ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ: ಕಡಲತೀರದಲ್ಲಿ ಅಪರೂಪದ 'ಹಾಕ್ಸ್‌ಬಿಲ್' ಸಮುದ್ರ ಆಮೆಯ ಕಳೇಬರ ಪತ್ತೆ

|
Google Oneindia Kannada News

ಕಾರವಾರ, ಆಗಸ್ಟ್ 31: ಪಶ್ಚಿಮ ಕರಾವಳಿಯಲ್ಲಿ ಮೊದಲ ಬಾರಿಗೆ ಕಾರವಾರ ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ 'ಹಾಕ್ಸ್‌ಬಿಲ್' ಸಮುದ್ರ ಆಮೆಯ ಕಳೇಬರ ಪತ್ತೆಯಾಗಿದೆ.

ಆಗಸ್ಟ್ ತಿಂಗಳ ಆರಂಭದಲ್ಲಿ ಎರಡು ಹಸಿರು ಆಮೆಗಳು ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಬಂದು ಬಿದ್ದಿದ್ದವು. ಕಡಲಶಾಸ್ತ್ರಜ್ಞರು ಇದರಿಂದ ಗೊಂದಲಕ್ಕೊಳಗಾಗಿದ್ದರು. ಈ ನಡುವೆ ಅತ್ಯಂತ ಅಪರೂಪದ 'ಹಾಕ್ಸ್ ಬಿಲ್' ಆಮೆ ತೀರದಲ್ಲಿ ಬಂದು ಬಿದ್ದಿದೆ.

"ಕಡಲ ಜೀವಶಾಸ್ತ್ರ ವಿಭಾಗದ ನಮ್ಮ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಪಂಚಮಿ ಈ ಆಮೆಯನ್ನು ಕಾರವಾರದ ಮಾಜಾಳಿಯ ತೀಳ್ಮಾತಿ ಕಡಲತೀರದಲ್ಲಿ ಕಂಡಿದ್ದಾರೆ. ಇಲ್ಲಿ ಪತ್ತೆಯಾದ ಮೊದಲ 'ಹಾಕ್ಸ್ ಬಿಲ್' ಆಮೆ ಇದಾಗಿದ್ದು, ನಿಜಕ್ಕೂ ಇದರ ಅಧ್ಯಯನದ ಅಗತ್ಯವಿದೆ," ಎಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಾಗರ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಕುಮಾರ ಹರಗಿ ಅಭಿಪ್ರಾಯಪಟ್ಟಿದ್ದಾರೆ.

Karwar: A Rare Hawksbill Sea Turtles Deadbody Was Found In Majali Beach

"ಐದು ಕಡಲ ಆಮೆಗಳಲ್ಲಿ ಈ ಆಮೆಯನ್ನು ಚಿಕ್ಕದು ಎಂದು ಪರಿಗಣಿಸಲಾಗಿದೆ. ಇದು ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಹವಳದ ದಿಬ್ಬಗಳ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಳವಿಲ್ಲದ ನೀರಿನಲ್ಲಿ ಇವು ಕಡಿಮೆ ಸಂಖ್ಯೆಯಲ್ಲಿವೆ. ಇವು 76 ಸೆಂ.ಮೀ. ಉದ್ದ ಮತ್ತು 100 ಕಿಲೋ ಗ್ರಾಂಗಳಷ್ಟು ತೂಕದವರೆಗೆ ಬೆಳೆಯುತ್ತದೆ," ಎಂದವರು ಮಾಹಿತಿ ನೀಡಿದರು.

"ಇದರ ಗೂಡುಕಟ್ಟುವಿಕೆ ಮತ್ತು ಲೈಂಗಿಕ ಪ್ರಬುದ್ಧತೆಯ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ ಇವು 2- 3 ವರ್ಷಗಳಿಗೊಮ್ಮೆ ಮಿಲನ ಮಾಡುತ್ತವೆ ಮತ್ತು ಸಂತಾನೋತ್ಪತ್ತಿ ಮಾಡುತ್ತವೆ. ಗೂಡುಕಟ್ಟುವ ನಡವಳಿಕೆಯು ಆಲಿವ್ ರಿಡ್ಲಿಯೊಂದಿಗೆ ಬಹುತೇಕ ಹೋಲುತ್ತದೆ," ಎನ್ನುತ್ತಾರೆ ಅವರು.

Karwar: A Rare Hawksbill Sea Turtles Deadbody Was Found In Majali Beach

"ಈ ಆಮೆಯು ಗಿಡುಗವನ್ನು ಹೋಲುವ ಮೊಂಡಾದ ಬಾಯಿಯನ್ನು ಹೊಂದಿದೆ ಮತ್ತು ಕ್ಲಿಪ್ಪರ್‌ಗಳ ಮೇಲೆ ಎರಡು ಉಗುರುಗಳು ಮತ್ತು ಕ್ಯಾರಪೇಸ್‌ನ ಆಕಾರವು ಇತರ ಆಮೆಗಳಿಗಿಂತ ಭಿನ್ನವಾಗಿದೆ. ಕಡಲ ಆಮೆಗಳು ತನ್ನ ದೂರದ ವಲಸೆಗೆ ಹೆಸರುವಾಸಿಯಾಗಿದ್ದು, 4000 ಕಿ.ಮೀ.ಗಿಂತಲೂ ಹೆಚ್ಚು ದೂರ ಈಜಬಲ್ಲವಾಗಿವೆ," ಎಂದೂ ಶಿವಕುಮಾರ ಹರಗಿ ವಿವರಿಸಿದರು.

ಘಟನೆಯ ಬಗ್ಗೆ ತಿಳಿದ ಆರ್‌ಎಫ್‌ಒ ಪ್ರಮೋದ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿದ್ದು, "ಇದು ನಿಜಕ್ಕೂ ದೊಡ್ಡ ಬೆಳವಣಿಗೆ. ಈ ಪ್ರದೇಶದ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ಇದು ಸಾಬೀತು ಮಾಡಿದೆ," ಎಂದು ಅವರು ಹೇಳಿದರು. ಕಾರವಾರ ಡಿಸಿಎಫ್ ವಸಂತ್ ರೆಡ್ಡಿ, "ಮೊಟ್ಟಮೊದಲ ಬಾರಿಗೆ ಗಿಡುಗ ರೂಪದ ಆಮೆ ಪತ್ತೆಯಾಗಿದೆ. ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಸಾವಿನ ಕಾರಣವನ್ನು ಕಂಡುಹಿಡಿಯಲು ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ," ಎಂದು ಹೇಳಿದರು.

Karwar: A Rare Hawksbill Sea Turtles Deadbody Was Found In Majali Beach

ಅರಣ್ಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ ಹರಗಿ, ಆಮೆ ಸುಮಾರು 4- 5 ಕೆಜಿ ತೂಕದ ಮರಿ ಎಂದು ಹೇಳಿದರು. ಇದು ಸುಮಾರು 41 ಸೆಂ.ಮೀ. ಉದ್ದ ಮತ್ತು 31 ಸೆಂ.ಮೀ. ಅಗಲವಿದೆ ಎಂದು ತಿಳಿಸಿದ್ದಾರೆ.

Recommended Video

ಗೆಸ್ಟ್ ಹೌಸ್ ಒಳಗೆ ರಾಜನಂತೆ ಬೀಗಿದ ಚಿರತೆ | Oneindia Kannada

English summary
A rare and endangered Hawksbill sea turtle's deadbody was found on the Majali beach of Karwar Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X