳಿನಂತೆ ಹೋಲುವ ಸಣ್ಣ ಜಲ್ಲಿಕಲ್ಲುಗಳು ಕಾಣಸಿಗುತ್ತವೆ. ಹೀಗಾಗಿ ಸ್ಥಳೀಯರು ಇದನ್ನು ತೀಳ್ (ಎಳ್ಳು) ಮಾತಿ ಎಂದು ಹೆಸರಿಸಿದ್ದಾರೆ ಎನ್ನಲಾಗಿದೆ.

English summary
Travelers coming to see the Thilmati in Karwar, which are famous for their black sand, are carrying black sand from here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X