ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನ್ನ, ನೀರು ಇಲ್ಲದೆ ಬದುಕುತ್ತಿದ್ದಾರೆ ಈ ವಿದೇಶಿ ಪ್ರಾಣಯೋಗಿ

By ಡಿಪಿ ನಾಯ್ಕ
|
Google Oneindia Kannada News

ಕಾರವಾರ, ಜೂನ್.21: ಭಾರತದ ಯೋಗದ ಕರೆಗೆ ಈಗ ಜಗತ್ತೇ ತಲೆ ಬಾಗಿದೆ. ಜಾತಿ- ಧರ್ಮಗಳನ್ನೂ ಮೀರಿ ಇಡೀ ವಿಶ್ವವೇ ಪಾಲ್ಗೊಂಡು ಯೋಗದ ಮಹಿಮೆ ಸಾರಿದೆ. ಇಂಥ ದಿನದಲ್ಲಿ ವಿದೇಶಿ ಪ್ರಾಣ ಯೋಗಿಯೊಬ್ಬರನ್ನು ಇಂದು ಪರಿಚಯ ಮಾಡಿಕೊಡಬೇಕಾಗಿದೆ.

ಆ ವ್ಯಕ್ತಿ ಅಂತಿಂಥವರಲ್ಲ. ಯೋಗ, ಪ್ರಾಣಾಯಾಮವನ್ನೇ ಇಡೀ ಜೀವನವನ್ನಾಗಿಸಿಕೊಂಡಿರುವ ಅದ್ಭುತ ವ್ಯಕ್ತಿ. ಅವರೇ ಅರ್ಜೆಂಟೀನಾದ ವಿಕ್ಟರ್ ಟ್ರುವಿಯಾನೋ.

70 ವರ್ಷದಿಂದ ಆಹಾರವಿಲ್ಲದ, ನೀರೂ ಕುಡಿಯದ ಯೋಗಿಯ ಕತೆ ಕೇಳಿ!70 ವರ್ಷದಿಂದ ಆಹಾರವಿಲ್ಲದ, ನೀರೂ ಕುಡಿಯದ ಯೋಗಿಯ ಕತೆ ಕೇಳಿ!

ಜೀವಂತ ಅದ್ಭುತ ಎಂದು ವರ್ಣಿಸಬಹುದೇನೋ. ಅರ್ಜೆಂಟೀನಾದಲ್ಲಿ ಹುಟ್ಟಿದ ವಿಕ್ಟರ್ ಸಂಗೀತಕ್ಕೆ ತಮ್ಮನ್ನು ಮೀಸಲಾಗಿಸಿಕೊಂಡಿದ್ದರು. ಲೂನಸ್ ಸಿಟಿಯಾ ಆರ್ಕೆಸ್ಟ್ರಾದ ಪ್ರಮುಖ ವಾದಕರಲ್ಲಿ ಇವರು ಒಬ್ಬರಾಗಿದ್ದರು. ಆಶ್ಚರ್ಯವೆಂದರೆ ಇವರನ್ನು ಜಗತ್ತೇ ಕೊಂಡಾಡುವಂತೆ ಮಾಡಿದ್ದು ಮಾತ್ರ ಆ ಕಾಯಿಲೆ.

Argentina victor truviano lives without water and rice.

ಹೌದು. ಕೈಯ ಟೆನಿಸ್ ಎಂಬ ಎಲುಬಿಗೆ ಉಂಟಾಗುವ ಕಾಯಿಲೆ ಅವರನ್ನು ಪೀಟಿಲು ವಾದನದಿಂದ ದೂರ ಮಾಡಿತು. ಆದರೆ ವಿಶ್ವ ಗುರುವನ್ನಾಗಿ ಮಾಡಿತು.

ಈ ಕಾಯಿಲೆಯಿಂದ ವಿಕ್ಟರ್ ಪ್ರಾಣಿಕ್ ಚಿಕಿತ್ಸೆಗೆ ಒಳಗಾಗಬೇಕಾಯಿತು. ಅದರ ಭಾಗವಾಗಿ ಸತತ 21 ದಿನಗಳವರೆಗೆ ಪತ್ಯೆ ಅನುಸರಿಸಿದರು‌. ಅದರಲ್ಲಿ ಏಳು ದಿನ ಯಾವುದೇ ಅನ್ನಹಾರ ಸೇವಿಸದೆ ಉಪವಾಸ ಕೈಗೊಳ್ಳಬೇಕಾಯಿತು. ಇದು ಅವರಿಗೆ ಅಸಾಧ್ಯವಾದುದನ್ನು ಸಾಧಿಸಲು ಪ್ರೇರಣೆಯಾಯಿತು.

ಜಗತ್ತಿನಲ್ಲಿ ಸಾವಿರಾರು ಮಂದಿ ಹಸಿವಿನಿಂದ ಸಾಯುತ್ತಿದ್ದಾರೆ. ಅಂಥವರಿಗೆ ಈ ವಿಕ್ಟರ್ ಒಂದು ಭರವಸೆಯ ಕಿರಣವಾದರು. ಅಷ್ಟಕ್ಕೂ ಈ ವಿಕ್ಟರ್ ಮಾಡಿದ್ದಾದರು ಏನು ಗೊತ್ತಾ?

ಚೀನಾದವರಿಗೆ ಮೈಸೂರಿನ ಸುರೇಶ್ ಪುಟ್ಟಲಿಂಗಪ್ಪನವರೇ ಯೋಗ ಗುರು ಚೀನಾದವರಿಗೆ ಮೈಸೂರಿನ ಸುರೇಶ್ ಪುಟ್ಟಲಿಂಗಪ್ಪನವರೇ ಯೋಗ ಗುರು

ವಿಕ್ಟರ್ ಅನೇಕ ವರ್ಷಗಳಿಂದ ಬ್ರಹ್ಮಾಂಡದ ಪ್ರಮುಖ ಶಕ್ತಿಯಾದ ಗಾಳಿಯನ್ನೇ ಆಹಾರವನ್ನಾಗಿಸಿಕೊಂಡಿದ್ದಾರೆ. ಮುಗಿಯದ ಸಂಪನ್ಮೂಲವನ್ನೇ ಆಹಾರವನ್ನಾಗಿಸಿಕೊಂಡು, ಅನ್ನಾಹಾರ ಇಲ್ಲದೆಯೂ ಹೇಗೆ ಬದುಕಬೇಕು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

Argentina victor truviano lives without water and rice.

ಅಷ್ಟಕ್ಕೂ ಅನ್ನಾಹಾರ ಇಲ್ಲದೆ ವರ್ಷಗಟ್ಟಲೆ ಬದುಕುಲು ಸಾಧ್ಯವೇ ಎಂದು ನೀವು ಪ್ರಶ್ನಿಸಬಹುದು‌. ಅದಕ್ಕೆ ಉತ್ತರವೆಂದರೆ ಯೋಗ. ಯೋಗದ ಭಾಗವಾದ ಪ್ರಾಣಾಯಾಮ.

ಉತ್ಸಾಹಭರಿತ ವ್ಯಕ್ತಿ ವಿಕ್ಟರ್ ಕಡಿಮೆ ನಿದ್ರೆ ಮಾಡುತ್ತಾರೆ. ದಿನಕ್ಕೆ ಎರಡು ಅಥವಾ ನಾಲ್ಕು ಗಂಟೆಗಳವರೆಗೆ ಮಾತ್ರ ಅವರು ನಿದ್ರೆಯ ಮೊರೆ ಹೋಗುತ್ತಾರೆ. ಕೆಲವೊಮ್ಮೆ ನಿದ್ರೆ ಮಾಡದೇ ಇರುವುದು ಕೂಡ ಇದೆ. ಎಲ್ಲರಿಗೂ ಹೊಂದಿಕೊಳ್ಳುವ ಮತ್ತು ಶಕ್ತಿಯುತ ವ್ಯಕ್ತಿ ಕೂಡ ಹೌದು‌.

ಮೊದಲ ಮಾನವನು ಸಂಪೂರ್ಣವಾಗಿ ಅಮೂರ್ತ ಮತ್ತು ಸೃಜನಶೀಲನಾಗಿದ್ದ. ನನ್ನ ತತ್ವಶಾಸ್ತ್ರವು ಅವನನ್ನು ಹೆಚ್ಚು ಅನುಸರಿಸಲು ಇಷ್ಟಪಡುತ್ತದೆ ಎಂದು ಪ್ರತಿಬಾರಿಯೂ ಮುಗುಳು ನಗುತ್ತ ವಿಕ್ಟರ್ ಹೇಳುತ್ತಾರೆ.

ಇದೇ ಶಾಶ್ವತ ಸಂತೋಷದಿಂದ ಜಗತ್ತಿನಾದ್ಯಂತ ಅವರು ಪ್ರಯಾಣಿಸುತ್ತಾರೆ. ಪ್ರೀತಿಯ ಮತ್ತು ಆನಂದದ ಸಂದೇಶವನ್ನು ಹೋದಲ್ಲೆಲ್ಲ ಹರಡುತ್ತಾರೆ. ತನ್ನನ್ನು ಗುರು ಎಂದು ಹೇಳಿಕೊಳ್ಳಲು ವಿಕ್ಟರ್ ಒಪ್ಪುವುದಿಲ್ಲ. ತನ್ನ ಜೀವನ ಶೈಲಿಗೆ ಹೊಂದಿಕೊಳ್ಳುವಂತೆ ಯಾರನ್ನೂ ಪೀಡಿಸುವುದಿಲ್ಲ.

ಆದರೆ, ಅವರ ಬಳಿ ಬರುವ ಜನರಿಗೆ ಸ್ಫೂರ್ತಿ ತುಂಬುತ್ತಾರೆ. ಪ್ರಾಣಯೋಗ ಎನ್ನುವುದು ಸೃಷ್ಟಿಯ ವಿಶೇಷ ಕರೆ ಎನ್ನುತ್ತಾರೆ. ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಅವರು ಇತ್ತೀಚೆಗೆ ಹರಿದ್ವಾರಕ್ಕೆ ಬಂದಿದ್ದಾರೆ. ಹೀಗೆ ಭಾರತ ಸೇರಿದಂತೆ ಹಲವೆಡೆ ಅವರು ಪ್ರಯಾಣ ಮಾಡುತ್ತಿರುತ್ತಾರೆ.

English summary
Argentina victor truviano lives without water and rice. He has been living for years without rice, water. He has done this through yoga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X