ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಭಟ್ಕಳ ಭಾರತದ ಮಿನಿ ಪಾಕಿಸ್ತಾನ'; ಕಿಡಿ ಹೊತ್ತಿಸಿದ ಟ್ವೀಟ್

|
Google Oneindia Kannada News

ಕಾರವಾರ, ಡಿಸೆಂಬರ್ 03: 'ಕರ್ನಾಟಕದ ಭಟ್ಕಳ ಭಾರತದ ಮಿನಿ ಪಾಕಿಸ್ತಾನ' ಎಂದು ಮಹಿಳೆಯೊಬ್ಬರು ಟ್ವೀಟ್ ಮಾಡಿರುವುದು ಇದೀಗ ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.

ಮೌನಾ ಅಡಿಗ ಎಂಬ ಟ್ವಿಟರ್ ಹ್ಯಾಂಡಲ್ ನ ಉಷಾ ಎನ್ನುವವರು ದಿನದ ಹಿಂದೆ ಈ ರೀತಿ ಟ್ವೀಟ್ ಮಾಡಿದ್ದು, 'ಕರ್ನಾಟಕದಲ್ಲಿನ ಭಟ್ಕಳ ಭಾರತದ ಮಿನಿ ಪಾಕಿಸ್ತಾನ. ಇಲ್ಲಿ ಮುಸ್ಲಿಂ ಸಮುದಾಯ ಬಹುಸಂಖ್ಯೆಯಲ್ಲಿದ್ದಾರೆ. ಭಾರತದ ಯಾವುದೇ ನಿಯಮಗಳು ಇಲ್ಲಿ ಅನ್ವಯವಾಗುವುದಿಲ್ಲ. ಮಾಸ್ಕ್, ಹೆಲ್ಮೆಟ್ ಧರಿಸುವುದಿಲ್ಲ. ಭಾರತದ ಯಾವುದೇ ಆದೇಶಗಳಿಗೆ ಇಲ್ಲಿ ಬೆಲೆ ಇಲ್ಲ. ಇಲ್ಲಿನ ಪೊಲೀಸರು ಕಿವುಡು ಮತ್ತು ಮೂಗರು. ಯಾರೂ ಕೂಡ ಅವರಿಗೆ ಬೆಲೆ ನೀಡುವುದಿಲ್ಲ. ನಾನು ಎಲ್ಲಿಗೆ ಬಂದೆ ಎನ್ನುವುದೇ ನನಗೆ ಆಶ್ಚರ್ಯ ಉಂಟು ಮಾಡಿತು' ಎಂದು ಟ್ವೀಟಿಸಿದ್ದಾರೆ. ಮುಂದೆ ಓದಿ...

 400ಕ್ಕೂ ಹೆಚ್ಚು ಬಾರಿ ರಿಟ್ವೀಟ್

400ಕ್ಕೂ ಹೆಚ್ಚು ಬಾರಿ ರಿಟ್ವೀಟ್

ಈ ಟ್ವೀಟ್ 400ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದ್ದು, ಅಷ್ಟೇ ಪ್ರತಿಕ್ರಿಯೆಗಳು ಕೂಡ ಬಂದಿವೆ. ಈ ಪೈಕಿ ಎನ್.ಎಸ್.ಶಾನಭಾಗ ಎನ್ನುವವರು ಪ್ರತಿಕ್ರಿಯೆ ನೀಡಿ, ಇಲ್ಲಿ ಕೆಲವರು ಹೊಸಬರಾಗಿರುವುದರಿಂದ ಹಾಗನ್ನಿಸುತ್ತದೆ. ಆದರೆ, ಭಟ್ಕಳದಲ್ಲಿ ಬಿಜೆಪಿ ಶಾಸಕ, ಬಿಜೆಪಿ ಸಂಸದರಿದ್ದಾರೆ. ಅತಿದೊಡ್ಡ ರಥಯಾತ್ರೆ, ಎಂಟು ಹನುಮಾನ್ ಮಂದಿರ, ಸಾಕಷ್ಟು ಐತಿಹಾಸಿಕ ತಾಣಗಳು ಹಾಗೂ ಕಡಲತೀರಗಳು ಇಲ್ಲಿವೆ ಎನ್ನುವುದು ಹೆಮ್ಮೆಯ ಸಂಗತಿ. ಅದಕ್ಕಿಂತಲೂ, ಇಲ್ಲಿ 1993ರಿಂದ ಯಾವುದೇ ಕೋಮು ಗಲಭೆಗಳು ನಡೆದಿಲ್ಲ. ನಾವು ಭಟ್ಕಳಕ್ಕೆ ಸೇರಿದವರು' ಎಂದು ಹೇಳಿದ್ದಾರೆ.

'ಕರಾಚಿ ಬೇಕರಿ' ಹೆಸರನ್ನು ಮರಾಠಿಗೆ ಬದಲಾಯಿಸಲು ಶಿವಸೇನೆಯಿಂದ ಒತ್ತಡ'ಕರಾಚಿ ಬೇಕರಿ' ಹೆಸರನ್ನು ಮರಾಠಿಗೆ ಬದಲಾಯಿಸಲು ಶಿವಸೇನೆಯಿಂದ ಒತ್ತಡ

 ಪ್ರತಿದಿನ ಭಟ್ಕಳ ಪಟ್ಟಣದ ಬಗ್ಗೆ ಚರ್ಚೆ

ಪ್ರತಿದಿನ ಭಟ್ಕಳ ಪಟ್ಟಣದ ಬಗ್ಗೆ ಚರ್ಚೆ

ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸ್ಥಾಪಕರಾದ 'ಭಟ್ಕಳ ಬ್ರದರ್ಸ್' ಭಟ್ಕಳ ಮೂಲದವರು. ಯಾಸೀನ್ ಭಟ್ಕಳ್, ರಿಯಾಜ್ ಭಟ್ಕಳ್ ಹಾಗೂ ಇಕ್ಬಾಲ್ ಭಟ್ಕಳ ಈ ಮೂವರೂ ಭಟ್ಕಳ ಮೂಲದವರಾಗಿದ್ದು, ದೇಶದಾದ್ಯಂತ ನಡೆದ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಇವರು ಭಾಗಿಯಾಗಿದ್ದರು. ಇದೇ ಕಾರಣವನ್ನಿಟ್ಟುಕೊಂಡು ಪ್ರತಿದಿನ ಕೂಡ ಟ್ವಿಟರ್ ನಲ್ಲಿ ಒಬ್ಬರಲ್ಲಾ ಒಬ್ಬರು ಭಟ್ಕಳ ಪಟ್ಟಣದ ಬಗ್ಗೆ ಚರ್ಚೆಯಲ್ಲಿ ತೊಡಗುತ್ತಾರೆ. ಆದರೆ, ಭಟ್ಕಳವೆಂಬುದು ಪಾಕಿಸ್ತಾನ ಎಂದು ಹೇಳಿರುವ ಉಷಾ ಎನ್ನುವವರ ಟ್ವೀಟ್ ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

 ಶಾಂತಿ ಸೌಹಾರ್ದದಿಂದ ಬಾಳುತ್ತಿರುವ ಜನ

ಶಾಂತಿ ಸೌಹಾರ್ದದಿಂದ ಬಾಳುತ್ತಿರುವ ಜನ

ಹೊರ ಜಗತ್ತಿಗೆ 'ಭಟ್ಕಳ್ ಬ್ರದರ್ಸ್'ನಿಂದಾಗಿ ಉಗ್ರರ ತಾಣವೆಂದು ಕಾಣಿಸಿಕೊಂಡರೂ, ಭಟ್ಕಳದಲ್ಲಿ ಸದ್ಯ ಎಲ್ಲಾ ಧರ್ಮದವರು ಶಾಂತಿ ಹಾಗೂ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಯಾರೋ ಕೆಲವರು ಮಾಡಿದ ತಪ್ಪಿವೆ ಇಡೀ ಪಟ್ಟಣವನ್ನು ದೂಷಿಸುವುದು ಎಷ್ಟು ಸರಿ ಎಂದು ಹಲವರು ಇದೀಗ ಪ್ರಶ್ನಿಸಿದ್ದಾರೆ.

ಅಹಮದಾಬಾದ್ ''ಮಿನಿ ಪಾಕಿಸ್ತಾನ'' ಎಂದ ಸಂಜಯ್, ಬಿಜೆಪಿ ಗರಂಅಹಮದಾಬಾದ್ ''ಮಿನಿ ಪಾಕಿಸ್ತಾನ'' ಎಂದ ಸಂಜಯ್, ಬಿಜೆಪಿ ಗರಂ

Recommended Video

Burevi ಚಂಡಮಾರುತ ಕೇರಳ ಪ್ರವೇಶಿಸಿದ್ದಕ್ಕೆ , ನಮ್ಮ ರಾಜ್ಯದಲ್ಲಿ ಮಳೆ | Oneindia Kannada
 ಈ ಕಳಂಕದಿಂದ ಭಟ್ಕಳ ದೂರವಾಗುವುದು ಯಾವಾಗ?

ಈ ಕಳಂಕದಿಂದ ಭಟ್ಕಳ ದೂರವಾಗುವುದು ಯಾವಾಗ?

ಭಯೋತ್ಪಾದನಾ ಕೃತ್ಯಗಳಲ್ಲಿ 'ಭಟ್ಕಳ ಬ್ರದರ್ಸ್' ಹೆಸರು ಕೇಳಿಬಂದಿದ್ದ ಮೊದಮೊದಲು ಭಟ್ಕಳ ಮೂಲದ ಯುವಕರಿಗೆ ಭಟ್ಕಳದಿಂದ ಹೊರಗೆ ಉದ್ಯೋಗ ನೀಡಲು ಹಿಂಜರಿಯುತ್ತಿದ್ದರು. ಇದೇ ವಿಚಾರವಾಗಿ ಸಾಕಷ್ಟು ಯುವಕರು ಉದ್ಯೋಗ ಕೂಡ ಕಳೆದುಕೊಂಡಿರುವ ಘಟನೆಗಳೂ ನಡೆದಿದ್ದವು. ಆದರೆ ಈಗಲೂ ಕೂಡ ಕೆಲವರು ವಿನಾಕಾರಣ ಪಟ್ಟಣದ ಹೆಸರನ್ನು ಹಾಳುಗೆಡವುತ್ತಿರುವುದು ಭಟ್ಕಳಿಗರಿಗೆ ನೋವುಂಟು ಮಾಡಿದೆ.

English summary
Controversial tweet by woman about bhatkal stating 'Bhatkal India's Mini Pakistan' viral in social media heats up discussion in karwar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X