ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಲ್ ಟ್ರೇನ್ ಹತ್ತಿ ಬಂದೋರಲ್ಲ ನಾವು: ಅತೃಪ್ತರಿಗೆ ಅನಂತಕುಮಾರ್ ಹೆಗಡೆ ವ್ಯಂಗ್ಯ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಅಕ್ಟೋಬರ್ 16: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷ ತೊರೆದು, ಈಗಿನ ಬಿಜೆಪಿ ಸರ್ಕಾರದಲ್ಲಿ ಸೀಟಿಗೆ ನಿರೀಕ್ಷಿಸುತ್ತಿರುವ ಅತೃಪ್ತ ಶಾಸಕರನ್ನು ಸಂಸದ ಅನಂತಕುಮಾರ್ ಹೆಗಡೆ ವ್ಯಂಗ್ಯ ಮಾಡಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ ಅತೃಪ್ತ ಶಾಸಕರಿಗೆ ಟಾಂಗ್ ನೀಡಿದ್ದಾರೆ. 'ಏನೋ ಒಂದು ಅವಕಾಶ ಸಿಕ್ತು ಅಂತ ಆ ಪಾರ್ಟಿಯಲ್ಲಿರುವುದು. ಅಲ್ಲೇನು ಸೀಟ್ ಕೊಟ್ಟಿಲ್ಲ ಅಂತ ಈ ಪಾರ್ಟಿಗೆ ಬರೋದು. ಇತ್ತೀಚೆಗೆ ಇದು ಶುರುವಾಗಿಬಿಟ್ಟಿದೆ. ಯಾವ ಕಡೆ ಹೋದರೂ, ಎಲ್ಲಾ ಟ್ರೈನ್ ‌ನಲ್ಲಿಯೂ ಒಂದೇ ಮುಖ ಕಾಣುತ್ತೇವೆ' ಎಂದು ಹೆಗಡೆ ವ್ಯಂಗ್ಯ ಮಾಡಿದರು.

ಓಟು ಬೇಕು, ಜವಾಬ್ದಾರಿ ಬೇಡ್ವಾ? ಸಂಸದ ಅನಂತಕುಮಾರ್ ಗೆ ಪ್ರಶ್ನಿಸಿದ ಮುಂಡಗೋಡ ಗ್ರಾಮಸ್ಥರುಓಟು ಬೇಕು, ಜವಾಬ್ದಾರಿ ಬೇಡ್ವಾ? ಸಂಸದ ಅನಂತಕುಮಾರ್ ಗೆ ಪ್ರಶ್ನಿಸಿದ ಮುಂಡಗೋಡ ಗ್ರಾಮಸ್ಥರು

'ಅದು ಶತಾಬ್ದಿ ಆದ್ರೂ ಸರಿ, ಲೋಕಲ್ ಟ್ರೇನ್ ಆದ್ರೂ ಸರಿ. ಈ ರೀತಿ ಗೊತ್ತು ಗುರಿ ಇಲ್ಲದ, ಲೋಕಲ್ ಟ್ರೇನ್ ಹತ್ತಿ ಬಂದ ಸಂಘಟನೆ ನಮ್ಮದಲ್ಲ' ಅಂತಲೂ ಅನಂತ ಕುಮಾರ್ ಬಿಜೆಪಿಯ ಬಗ್ಗೆ ತಾವೇ ಬೆನ್ನುತಟ್ಟಿಕೊಂಡರು.

Anantkumar Hegde Speaks About Disqualified Mlas In Karwar

ಇದೇ ಸಂದರ್ಭದಲ್ಲಿ, 'ಸೋಕಾಲ್ಡ್ ಆರ್ಥಿಕ ತಜ್ಞ'ರಿಗೆ ಮಾತಿನ ಚಾಟಿ ಬೀಸಿದರು. 'ಕೆಲವು ಸೋಗಲಾಡಿ ಆರ್ಥಿಕ ತಜ್ಞರು, ಸೋಕಾಲ್ಡ್ ವಿಚಾರವಾದಿಗಳ ಜಿಜ್ಞಾಸೆಗಳು ಇತ್ತೀಚೆಗೆ ಶುರುವಾಗಿದೆ. ಭಾರತದಲ್ಲಿ ಆರ್ಥಿಕತೆ ಕುಂಠಿತವಾಗಿದೆ ಎಂಬ ಭಾಷಣವನ್ನು ಬಿಗಿಯುತ್ತಿದ್ದಾರೆ. ಈ ದೇಶಕ್ಕೆ ಮಣ್ಣಿನ ಕಂಪಿನ ಆಧಾರದಲ್ಲಿ ಹೊಸ ಆರ್ಥಿಕ ನೀತಿಯನ್ನು ಕೊಟ್ಟಿರುವುದೇ ಈ (ಬಿಜೆಪಿ) ಸಂಘಟನೆ. ರಾಜಕೀಯಕ್ಕೆ ಬರಬೇಕು, ಎಂಎಲ್ಲೆ, ಎಂಪಿ ಆಗ್ಬೇಕು ಅಂತ ಪಕ್ಷ ಕಟ್ಟಿಲ್ಲ. ರಾಜಕೀಯ ಗುದ್ದಾಟಗಳಿಗಿಂತಲೂ ಹೆಚ್ಚಾಗಿ ಒಂದು ವಿಚಾರ, ಸ್ಪಷ್ಟತೆ ನಮಗಿದೆ' ಎಂದರು.

'ರಾಷ್ಟ್ರೀಯತೆ, ಸಾಂಸ್ಕೃತಿಕ ರಾಷ್ಟ್ರೀಯವಾದ, ಹಿಂದುತ್ವ, ಧರ್ಮ, ದೇಶದ ಜತೆಗೆ ಈ ದೇಶದ ಆರ್ಥಿಕತೆ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ನಮಗಿದೆ. ಆರ್ಥಿಕತೆಯ ಹೆದ್ದಾರಿ ನಮಗೆ ತಿಳಿದಿದೆ. ಕಲ್ಪನೆ ಇಲ್ಲದೇ ಈ ಸಂಘಟನೆಯ ಜಾಡು ಹಿಡಿದಿಲ್ಲ. ಈ ಸಂಘಟನೆಗೆ ಆಳವಿದೆ. ವಿಚಾರ, ದಿಕ್ಕು, ವೈಚಾರಿಕ ನೆಲಗಟ್ಟು ಇದೆ" ಎಂದು ಹೇಳಿದರು.

ದೇಶಪಾಂಡೆ ವಿರುದ್ಧ ಆಕ್ರೋಶ; ವಿಡಿಯೊ ವೈರಲ್ದೇಶಪಾಂಡೆ ವಿರುದ್ಧ ಆಕ್ರೋಶ; ವಿಡಿಯೊ ವೈರಲ್

ರೀಲು ಬಿಟ್ಟ ಹೆಗಡೆ?
ನಗರದ ಆಶ್ರಮ ರಸ್ತೆಯಲ್ಲಿರುವ ಹಳದೀಪುರಕರ್ ಕುಟುಂಬದ ಮನೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅನಂತ ಕುಮಾರ್ ಹೆಗ್ಡೆ, ಕಾರ್ಯಕ್ರಮದ ಭಾಷಣದಲ್ಲಿ, 'ನಾನೇಕೆ ಹಿಂದು?' ಎಂಬ ಪುಸ್ತಕವನ್ನು ಗಾಂಧೀಜಿಯವರು ಬರೆದಿದ್ದಾರೆ. ಅದನ್ನು ಎಲ್ಲರೂ ಓದಬೇಕು' ಎಂದು ಅನಂತಕುಮಾರ್ ಹೆಗಡೆ ಹೇಳಿದರು. ಆದರೆ, ಅಸಲಿಗೆ ಈ ಪುಸ್ತಕವನ್ನು ಗಾಂಧೀಜಿ ಬರೆದಿಲ್ಲ. ಗೂಗಲ್ ಹುಡುಕಾಟದಲ್ಲಿಯೇ ಸಿಗುವ ಮಾಹಿತಿಯ ಪ್ರಕಾರ, ಈ ಪುಸ್ತಕವನ್ನು ಕಾಂಗ್ರೆಸ್ ಪಕ್ಷದ ರಾಜಕಾರಣಿ ಶಶಿ ತರೂರ್ ಅವರು 2018ರಲ್ಲಿ ಬರೆದಿದ್ದಾರೆ. ಹಿಂದೂ ಧರ್ಮದ ಇತಿಹಾಸ ಮತ್ತು ಅದರ ಪ್ರಮುಖ ಸಿದ್ಧಾಂತಗಳ ಬಗ್ಗೆ ಇದರಲ್ಲಿ ಅವರು ವಿವರಿಸಿದ್ದಾರೆ.

English summary
MP Ananthakumar Hegde has speak about the disqualified MLAs, who resigned from the Congress during the coalition government and expecting seat in current BJP government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X