• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಗಡೆ ಬಗ್ಗೆ ಹೇಳಿಕೆ; ಸ್ಪಷ್ಟನೆ ಕೊಟ್ಟ ಆನಂದ್ ಅಸ್ನೋಟಿಕರ್

By ಕಾರವಾರ ಪ್ರತಿನಿಧಿ
|

ಕಾರವಾರ, ಏಪ್ರಿಲ್ 07; "ನಾನು ಸಂಸದ ಅನಂತಕುಮಾರ್ ಹೆಗಡೆ ಸಾಯಲಿ ಎಂಬ ಅರ್ಥದಲ್ಲಿ ಹೇಳಿಲ್ಲ. ಕೆಲವರು ಇದನ್ನ ತಪ್ಪಾಗಿ ತಿಳಿದುಕೊಂಡಿದ್ದಾರೆ" ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಹೇಳಿದರು.

ಬುಧವಾರ ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಆರು ಬಾರಿ ಸಂಸದರಾಗಿ ಆಯ್ಕೆಯಾದ ಅನಂತಕುಮಾರ್ ಹೆಗಡೆ ಜಿಲ್ಲೆಯಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಅದಕ್ಕಾಗಿ ಅವರು ಇದ್ದರೇನು, ಹೋದರೇನು ಅಂದಿದ್ದೆ. ನನ್ನ ಈ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೇನೆ. ಆದರೆ ಅವರು ಸಾಯಲಿ ಎಂದು ನಾನು ಬಯಸಿಲ್ಲ" ಎಂದರು.

ಅವ್ನು ಸತ್ರೇನು, ಬದುಕಿದ್ರೇನು, ನನಗ್ಯಾಕೆ ಬೇಕು?: ಸಂಸದ ಹೆಗಡೆ ಕುರಿತು ನಾಲಿಗೆ ಹರಿಬಿಟ್ಟ ಮಾಜಿ ಸಚಿವ

"ನಾನು ಮೋದಿ ಅಭಿಮಾನಿ, ಸಂಸತ್ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕೆ ಇಳಿದಾಗ ಮೋದಿ ವಿರುದ್ಧ ಒಂದೇ ಒಂದು ಮಾತನ್ನೂ ಹೇಳಿರಲಿಲ್ಲ. ಅನಂತಕುಮಾರ್ ಬಾಯಿಗೆ ಬಂದಂತೆ ಮಾತನಾಡಿ ಮೋದಿಯವರಿಗೆ ಮುಜುಗರ ತಂದಿದ್ದಾರೆ" ಎಂದು ತಿಳಿಸಿದರು.

ಆನಂದ್ ಅಸ್ನೋಟಿಕರ್ ಮಾನಸಿಕ ಆರೋಗ್ಯ ಪ್ರಶ್ನಿಸಿದ ಬಿಜೆಪಿ!

"ಈ ಹಿಂದೆ ಹಾಲಿ ವಿಧಾನಸಭಾಧ್ಯಕ್ಷ ವಿಶ್ವೇಶರ ಹೆಗಡೆ ಕಾಗೇರಿ, ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಕಾರವಾರದ ಜಗದೀಶ್ ಬಿರ್ಕೋಡಿಕರ್ ಎನ್ನುವವರ ಮೇಲೂ ಅನಂತಕುಮಾರ್ ಹೆಗಡೆ ಹಲ್ಲೆ ಮಾಡಿದ್ದರು" ಎಂದರು.

ರಾಜಕೀಯ ನಿವೃತ್ತಿ ಪಡೆಯಲಿದ್ದಾರಾ ಸಂಸದ ಅನಂತಕುಮಾರ ಹೆಗಡೆ?

"ಅನಂತಕುಮಾರ್ ಬಗ್ಗೆ ಮಾತನಾಡಿದೆ ಎಂದು ನನ್ನ ನಡತೆ ಬಗ್ಗೆ ಬಿಜೆಪಿಯ ಕೆಲವು ಮರಿ ಪುಢಾರಿಗಳು ಮಾತನಾಡುತ್ತಾರೆ. ಈ ಮೂವರು ಅನಂತಕುಮಾರ್ ನಮ್ಮ ಮೇಲೆ ಹಲ್ಲೆ ಮಾಡಿಲ್ಲವೆಂದು ದೇವರ ಬಳಿ ಬಂದು ಪ್ರಮಾಣ ಮಾಡಲಿ. ಅವಾಗ ಯಾರ ನಡತೆ ಏನು ಎಂದು ಎಲ್ಲರಿಗೂ ಗೊತ್ತಾಗಲಿದೆ" ಎಂದು ಸವಾಲು ಹಾಕಿದರು.

"ತನ್ನ ತಾಯಿಯ ಚಿಕಿತ್ಸೆಗೆ ಒಂದೈದು ನಿಮಿಷ ತಡವಾಯಿತೆಂದು ಶಿರಸಿ ಟಿಎಸ್‌ಎಸ್ ಆಸ್ಪತ್ರೆಯ ವೈದ್ಯರಿಗೇ ಅನಂತಕುಮಾರ್ ಹಿಗ್ಗಾಮುಗ್ಗ ಹೊಡೆದಿದ್ದರು. ಇದು ಅವರ ಸಂಸ್ಕೃತಿಯನ್ನು ತಿಳಿಸುತ್ತದೆ. ನಾನು ಯಾರಿಗೂ ಹೆದರುವ ಮನುಷ್ಯನಲ್ಲ" ಎಂದು ವಿವರಣೆ ನೀಡಿದರು.

   #Covid19Updates: ರಾಜ್ಯದಲ್ಲಿ ಮತ್ತೆ ಕೋವಿಡ್ ಅಬ್ಬರ.. ಬರೋಬ್ಬರಿ 6976 ಜನರಿಗೆ ಸೋಂಕು | Oneindia Kannada

   "ಒಂದು ಕಾಲದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ಹೋರಾಟ ಮಾಡಿದವನು ನಾನು. ನನ್ನ ಜಿಲ್ಲೆಗಾಗಿ ನಾನು ಹೋರಾಟ ಮಾಡುತ್ತೇನೆ. ನಾನು ಹಾಗೂ ನನ್ನ ಮಾನಸಿಕ ಸ್ಥಿತಿ ಸರಿಯಾಗಿಯೇ ಇದೆ" ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

   English summary
   Former minister and JD(S) leader Anand Asnotikar clarification on his comment on Uttara Kannada BJP MP Anant Kumar Hegde.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X