• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಂಥವರೂ ಮೆಚ್ಚಲೇಬೇಕು ವಿಕಲಚೇತನ ಸಮರ್ಥನ ಸಾಧನೆ!

By ದೇವರಾಜ್ ನಾಯ್ಕ
|

ಕಾರವಾರ, ಮೇ 8: ಸ್ಪಷ್ಟವಾಗಿ ಮಾತನಾಡಲು, ಓಡಾಡಲು ಅಸಮರ್ಥನಾದರೂ, ಚದುರಂಗದ ಆಟದಲ್ಲಿ ಸಮರ್ಥನಾಗಿರುವ ಹೊನ್ನಾವರ ತಾಲೂಕಿನ ಎಂಪಿಇ ಸೊಸೈಟಿಯ ಎಸ್ ಡಿಎಂ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಸಮರ್ಥ ಜೆ.ರಾವ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಹುಟ್ಟಿದ ಬಳಿಕ ಸೆಲೆಬ್ರಲ್ ಪಾಲ್ಸಿಯಿಂದ ವಿಕಲಚೇತನಕ್ಕೆ ತುತ್ತಾದ ಸಮರ್ಥ, ಸರಾಗವಾಗಿ ನಡೆಯಲಾರ. ಸ್ಪಷ್ಟವಾಗಿ ಮಾತನಾಡಲು ಕೂಡ ಈತನಿಂದ ಅಸಾಧ್ಯ. ತಂದೆ ಅಥವಾ ತಾಯಿಯೇ ಈತನನ್ನು ಹೊತ್ತುಕೊಂಡು ಹೋಗಬೇಕು. ಶಾಲೆ, ಕಾಲೇಜಿಗೂ ಕೂಡ ಹೊತ್ತುಕೊಂಡು ಬಿಟ್ಟು ಬರಬೇಕು.

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದ ಹೈಲೈಟ್ಸ್

ಆದರೆ, ಚದುರಂಗದಲ್ಲಿ ಮಾತ್ರ ಈತ ಅಸಾಮಾನ್ಯ ಆಟಗಾರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಈತ ಪ್ರತಿನಿಧಿಸಿದ್ದ. ಈ ಬಾರಿಯ ಪಿಯು ಪರೀಕ್ಷೆಯಲ್ಲಿ 509 ಅಂಕಗಳಿಸುವುದರೊಂದಿಗೆ (ಶೇ 84.83) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಮತ್ತೊಂದು ವಿಶೇಷ ಸಾಧನೆ ಮಾಡಿರುವ ಸಮರ್ಥನ ಸಾಧನೆಯ ವಿವರ ಇಲ್ಲಿದೆ...

 ಇಂಗ್ಲಿಷ್ ಪತ್ರಿಕೆ ಮರುಮೌಲ್ಯಮಾಪನಕ್ಕೆ

ಇಂಗ್ಲಿಷ್ ಪತ್ರಿಕೆ ಮರುಮೌಲ್ಯಮಾಪನಕ್ಕೆ

ದ್ವಿತೀಯ ಪಿಯು ಕನ್ನಡದಲ್ಲಿ ಶೇ 86, ಇಂಗ್ಲಿಷ್ ನಲ್ಲಿ ಶೇ 85, ಅರ್ಥಶಾಸ್ತ್ರ ಶೇ 80, ವ್ಯವಹಾರ ಅಧ್ಯಯನ ಶೇ 92, ಲೆಕ್ಕಶಾಸ್ತ್ರ ಶೇ 91, ಸಂಖ್ಯಾಶಾಸ್ತ್ರದಲ್ಲಿ ಶೇ 75 ಹಾಗೂ ಇಂಗ್ಲೀಷ್ ನಲ್ಲಿ ಶೇ 90 ಅಂಕ ಗಳಿಸಿದ್ದಾರೆ. ಆದರೆ, ಇಂಗ್ಲಿಷ್ ಉತ್ತರ ಪತ್ರಿಕೆ ಮರುಮೌಲ್ಯಮಾಪನಕ್ಕೆ ಹಾಕಲು ಪಾಲಕರು ತೀರ್ಮಾನಿಸಿದ್ದಾರೆ.

ಈತ ಎಸ್ಎಸ್ಎಲ್ ಸಿಯಲ್ಲಿ 541 (ಶೇ 86.58) ಅಂಕಗಳನ್ನು ಗಳಿಸಿದ್ದ.

 ಫಲಿತಾಂಶದ ಗುಟ್ಟು

ಫಲಿತಾಂಶದ ಗುಟ್ಟು

ಸಮರ್ಥನದು ಮೂಲತಃ ಉಡುಪಿ ಜಿಲ್ಲೆಯ ಬಸ್ರೂರು. ತಂದೆ ಜಗದೀಶ್ ರಾವ್ ಉತ್ತರಕನ್ನಡ ಜಿಲ್ಲೆಯ ಮಂಕಿಯ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಉದ್ಯೋಗಿ. ತಾಯಿ ವಿನುತಾ ಭಟ್ ಹೊನ್ನಾವರದ ಐಟಿಐ ಕಾಲೇಜಿನಲ್ಲಿ ಜೆಟಿಒ ಆಗಿದ್ದಾರೆ.

ಹೊನ್ನಾವರ ತಾಲೂಕಿನ ಎಂಪಿಇ ಸೊಸೈಟಿಯ ಎಸ್ ಡಿಎಂ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸಮರ್ಥ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದನು. ಮನೆಯಲ್ಲಿ ಕಡಿಮೆ ಓದುವ ಸಮರ್ಥ ಕಾಲೇಜಿನಲ್ಲಿ ಗಮನವಿಟ್ಟು ಪಾಠ ಕೇಳುತ್ತಾನೆ. ಇದೇ ಆತ ಪರೀಕ್ಷೆಯಲ್ಲಿ ಹೆಚ್ಚು ಫಲಿತಾಂಶ ಗಳಿಸಲು ಕಾರಣವಾಯಿತು ಎನ್ನುತ್ತಾರೆ ಸಮರ್ಥರ ತಂದೆ ಜಗದೀಶ ರಾವ್.

ವಿಶೇಷ ಚೇತನ ಅಣ್ಣ-ತಂಗಿಯರ ಹುಬ್ಬೇರಿಸುವ ಸಾಧನೆ

 ತಾಯಿಯೇ ಗುರು

ತಾಯಿಯೇ ಗುರು

ಸಮರ್ಥನಿಗೆ ಅವರ ತಾಯಿ ವಿನುತಾ ಭಟ್ಟರೇ ಮೊದಲ ಗುರು. ಅವನಲ್ಲಿದ್ದ ಚೆಸ್ ಬಗೆಗಿನ ಆಸಕ್ತಿಯನ್ನು ಗುರುತಿಸಿದವರು. ಇಂದು ಭಾರತವನ್ನು ಪ್ರತಿನಿಧಿಸುವ ಮಟ್ಟಿಗೆ ತಳಪಾಯ ಹಾಕಿದವರು. ಶಾಲೆಯಲ್ಲಿ ಎಲ್ಲ ಮಕ್ಕಳೂ ಆಡಲು ಹೋದಾಗ ಸಮರ್ಥ ಮಾತ್ರ ಬಾಗಿಲ ಬಳಿ ನಿಂತು ಏನನ್ನೋ ಯೋಚನೆ ಮಾಡುತ್ತಾ ಇತರರ ಆಟವನ್ನು ನೋಡುತ್ತಾ ಕುಳಿತಿರುತ್ತಿದ್ದ.

ಈ ಬಗ್ಗೆ ತಿಳಿದ ತಾಯಿ ವಿನುತಾ, ಅವನಿಗೆ ಚೆಸ್ ಆಡಲು ಹೇಳಿಕೊಟ್ಟರು. ಶೈಕ್ಷಣಿಕವಾಗಿಯೂ ಸಮರ್ಥನಿಗೆ ಆಕೆಯೇ ನೆರವಾಗುತ್ತಾಳೆ. 6ನೇ ತರಗತಿ ಉತ್ತೀರ್ಣಳಾಗಿರುವ ಅವನ ತಂಗಿ ನೋಟ್ಸ್ ಬರೆದುಕೊಡುವಲ್ಲಿ ಸಹಾಯ ಮಾಡುತ್ತಾಳೆ.

 ಸಮರ್ಥನ ಸಾಧನೆಗಳು

ಸಮರ್ಥನ ಸಾಧನೆಗಳು

ಸಮರ್ಥ 2015ರ ಏಪ್ರಿಲ್‌ ನಲ್ಲಿ ತಿರುಚಿಯಲ್ಲಿ ನಡೆದ ವಿಶೇಷ ಚೇತನರ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಹುಬ್ಬಳ್ಳಿಯಲ್ಲಿ ನಡೆದ ಅಂತಾರಾಜ್ಯ ಸ್ಪರ್ಧೆಯಲ್ಲಿ 3 ನೇ ಸ್ಥಾನ, ಮೈಸೂರಿನಲ್ಲಿ ನಡೆದ 16 ವರ್ಷದೊಳಗಿನವರ ಸ್ಪರ್ಧೆಯಲ್ಲಿ ದ್ವಿತೀಯ, ಫಿಡೆ(ವರ್ಲ್ಡ್ ಚೆಸ್ ಫೆಡರೇಶನ್) 1,260ನೇ ಶ್ರೇಣಿ.

ಅಮೇರಿಕಾದ ಫ್ಲೋರಿಡಾದಲ್ಲಿ ಈ ವರ್ಷ ಜೂನ್ ನಲ್ಲಿ ನಡೆದ ಪ್ರಥಮ ವಿಶ್ವ ಫಿಡೇ ಕಿರಿಯ ದೈಹಿಕ ಅಸಮರ್ಥರ ಚದುರಂಗ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಅಷ್ಟೇ ಅಲ್ಲದೇ 2017ರ ಡಿಸೆಂಬರ್‌ ತಿಂಗಳಲ್ಲಿ ನಡೆದ ಪ್ಯಾರಾ ಒಲಿಂಪಿಕ್ ಸ್ಪರ್ಧೆಯಲ್ಲಿಯೂ ಸಮರ್ಥ ಭಾಗವಹಿಸಿದ್ದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka puc result 2018: Samartha disability, but expert at the chess. He represented India at international level. Another special achievement has been achieved this time by passing the PU exam with 509 points (84.83%).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more