ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಳಿಯಾಳದ ವ್ಯಕ್ತಿಯಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣ, ಆಸ್ಪತ್ರೆಗೆ ದಾಖಲು

By ದೇವರಾಜ್ ನಾಯ್ಕ್
|
Google Oneindia Kannada News

ಕಾರವಾರ, ಮೇ 23; ದೇಶದಲ್ಲಿ ಆತಂಕ ಸೃಷ್ಟಿಸಿರುವ ಬ್ಲ್ಯಾಕ್ ಫಂಗಸ್ ರೋಗವು ಉತ್ತರ ಕನ್ನಡ ಜಿಲ್ಲೆಯಲ್ಲೂ ಕಾಣಿಸಿಕೊಂಡಿದೆ ಎಂಬ ಗುಮಾನಿ ಹಬ್ಬಿದೆ. ಹಳಿಯಾಳ ಮೂಲದ ವ್ಯಕ್ತಿಯೊಬ್ಬರಲ್ಲಿ ರೋಗ ಲಕ್ಷಣ ಕಂಡುಬಂದಿದ್ದು, ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್ ಸೋಂಕಿತರಿಗೆ ನೀಡುವ ಸ್ಟಿರಾಯ್ಡ್ ನಿಂದಾಗಿ ಹಾಗೂ ಮಧುಮೇಹ ರೋಗಿಗಳಲ್ಲಿ ಈ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಹಳಿಯಾಳದ ಈ ಪ್ರಕರಣ ಇದಕ್ಕೆ ಭಿನ್ನವಾಗಿದೆ. ಮೂಲತಃ ಹಳಿಯಾಳ ತಾಲೂಕಿನ ಗುಂಡೊಳ್ಳಿಯ ನಿವಾಸಿಯಾಗಿರುವ, ವೃತ್ತಿಯಲ್ಲಿ ಟೈಲರ್ ಆಗಿರುವ ಈತ ಈ ಮೊದಲು ಆಸ್ಪತ್ರೆಗೆ ದಾಖಲಾದವನಲ್ಲ.

ಗಾಳಿ ಮೂಲಕವೂ ಬ್ಲ್ಯಾಕ್ ಫಂಗಸ್ ಹರಡುತ್ತದೆ: ಏಮ್ಸ್ ವೈದ್ಯರುಗಾಳಿ ಮೂಲಕವೂ ಬ್ಲ್ಯಾಕ್ ಫಂಗಸ್ ಹರಡುತ್ತದೆ: ಏಮ್ಸ್ ವೈದ್ಯರು

ಮೇ 22ರಂದು ಕೋವಿಡ್ ಸೋಂಕು ದೃಢಪಟ್ಟು ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತನ ಕಣ್ಣು, ಮುಖದ ಮೇಲೆ ಬ್ಲ್ಯಾಕ್ ಫಂಗಸ್ ಹೋಲಿಕೆಯ ಒಂದಷ್ಟು ಲಕ್ಷಣ ಕಂಡು ಬಂದಿದೆ.

Black Fungus Symptoms Found In Haliyal Based Man

ಹೀಗಾಗಿ ತಾಲೂಕು ಆರೋಗ್ಯಾಧಿಕಾರಿಗಳು ಶಂಕೆಯ ಮೇಲೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ರವಾನಿಸಿದ್ದಾರೆ. ಆದರೆ ಬ್ಲ್ಯಾಕ್ ಫಂಗಸ್‌ಗೆ ಸಂಬಂಧಿಸಿದ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಪಟ್ಟಿಯಲ್ಲಿ ಕ್ರಿಮ್ಸ್ ಇಲ್ಲದ ಕಾರಣ ಹಾಗೂ ಮುಂದಿನ ಚಿಕಿತ್ಸೆ ಕೈಗೊಳ್ಳಲು ಎಂಆರ್ ಐ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದ ಕಾರಣ ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ರವಾನಿಸಿ, ಕೋವಿಡ್ ವಾರ್ಡ್‌ಗೆ ದಾಖಲಿಸಲಾಗಿದೆ.

ಆತಂಕ ಬೇಡ: ವೈಟ್ ಫಂಗಸ್ ಬ್ಲ್ಯಾಕ್ ಫಂಗಸ್ ಅಷ್ಟು ಅಪಾಯಕಾರಿಯಲ್ಲಆತಂಕ ಬೇಡ: ವೈಟ್ ಫಂಗಸ್ ಬ್ಲ್ಯಾಕ್ ಫಂಗಸ್ ಅಷ್ಟು ಅಪಾಯಕಾರಿಯಲ್ಲ

ಸೋಂಕಿತ ಈ ಮೊದಲು ಮಧುಮೇಹದ ರೋಗಿ ಆಗಿರಲಿಲ್ಲ. ಆದರೆ ಸೋಂಕಿತರಾದ ಬಳಿಕ ಹಳಿಯಾಳದಲ್ಲಿ ಪರೀಕ್ಷೆಗೊಳಪಡಿಸಿದಾಗ ಮಧುಮೇಹ ಇರುವುದು ಕೂಡ ಪತ್ತೆಯಾಗಿದೆ. ರೈತನಾಗಿರುವ ಈತ ಈವರೆಗೆ ಯಾವುದೇ ಸ್ಟಿರಾಯ್ಡ್ ಅನ್ನು ಕೂಡ ಪಡೆದಿಲ್ಲ.

ಬ್ಲ್ಯಾಕ್ ಫಂಗಸ್; ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್‌ಡಿಕೆ ಬ್ಲ್ಯಾಕ್ ಫಂಗಸ್; ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್‌ಡಿಕೆ

ಆರೋಗ್ಯವಾಗಿದ್ದಾನೆ; ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, "ಈವರೆಗೆ ಇದು ಬ್ಲ್ಯಾಕ್ ಫಂಗಸ್ ಪ್ರಕರಣ ಎಂದು ಅಧಿಕೃತವಾಗಿ ತಿಳಿದುಬಂದಿಲ್ಲ. ಸೋಂಕಿತನ ತಪಾಸಣೆ ಮುಂದುವರಿದಿದೆ. ಮಂಗಳೂರಿನ ವೈದ್ಯರುಗಳೊಂದಿಗೂ ನಾವು ನಿರಂತರ ಸಂಪರ್ಕದಲ್ಲಿದ್ದೇವೆ" ಎಂದು ತಿಳಿಸಿದ್ದಾರೆ.

"ಸೋಂಕಿತ ಆರೋಗ್ಯವಂತನಾಗಿದ್ದು, ಇನ್ಯಾವುದೇ ಸಮಸ್ಯೆಗಳನ್ನು ಹೊಂದಿಲ್ಲ‌. ಆದರೆ ಆತನಿಗೆ ಒಂದು ಕಣ್ಣನ್ನು ಮಾತ್ರ ತೆರೆಯಲು ಆಗುತ್ತಿಲ್ಲ ಎಂದು ತಿಳಿದುಬಂದಿದೆ. ಕಣ್ಣಿನಲ್ಲಿ ಉರಿ ಇದೆ ಎಂದು ವೈದ್ಯರಿಗೆ ತಿಳಿಸಿದ್ದಾನೆ" ಎಂದು ಹೇಳಿದ್ದಾರೆ.

ಕಂಟೈನ್ಮೆಂಟ್ ಝೋನ್; "ಈ ಪ್ರಕರಣ ಪತ್ತೆಯಾದ ಬಳಿಕ ಹಳಿಯಾಳ ತಾಲೂಕಿನ ಗುಂಡೊಳ್ಳಿ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಎಂದು ಇಂದು ಘೋಷಿಸಲಾಗಿದೆ. ಒಂದುವೇಳೆ ಇದು ಬ್ಲ್ಯಾಕ್ ಫಂಗಸ್ ಎಂದು ದೃಢಪಟ್ಟರೂ ಅದು ಗಾಳಿಯಲ್ಲಿ ಹರಡುವಂಥದ್ದಲ್ಲ. ಅದು ಆ ಸೋಂಕಿತನಲ್ಲಿ ಮಾತ್ರ ಇರುವುದಾಗಿರುತ್ತದೆ" ಎಂದು ವಿದ್ಯಾಶ್ರೀ ತಿಳಿಸಿದ್ದಾರೆ.

"ಬ್ಲ್ಯಾಕ್ ಫಂಗಸ್ ಸೋಂಕಿತರಾದ ಬಳಿಕ ಸ್ಟಿರಾಯ್ಡ್ ನೀಡಿದ ನಂತರ ಸೋಂಕಿತರಲ್ಲಿ ಕಂಡುಬರುತ್ತಿತ್ತು. ಆದರೆ ಈ ಪ್ರಕರಣದಲ್ಲಿ ಈತ ಆಸ್ಪತ್ರೆಗೆ ಬಂದಿರುವುದೇ ಈಗ. ಕೋವಿಡ್ ಲಕ್ಷಣ ಕಂಡುಬಂದ ಬಳಿಕ ಆಸ್ಪತ್ರೆಗೆ ಬಂದಾಗ ಲಕ್ಷಣ ಕಂಡುಬಂದಿದೆ. ಈತನಿಗೆ ಕೋವಿಡ್ ಚಿಕಿತ್ಸೆ ಕೂಡ ಪ್ರಾರಂಭವಾಗಿರಲಿಲ್ಲ. ಡಯಾಬಿಟಿಸ್ ಇರುವುದು ಕೂಡ ಈಗ ಗೊತ್ತಾಗಿದೆ. ಹೀಗಾಗಿ ಇದು ಸ್ವಲ್ಪ ವಿಭಿನ್ನ ಪ್ರಕರಣವಾಗಿದೆ" ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.

Recommended Video

Yediyurappa ಕೊರೊನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ | Oneindia Kannada

ಇನ್ನು ಸೋಂಕಿತನಿಗೆ ಈ ರೀತಿಯ ಬ್ಲ್ಯಾಕ್ ಫಂಗಸ್ ಲಕ್ಷಣ ಕಂಡುಬಂದು ಕಾರವಾರ ಕ್ರಿಮ್ಸ್ ಗೆ ರವಾನಿಸಿದ ಬಳಿಕ, ಆಸ್ಪತ್ರೆಯಲ್ಲಿರುವ ಸೋಂಕಿತನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ‌.

English summary
Uttara Kannada district Haliyal taluk man found the symptoms of black fungus. Now he is under treatment at Wenlock hospital Covid ward.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X