ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಶ್ರಯ ಯೋಜನೆ ಫಲಾನುಭವಿ ಆಯ್ಕೆ; ದೇಶಪಾಂಡೆ ವಿರುದ್ಧ ಪ್ರತಿಭಟನೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಉತ್ತರ ಕನ್ನಡ, ಫೆಬ್ರವರಿ 09; ಚೀಟಿ ಎತ್ತುವುದರ ಮೂಲಕ ನೆಡೆದ ಆಶ್ರಯ ನಿವೇಶನ ಫಲಾನುಭವಿಗಳ ಆಯ್ಕೆ ಗೊಂದಲಕ್ಕೆ ಕಾರಣವಾಯಿತು. ಅರ್ಜಿದಾರರ ಅಸಹನೆ ಮತ್ತು ಬಿಜೆಪಿಯ ವಿರೋಧದ ಕಾರಣಗಳಿಂದಾಗಿ ಹಳಿಯಾಳ ಕಾಂಗ್ರೆಸ್ ಶಾಸಕ ಆರ್. ವಿ. ದೇಶಪಾಂಡೆ ದಿಡೀರ್ ಪ್ರತಿಭಟನೆ ಎದುರಿಸುವಂತಾಯಿತು.

ಹಳಿಯಾಳ ಪುರಸಭೆಯ ಆವರಣದಲ್ಲಿ ಸೋಮವಾರ ಆಶ್ರಯ ನಿವೇಶನಗಳ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಗಣನೆಗೆ ಬಾರದ ಮತ್ತು ತಿರಸ್ಕೃತಗೊಂಡವರ ವಿರುದ್ಧ, ಮತ್ತೊಂದು ಕಡೆ ಬಿಜೆಪಿಗರ ಲೆಕ್ಕಾಚಾರದ ವಿರೋಧಗಳಿಂದಾಗಿ ಪುರಸಭೆಯ ಎದುರು ಗೊಂದಲದ ವಾತಾವರಣ ನಿರ್ಮಾಣಗೊಂಡಿತು.

 ಹಳಿಯಾಳ ಕ್ಷೇತ್ರದಲ್ಲಿ ಮತ್ತೆ ಅಧಿಕಾರ ಪಡೆದ ಆರ್.ವಿ.ದೇಶಪಾಂಡೆ ಹಳಿಯಾಳ ಕ್ಷೇತ್ರದಲ್ಲಿ ಮತ್ತೆ ಅಧಿಕಾರ ಪಡೆದ ಆರ್.ವಿ.ದೇಶಪಾಂಡೆ

ಶಾಸಕ ಆರ್. ವಿ. ದೇಶಪಾಂಡೆ ತಮ್ಮ ರಾಜಕೀಯ ಬದುಕಿನಲ್ಲಿ ಯಾವತ್ತೂ ಬಹುಶಃ ಇಂತಹ ಪ್ರತಿಕೂಲ ಸ್ಥಿತಿಯನ್ನು ಎದುರಿಸಿರಲಿಕ್ಕಿಲ್ಲ ಎಂಬಂತಹ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ಪುರಸಭೆಯ ಮುಂದೆ ದೇಶಪಾಂಡೆಯವರ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ಕೊನೆಗೆ ಅವರ ನಿವಾಸದ ಎದುರೂ ಘೋಷಣೆ ಕೂಗಿ ಅಸಹನೆ ಹೊರ ಹಾಕಿದರು.

ಮರೆಯಾಗುತ್ತಿದೆಯೇ ದೇಶಪಾಂಡೆ ಖದರ್; ಮಾತು ಕೇಳುತ್ತಿಲ್ಲ ಅಧಿಕಾರಿಗಳು! ಮರೆಯಾಗುತ್ತಿದೆಯೇ ದೇಶಪಾಂಡೆ ಖದರ್; ಮಾತು ಕೇಳುತ್ತಿಲ್ಲ ಅಧಿಕಾರಿಗಳು!

ಬಿಜೆಪಿ ಕಾರ್ಯಕರ್ತರ ಜೊತೆಗೆ ಅರ್ಜಿ ತಿರಸ್ಕೃತಗೊಂಡಿದ್ದ ಬಹುತೇಕರೂ ಧ್ವನಿಗೂಡಿಸಿದ್ದರಿಂದ ಭಾರಿ ವಿರೋಧವೇ ಎದುರಾಯಿತು. ಈ ಘಟನೆಯಿಂದ ಶಾಸಕ ಆರ್. ವಿ. ದೇಶಪಾಂಡೆಯವರು ಸ್ವಲ್ಪ ಹೊತ್ತು ಗಲಿಬಿಲಿಗೊಂಡಂತೆ ಕಂಡು ಬಂದಿತು.

 ಯಲ್ಲಾಪುರ ಕ್ಷೇತ್ರದಲ್ಲಿ ಪ್ರಶಾಂತ್ ದೇಶಪಾಂಡೆ ಪರೇಡ್! ಯಲ್ಲಾಪುರ ಕ್ಷೇತ್ರದಲ್ಲಿ ಪ್ರಶಾಂತ್ ದೇಶಪಾಂಡೆ ಪರೇಡ್!

ಘಟನೆಯ ವಿವರಗಳು

ಘಟನೆಯ ವಿವರಗಳು

ಹಳಿಯಾಳದ ಆಶ್ರಯ ನಗರ ಗುಡ್ನಾಪುರ ಕಾಲೋನಿಯ ವ್ಯಾಪ್ತಿಯಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ 1.9 ಎಕರೆ ಜಾಗವನ್ನು ಆಶ್ರಯ ಯೋಜನೆಗಾಗಿಯೇ ಮಂಜೂರು ಮಾಡಲಾಗಿತ್ತು. ಜಾಗದಲ್ಲಿದ್ದ ಸುಮಾರು 37 ನಿವೇಶನಗಳಿಗಾಗಿ ಸಾವಿರಾರು ಆಸಕ್ತರು ಅರ್ಜಿ ಹಾಕಿದ್ದರು.

ಚೀಟಿ ಮೂಲಕ ಆಯ್ಕೆ

ಚೀಟಿ ಮೂಲಕ ಆಯ್ಕೆ

37 ನಿವೇಶನಗಳಲ್ಲಿ 6 ಕಾರ್ನರ್ ಸೈಟ್ ಗಳನ್ನು ಪುರಸಭೆ ವಾಣಿಜ್ಯ ಉದ್ದೇಶಗಳಿಗಾಗಿ ಮೀಸಲಿರಿಸಲು ನಿರ್ಧರಿಸಲಾಗಿತ್ತು. ಮೊದಲ ಹಂತದಲ್ಲಿ ಕೇವಲ 28 ಅದೃಷ್ಟವಂತ ಫಲಾನುಭವಿಗಳನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ಚೀಟಿ ಎತ್ತಿದಾಗ 23 ಜನ ಮಾತ್ರ ಅರ್ಹ ಹಾಗೂ ಅದೃಷ್ಟವಂತ ಫಲಾನುಭವಿಗಳು ಆಯ್ಕೆಯಾದರು.

ಬಿಜೆಪಿ ವಿರೋಧ ಏಕೆ

ಬಿಜೆಪಿ ವಿರೋಧ ಏಕೆ

ಚೀಟಿ ಎತ್ತಿದಾಗ ನಿವೇಶನ ಕೈತಪ್ಪಿದ ಜನರು ಅಸಮಾಧಾನಗೊಂಡರು. ಮತ್ತೊಂದು ಕಡೆ ಬಿಜೆಪಿ ಪ್ರಸ್ತುತ ನೀಡಲಾಗುತ್ತಿರುವ ನಿವೇಶನಗಳ ಜಾಗದ ಒಂದು ಕಡೆ ಸಬ್ ಜೈಲಿಗೂ, ಮತ್ತೊಂದು ಕಡೆ ಕೆಎಸ್ಆರ್‌ಟಿಸಿ ಡಿಪೋಗೂ ಹೊಂದಿಕೊಂಡಂತೆಯೇ ಇದೇ. ಮುಂಬರುವ ದಿನಗಳಲ್ಲಿ ಪುರಸಭೆ ಜಾಗವನ್ನು ಪ್ರಮುಖ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬಹುದು. ಆದ್ದರಿಂದ, ಆ ಜಾಗವನ್ನು ಆಶ್ರಯ ನಿವೇಶನಗಳಿಗೆ ಒದಗಿಸಬಾರದು ಎಂದು ಬಿಜೆಪಿ ಆಗ್ರಹಿಸಿತು.

ಪ್ರತಿಭಟನೆ ಆರಂಭ

ಪ್ರತಿಭಟನೆ ಆರಂಭ

ಹಳಿಯಾಳ ತಾಲೂಕಾ ಬಿಜೆಪಿ ಘಟಕ ಈ ಜಾಗದ ಕುರಿತು ಪುರಸಭೆಗೂ ಮನವಿ ಸಲ್ಲಿಸಿತ್ತು. ಸದರಿ ಜಾಗವನ್ನು ಆಶ್ರಯ ನಿವೇಶನಗಳ ಹಂಚಿಕೆಗಾಗಿಯೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಖರೀದಿಸಲಾಗಿದೆ. ವಾಣಿಜ್ಯ ಉದ್ದೇಶವೂ ಸೇರಿದಂತೆ, ಬೇರೆ ಯಾವುದೇ ಕಾರಣಕ್ಕೆ ಬಳಕೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗೇನಾದರು ಮಾಡಿದರೆ, ಸರಕಾರ ಸದರಿ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ ಎಂಬುದು ಕಾಂಗ್ರೆಸ್ ವಾದವಾಗಿದೆ. ಇದರಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ನಡೆದಿತ್ತು, ಇದರ ಜೊತೆಗೆ ಆಕಾಂಕ್ಷಿಗಳ ಅಸಮಾಧಾನವೂ ಸೇರಿತು.

Recommended Video

ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಉದಯ-ವಿರೂಪಾಕ್ಷೇಶ್ವರನ ದರ್ಶನ ಪಡೆದ ಆನಂದ್ ಸಿಂಗ್ | Oneindia Kannada
ಶಾಸಕರು ಹೇಳುವುದೇನು

ಶಾಸಕರು ಹೇಳುವುದೇನು

ಘಟನೆ ಕುರಿತು ಶಾಸಕ ಆರ್. ವಿ. ದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ. "ಕ್ಷೇತ್ರದ ನನ್ನ ರಾಜಕೀಯ ಜೀವನದಲ್ಲಿ ನಾನು ಅದೆಷ್ಟೋ ಬಾರಿ ಸಾವಿರಾರು ಕೋಟಿಗಳ ಅನುದಾನ ತಂದಿದ್ದೇನೆ. ಅದೆಷ್ಟೋ ಬಾರಿ ಸುರಿಲ್ಲದವರಿಗೆ ಸಾವಿರ ಸಾವಿರ ನಿವೇಶನ ಮತ್ತು ಮನೆಗಳನ್ನು ಒದಗಿಸಿಕೊಟ್ಟಿದ್ದೇನೆ. ಆದರೆ, ಇಂದು ವಿನಾಕಾರಣ ಇಂತಹ ಸ್ಥಿತಿ ಎದುರಿಸಬೇಕಾಗಿ ಬಂದಿದೆ. ಇದು ಬೇಸರದ ವಿಷಯ" ಎಂದು ಹೇಳಿದ್ದಾರೆ.

English summary
Protest against Congress MLA of Haliyal R. V. Deshpande during the Ashraya Yojana house distribution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X