• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರವಾರ; ವೃದ್ಧೆಯ ಸಂಕಷ್ಟಕ್ಕೆ ಮಿಡಿದ ಉಪವಿಭಾಗಾಧಿಕಾರಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್ 20; ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಘಾಡಸಾಯಿ ಮಜರೆಯ ವೃದ್ಧೆ ಗೋಪಿಕಾ ಗುನಗಿ ಸಂಕಷ್ಟಕ್ಕೆ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಜೂನ್ 17ರಂದು ರಾತ್ರಿ ಬೀಸಿದ ಬಿರುಗಾಳಿ ಮಳೆಯಿಂದಾಗಿ ವೃದ್ಧೆಯ ಮನೆಯ ಮೇಲ್ಛಾವಣಿಗೆ ಪೂರ್ತಿ ಹಾನಿಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ವಿದ್ಯಾಶ್ರೀ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರವಾರ: ಬ್ಲ್ಯಾಕ್ ಫಂಗಸ್ ಎರಡನೇ ಪ್ರಕರಣ ಪತ್ತೆ!ಕಾರವಾರ: ಬ್ಲ್ಯಾಕ್ ಫಂಗಸ್ ಎರಡನೇ ಪ್ರಕರಣ ಪತ್ತೆ!

ಕಿನ್ನರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರನ್ನು ಸ್ಥಳಕ್ಕೆ ಕರೆಯಿಸಿ, ಹಾನಿಯಾದ ಮನೆಯ ಮೇಲ್ಛಾವಣಿಯನ್ನು ತುರ್ತಾಗಿ ದುರಸ್ತಿ ಮಾಡಿಸಿದ್ದಾರೆ. ಈ ಮೂಲಕ ವೃದ್ಧೆಗೆ ನೆರವಾಗಿದ್ದಾರೆ.

ಕಾರವಾರ; ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರ ಹಿಂದೇಟು ಕಾರವಾರ; ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರ ಹಿಂದೇಟು

ವೃದ್ಧೆಗೆ ಸಂಧ್ಯಾ ಸುರಕ್ಷಾ ಪಿಂಚಣಿ ಸರಿಯಾಗಿ ತಲುಪುತ್ತಿಲ್ಲ ಎಂಬುದನ್ನು ಖಚಿತಪಡಿಕೊಂಡ ವಿದ್ಯಾಶ್ರೀ, ವೃದ್ಧೆಯು ಒಬ್ಬಂಟಿಯಾಗಿರುವುದರಿಂದ ಹಾಗೂ ಅವರ ಯೋಗಕ್ಷೇಮ ನೋಡಿಕೊಳ್ಳಲು ಯಾರು ಕೂಡ ಇಲ್ಲದಿರುವುದನ್ನು ಗಮನಿಸಿ, ವೃದ್ಧೆಗೆ ಕೂಡಲೇ ಪಡಿತರ ಕಿಟ್ ವಿತರಿಸಲು ವ್ಯವಸ್ಥೆ ಮಾಡಿದರು.

ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!

ಅಲ್ಲದೆ ಹಾನಿ ಲೆಕ್ಕಾಚಾರದ ಬಗ್ಗೆ ಪರಿಶೀಲನೆಯಿಂದ ತುರ್ತಾಗಿ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ತಹಶೀಲ್ದಾರರಿಗೆ ಸೂಚಿಸಿದರು. ವೃದ್ಧೆಯ ಮನೆ ಹಿಂದೆ ಬೀಳುವ ಸ್ಥಿತಿಯಲ್ಲಿದ್ದ ಅಪಾಯಕಾರಿ ವಿದ್ಯುತ್ ಕಂಬ ಇರುವುದನ್ನು ಗಮನಿಸಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಕೂಡಲೇ ದುರಸ್ತಿಪಡಿಸಲು ಸೂಚಿಸಿದರು.

   ಪದ್ಮಶ್ರೀ ಪ್ರಶಸ್ತಿ ಪಡೆದಿರುವ Indira jaising ಯಾರು..? | Oneindia Kannada

   ತಕ್ಷಣ ಕ್ರಮ ಕೈಗೊಂಡು ಕಂಬವನ್ನು ದುರಸ್ತಿ ಮಾಡಲಾಗಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಇಂತಹ ತುರ್ತು ಪ್ರಕರಣಗಳನ್ನು ಗುರುತಿಸಿ ಹಾನಿ ಪಟ್ಟಿಯನ್ನು ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರಿಂದ ಪಡೆದು ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳಲು ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ.

   English summary
   Karwar assistant commissioner Vidyashree Chandaragi helped old women. Women house damaged due to rain on June 17.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X