• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶುಕ್ರವಾರ ಕಾರವಾರಕ್ಕೆ ವಿಜಯ ಜ್ಯೋತಿ; ನೌಕಾಪಡೆಯಿಂದ ಸ್ವಾಗತ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಸೆಪ್ಟೆಂಬರ್ 16; 'ಸ್ವರ್ಣಿಮ್ ವಿಜಯ್ ವರ್ಷ'ದ ಅಂಗವಾಗಿ 2020ರ ಡಿಸೆಂಬರ್ 16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿರುವ ಕಾರ್ಯಕ್ರಮಗಳು ಮುಂದುವರಿದಿದೆ. ಈ ವರ್ಷದ ಡಿಸೆಂಬರ್ 16ರಂದು ವಾರ್ಷಿಕೋತ್ಸವ ಸಮಾರಂಭವು ನವದೆಹಲಿಯಲ್ಲಿ ನಡೆಯಲಿದೆ. ಇದರ ಅಂಗವಾಗಿ ದೇಶದಾದ್ಯಂತ ಸಂಚರಿಸುತ್ತಿರಿವ ವಿಜಯ ಜ್ಯೋತಿಯು ಸೆಪ್ಟೆಂಬರ್ 17ರಂದು ಕಾರವಾರಕ್ಕೆ ಆಗಮಿಸಲಿದೆ.

1971ರ ಭಾರತ- ಪಾಕ್ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸಾಧಿಸಿದ ವಿಜಯದ ಸಂಕೇತವಾಗಿ ಈ ಬಾರಿ 50ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸಲು, ವಿಜಯಕ್ಕೆ ಕಾರಣರಾದವರಿಗೆ ಗೌರವ ಸಲ್ಲಿಸಲು ಮತ್ತು ವಿಜಯದ ಆಚರಣೆಯ ಸಂಕೇತವಾಗಿ ಭಾರತೀಯ ರಕ್ಷಣಾ ಪಡೆಗಳಿಂದ 'ಸ್ವರ್ಣಿಮ್ ವಿಜಯ್ ವರ್ಷ'ವೆಂದು ಆಚರಿಸಲಾಗುತ್ತಿದೆ.

 ಕಾರವಾರ: ಅ.9ರವರೆಗೆ ಪ್ರಮುಖ ಕಡಲತೀರಗಳಲ್ಲಿ ನಿಷೇಧಾಜ್ಞೆ ಜಾರಿ ಕಾರವಾರ: ಅ.9ರವರೆಗೆ ಪ್ರಮುಖ ಕಡಲತೀರಗಳಲ್ಲಿ ನಿಷೇಧಾಜ್ಞೆ ಜಾರಿ

ಒಂದು ವರ್ಷದ ಅವಧಿಯ 'ಸ್ವರ್ಣಿಮ್ ವಿಜಯ್ ವರ್ಷ' ಆಚರಣೆಯ ಕಾರ್ಯಕ್ರಮಗಳಿಗೆ ಡಿಸೆಂಬರ್ 16, 2020ರಂದು ಪ್ರಧಾನಿ ನರೇಂದ್ರ ಮೋದಿ ವಿಜಯ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದ್ದರು. ಈ ವಿಜಯದ ಜ್ಯೋತಿಯು ಭಾರತದ ಉದ್ದಗಲಕ್ಕೆ ಸಂಚರಿಸುತ್ತಿದ್ದು, ಡಿಸೆಂಬರ್ 15ರಂದು ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ತಲುಪಲಿದೆ. ಈ ಜ್ಯೋತಿ ಇದೀಗ ಕಾರವಾರ ಐಎನ್ಎಸ್ ಕದಂಬ ನೌಕಾನೆಲೆಗೆ ಬರಲಿದ್ದು, ಸೆಪ್ಟೆಂಬರ್ 24ರವರೆಗೆ ಇಲ್ಲಿಯೇ ಇರಲಿದೆ.

 ಕಾರವಾರ: ವನ್ನಳ್ಳಿ ಬೀಚ್‌ನ ಬಂಡೆ ಮೇಲೆ ಕುಳಿತು ಪೋಸ್ ನೀಡುತ್ತಿದ್ದ ವ್ಯಕ್ತಿ ಸಮುದ್ರಪಾಲು! ಕಾರವಾರ: ವನ್ನಳ್ಳಿ ಬೀಚ್‌ನ ಬಂಡೆ ಮೇಲೆ ಕುಳಿತು ಪೋಸ್ ನೀಡುತ್ತಿದ್ದ ವ್ಯಕ್ತಿ ಸಮುದ್ರಪಾಲು!

ಭಾರತೀಯ ಸೇನೆ ಮತ್ತು ನೌಕಾಪಡೆ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲಿ 'ಆಪರೇಷನ್ ವಿಜಯ್' ಸಮಯದಲ್ಲಿ ಸರ್ವೋಚ್ಚ ತ್ಯಾಗ ಮಾಡಿದವರ ಗೌರವಾರ್ಥವಾಗಿ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ನಿರ್ಮಿಸಲಾಗಿರುವ ಯುದ್ಧ ಸ್ಮಾರಕದಲ್ಲಿ ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ವಿಜಯದ ಜ್ಯೋತಿಯನ್ನು ಬರಮಾಡಿಕೊಳ್ಳಲಿದ್ದಾರೆ.

 ಕಾರವಾರ ಬಂದರು ಯೋಜನೆಗೆ ಭಾಗಶಃ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್ ಕಾರವಾರ ಬಂದರು ಯೋಜನೆಗೆ ಭಾಗಶಃ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್

ವಿಜಯ ಜ್ಯೋತಿಯು ಕಾರವಾರದಲ್ಲಿ ಸೆಪ್ಟೆಂಬರ್ 24ರವರೆಗೆ ಇರುವ ಸಮಯದಲ್ಲಿ ಯುದ್ಧವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ, ಶಾಲೆಗಳಲ್ಲಿ, ಕಾರವಾರದ ಎನ್‌ಸಿಸಿ ಘಟಕದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು‌ ನಿಗದಿಪಡಿಸಲಾಗಿದೆ.

ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಐಎನ್ಎಸ್ ಚಾಪೆಲ್ ವಾರ್ಷಿಪ್ ಮ್ಯೂಸಿಯಂ ಬಳಿಯ ಮೇಜರ್ ರಘೋಬಾ ರಾಣೆಯ ಪ್ರತಿಮೆಯ ಬಳಿ ಸೆ.22ರಂದು ಸಮಾರಂಭಗಳನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 24ರಂದು ವಿಜಯ ಜ್ಯೋತಿಯು ಬೆಳಗಾವಿಗೆ ಹೊರಡಲಿದೆ.

ಡಿಸೆಂಬರ್ 1971ರಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಸೈನ್ಯದ ಮೇಲೆ ನಿರ್ಣಾಯಕ ಮತ್ತು ಐತಿಹಾಸಿಕ ವಿಜಯವನ್ನು ಪಡೆದುಕೊಂಡವು. ಇದು ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಯಿತು ಮತ್ತು ಮಹಾಯುದ್ಧ IIರ ನಂತರ ಅತಿದೊಡ್ಡ ಮಿಲಿಟರಿ ಶರಣಾಗತಿಗೆ ಕಾರಣವಾಯಿತು.

2020ರ ಡಿಸೆಂಬರ್ 16ರಿಂದ ರಾಷ್ಟ್ರವು ಭಾರತ- ಪಾಕ್ ಯುದ್ಧದ ಗೆಲುವಿನ 50 ವರ್ಷಗಳ ಸಂಭ್ರಮಾಚರಣೆಯನ್ನು ಈ ಬಾರಿ ಆಚರಿಸಲಾಗುತ್ತಿದ್ದು, ಇದನ್ನು 'ಸ್ವರ್ಣಿಮ್ ವಿಜಯ್ ವರ್ಷ್' ಎಂಬ ಹೆಸರಿನಲ್ಲಿ ದೇಶದಾದ್ಯಂತ ಆಚರಣೆಗೊಳ್ಳುತ್ತಿದೆ. ಇದರ ಅಂಗವಾಗಿ ರಾಷ್ಟ್ರದಾದ್ಯಂತ ವಿವಿಧ ಸ್ಮರಣೀಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಭಾಗವಾಗಿಯೇ ಕೆಲವು ದಿನಗಳ ಹಿಂದೆ ಸ್ವರ್ಣಿಮ್ ವಿಜಯ ಅಭಿಯಾನದ ಬೈಕ್ ಜಾಥಾಕ್ಕೆ ಕಾರವಾರ ಕದಂಬ ನೌಕಾನೆಲೆಯಲ್ಲಿರುವ ಐಎನ್ಎಸ್ ವಿಕ್ರಮಾದಿತ್ಯದ ಮೇಲಿನಿಂದ ಚಾಲನೆ ನೀಡಲಾಗಿತ್ತು.

ನೌಕಾಪಡೆಯ ಸುಮಾರು 50 ಸಿಬ್ಬಂದಿ 11 ಬೈಕ್ ಹಾಗೂ ಎರಡು ಬೆಂಗಾವಲು ವಾಹನಗಳ ಮೂಲಕ ನವದೆಹಲಿಯವರೆಗೆ 6 ಸಾವಿರ ಕಿಲೋ ಮೀಟರ್ ಜಾಥಾ ಕೈಗೊಂಡಿದ್ದರು. ಬುಧವಾರ ಈ ಜಾಥಾ ಗುಜರಾತ್‌ಗೆ ತಲುಪಿದ್ದು, ಐಎನ್ಎಸ್ ವಲ್ಸುರಾ, ಸೈನಿಕ ಶಾಲೆ, ಭೂಸೇನೆ ಮತ್ತು ವಾಯುಸೇನೆಯ ವಿವಿಧ ಯುನಿಟ್ ಗಳಿಗೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆಗಳ ಪ್ರದೇಶಕ್ಕೂ ಭೇಟಿ ನೀಡಿ ಮುಂದೆ ಸಾಗಿದೆ. ಈ ಜಾಥಾ ಅಕ್ಟೋಬರ್ 21ಕ್ಕೆ ನವದೆಹಲಿ ತಲುಪುವ ಸಾಧ್ಯತೆ ಇದೆ.

   RSS ಟೀಕಿಸೋ ಭರದಲ್ಲಿ ಮಹಾತ್ಮ‌ಗಾಂಧಿ ಮಾನ ಕಳೆದ ರಾಹುಲ್ ಗಾಂಧಿ | Oneindia Kannada
   English summary
   Indian Navy base Karwar, Karnataka all set to welcome Vijay Jyoti on September 17, 2021. As part of the year-long Swarnim Vijay Varsh celebrations Vijay Jyoti will come to Karwar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X