ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂಗೆ ಉತ್ತರ ಕನ್ನಡ ಬಿಜೆಪಿಯಿಂದ #GoBackKumaraswamy ಸ್ವಾಗತ!

By ಕಾರವಾರ ಪ್ರತಿನಿಧಿ
|
Google Oneindia Kannada News

Recommended Video

ಮುಖ್ಯಮಂತ್ರಿಯನ್ನೂ ಬಿಡಲಿಲ್ಲ ಗೋ ಬ್ಯಾಕ್ ಅಭಿಯಾನ..! | Oneindia Kannada

ಕಾರವಾರ, ಏಪ್ರಿಲ್ 04:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ತಡರಾತ್ರಿ (ಏಪ್ರಿಲ್ 03) ಉಡುಪಿ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಬಂದು ವಾಸ್ತವ್ಯ ಹೂಡಿದ್ದಾರೆ.

ಇಂದು ಗುರುವಾರ 11 ಗಂಟೆಯ ಸುಮಾರಿಗೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಅವರ ನಾಮಪತ್ರ ಸಲ್ಲಿಕೆಯ ಬಳಿಕ, ಮೈತ್ರಿ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಈ ನಡುವೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು #GoBackKumaraswamy ಅಭಿಯಾನ ಆರಂಭಿಸಿದ್ದಾರೆ. ಫೇಸ್ಬುಕ್ ಹಾಗೂ ಟ್ವಿಟರ್ ಗಳಲ್ಲಿ ಈ ಹ್ಯಾಷ್ ಟ್ಯಾಗ್ ಬಳಸಿ, ಕುಮಾರಸ್ವಾಮಿಯವರು ಜಿಲ್ಲೆಯಿಂದ ವಾಪಸ್ ಆಗಿ ಎಂದು ಒತ್ತಾಯ ಹೇರುತ್ತಿದ್ದಾರೆ.

BJP activists in Uttara Kannada district have started campaigning #GoBackKumaraswamy

ಕಾರಣವೇನು?
ಅಧಿಕಾರಕ್ಕೆ ಬಂದ ಎರಡು ತಿಂಗಳ ಒಳಗೇ ಉತ್ತರ ಕನ್ನಡ ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆಯನ್ನು ಬಗೆಹರಿಸುವುದಾಗಿ ಎಚ್.ಡಿ.ಕುಮಾರಸ್ವಾಮಿಯವರು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕುಮಟಾಕ್ಕೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಆಶ್ವಾಸನೆ ಕೊಟ್ಟಿದ್ದರು.

ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

ಆದರೆ, ಈವರೆಗೆ ಅವರಾಗಲಿ, ಅವರ ಸಂಪುಟದ ಸಚಿವರಾಗಲಿ, ಯಾರೂ ಕೂಡ ಜಿಲ್ಲೆಗೆ ಈವರೆಗೆ ಕಾಲಿಟ್ಟಿಲ್ಲ. ಜಿಲ್ಲೆಯಲ್ಲಿ ಅತಿಕ್ರಮಣದಾರರ ಸಮಸ್ಯೆ ವರ್ಷದಿಂದ ವರ್ಷಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಅತಿಕ್ರಮಣದಾರರ ಅರ್ಜಿ ಸಲ್ಲಿಕೆಯಾಗಿರುವುದು 87625. ಅದರಲ್ಲಿ 65220 ಅರ್ಜಿ ತಿರಸ್ಕೃತವಾಗಿದೆ. ಸಾಕಷ್ಟು ಹೋರಾಟಗಳು ನಡೆದರು ಕೂಡ ಈವರೆಗೆ ಈ ಸಮಸ್ಯೆ ಬಗೆಹರಿದಿಲ್ಲ.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ಸುಳ್ಳು ಹೇಳದೇ ಮರಳಿ‌ ಹೋಗಿ

ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಈ ಬಾರಿಯಾದರೂ ಸುಳ್ಳು ಹೇಳದೇ ಮರಳಿ ಹೋಗಿ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಮಾಧ್ಯಮ‌ ಸಂಚಾಲಕ ನಾಗರಾಜ ನಾಯಕ ಹೇಳಿದ್ದಾರೆ.

ಚುನಾವಣಾ ಸಮಯದಲ್ಲಿ ಬಂದು ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ, ಅವರ ಶಾಪಕ್ಕೆ ಗುರಿಯಾಗದೇ ವಾಪಸ್ ತೆರಳಿ ಎಂದು ಅವರು ಸಲಹೆ ನೀಡಿದ್ದಾರೆ.

English summary
BJP activists in Uttara Kannada district have started campaigning #GoBackKumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X