ಕಾರವಾರದ ಸೀಬರ್ಡ್ ನೌಕಾನೆಲೆಗೆ ಭೇಟಿ ನೀಡಿದ ರಕ್ಷಣಾ ಸ್ಥಾಯಿ ಸಮಿತಿ ತಂಡ
ಕಾರವಾರ, ಜನವರಿ 20: ಅತಿದೊಡ್ಡ ನೌಕಾನೆಲೆಯಾಗಿರುವ ಕಾರವಾರದ ಕದಂಬ ನೌಕಾನೆಲೆಗೆ ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿಯ ತಂಡ ಭೇಟಿ ನೀಡಿತು.
ರಕ್ಷಣಾ ಸ್ಥಾಯಿ ಸಮಿತಿಯ 31 ಸಂಸದರ ಪೈಕಿ ಎನ್.ಸಿ.ಪಿ ಮುಖಂಡ ಶರದ್ ಪವಾರ್ ಸೇರಿದಂತೆ 20ಕ್ಕೂ ಹೆಚ್ಚು ಸಂಸದರು ಕಾರವಾರಕ್ಕೆ ಗೋವಾದಿಂದ ರಸ್ತೆಯ ಮೂಲಕ ಅರಗಾದ ಸೀಬರ್ಡ್ ನೌಕಾನೆಲೆಗೆ ಭೇಟಿ ನೀಡಿದರು.
ಜ.20ರಂದು ಕದಂಬ ನೌಕಾನೆಲೆಗೆ ರಾಹುಲ್ ಗಾಂಧಿ, ಶರದ್ ಪವಾರ್ ಸೇರಿದಂತೆ ಸಂಸದರ ತಂಡ ಭೇಟಿ
ಸಂಸದ ರಾಹುಲ್ ಗಾಂಧಿಯವರು ಗೈರು ಇದ್ದಾರೆನ್ನಲಾಗಿದೆ. ವಿವಿಧ ಸಂಸದರಿಗಿರುವ ಶ್ರೇಣಿಯಾಧಾರದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಭದ್ರತಾ ಪಡೆ, ಅಂಬ್ಯುಲೆನ್ಸ್ ಗಳನ್ನು ಒಳಗೊಂಡಂತೆ 35ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಸಾಗಿದವು. ಈ ವೇಳೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.
ಕದಂಬ ನೌಕಾನೆಲೆಯಲ್ಲಿ ಸೀಬರ್ಡ್ ಯೋಜನೆಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ನೌಕಾನೆಲೆಯಲ್ಲಿ ಆಗುತ್ತಿರುವ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಹಾಗೂ ನೂತನ ಇತರೆ ಕಾಮಗಾರಿಗಳ ಬಗ್ಗೆ ಸಂಸದರು ಭೇಟಿ ಸಂದರ್ಭದಲ್ಲಿ ಮಾಹಿತಿ ಪಡೆಯಲಿದ್ದಾರೆ.