• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏನಿದು ಅಚ್ಚರಿ! ಕಾಳಿ ನದಿಯಲ್ಲಿ ಕಾಣಿಸಿತು ಡಾಲ್ಫಿನ್‌ಗಳ ಗುಂಪು

|

ಕಾರವಾರ, ಏಪ್ರಿಲ್ 9: ಕಡಲಿನಲ್ಲಿ ಡಾಲ್ಫಿನ್‌ಗಳು ಇರುವುದು ಸಾಮಾನ್ಯ. ಇವುಗಳ ವೀಕ್ಷಣೆಗೆಂದೇ ಗೋವಾ ಕಡಲತೀರದಲ್ಲಿ ಡಾಲ್ಫಿನ್ ವೀಕ್ಷಣಾ ಚಟುವಟಿಕೆ ನಡೆಸಲಾಗುತ್ತಿದ್ದು, ಇದು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರ ಕೂಡ ಹೌದು.

ಇನ್ನು ಗೋವಾದ ಕಾಣಕೋಣ ಕಡಲತೀರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಡಾಲ್ಫಿನ್‍ಗಳು ಕಾರವಾರ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಇವೆ ಎನ್ನಲಾಗುತ್ತದೆ. ಆದರೆ ಇದೀಗ ಡಾಲ್ಫಿನ್‌ಗಳು ಕಾರವಾರ ವ್ಯಾಪ್ತಿಯ ಕಾಳಿ ನದಿಯಲ್ಲೂ ಕಾಣಸಿಗುವ ಮೂಲಕ ಅಚ್ಚರಿ ಮೂಡಿಸಿವೆ.

ಸಮುದ್ರ ಸ್ನಾನಕ್ಕೆ ಸಂಪೂರ್ಣ ನಿರ್ಬಂಧ: ಕಾರವಾರ ಉಪ ವಿಭಾಗಾಧಿಕಾರಿ ವಿದ್ಯಾಶ್ರೀ

ಡಾಲ್ಫಿನ್ ವೀಕ್ಷಣೆ ನಮ್ಮ ರಾಜ್ಯದಲ್ಲಿ ಹೆಚ್ಚು ಪ್ರಚಲಿತವಾಗಿಲ್ಲ. ಆದರೆ ಕಾರವಾರಕ್ಕೆ ಬೋಟಿಂಗ್ ಗೆಂದು ಬರುವ ಪ್ರವಾಸಿಗರನ್ನು ಡಾಲ್ಫಿನ್‌ಗಳು ಇರುವ ಪ್ರದೇಶಗಳಾದ ಕೂರ್ಮಗಡ, ದೇವಗಡ ಸೇರಿದಂತೆ ಅರಬ್ಬೀ ಸಮುದ್ರದಲ್ಲಿ ಕೆಲ ಬೋಟಿಂಗ್ ಚಟುವಟಿಕೆ ನಡೆಸುವವರು ಕರೆದೊಯ್ದು, ಡಾಲ್ಫಿನ್ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡುತ್ತಾರೆ.

ಆದರೆ ಸರಿಯಾದ ಸಮಯಕ್ಕೆ ತೆರಳಿದರೆ ಮಾತ್ರ ಅದೃಷ್ಟವಿದ್ದವರಿಗೆ ಈ ಡಾಲ್ಫಿನ್‌ಗಳು ಅಲ್ಲಲ್ಲಿ, ಒಮ್ಮೊಮ್ಮೆ ಕಾಣಸಿಗುತ್ತವೆ. ಬಹುತೇಕರು ಕೇವಲ ಬೋಟ್ ರೈಡ್ ಮಾಡಿ ವಾಪಸ್ಸಾಗುತ್ತಾರೆ.

ಆದರೀಗ ಕಾಳಿ ನದಿಯಲ್ಲೂ ಡಾಲ್ಫಿನ್‌ಗಳು ಕಾಣ ಸಿಗುತ್ತಿರುವುದು ವಿಶೇಷವಾಗಿದ್ದು, ಸ್ಥಳೀಯರಿಗೆ ವೀಕ್ಷಣೆಗೂ ಸಿಗುತ್ತಿವೆ. ಕಾಳಿ ರಿವರ್ ಗಾರ್ಡನ್ ಭಾಗದಲ್ಲಿ ಡಾಲ್ಫಿನ್‌ಗಳ ಗುಂಪು ಮೀನುಗಾರರು ಹಾಗೂ ಪ್ರವಾಸಿಗರಿಗೆ ಕಾಣಸಿಗುತ್ತಿವೆ.

ನದಿಯಲ್ಲಿ ಡಾಲ್ಫಿನ್‌ಗಳು ಇರಲು ಕಾರಣವೇನು?

ಸಮುದ್ರದಲ್ಲಿ ಡಾಲ್ಫಿನ್‌ಗಳು ಇರುವುದು ಸಾಮಾನ್ಯ. ಆದರೆ ನದಿಗೆ ಹೇಗೆ ಬಂದವು ಎಂಬ ಬಗ್ಗೆ ಕಡಲಜೀವ ವಿಜ್ಞಾನ ಕೇಂದ್ರದ ಡಾ.ಶಿವಕುಮಾರ್ ಹರಗಿ ವಿವರಿಸಿದ್ದಾರೆ. "ಅರಬ್ಬಿ- ಕಾಳಿ ಸಂಗಮದ ಪ್ರದೇಶ ಮಡ್ಲೆ ಮೀನುಗಳ ಆಶ್ರಯತಾಣ. ಅವು ಗುಂಪಾಗಿ ಈ ಭಾಗದಲ್ಲಿ ಹೆಚ್ಚಾಗಿರುತ್ತೇವೆ. ಇನ್ನು ಅರಬ್ಬಿ ಸಮುದ್ರದ ಡಾಲ್ಫಿನ್‌ಗಳು ಕಾಳಿ ಸಂಗಮ ಪ್ರದೇಶಕ್ಕೂ ಬರುತ್ತಿರುತ್ತವೆ. ಹೀಗಾಗಿ ಅಲ್ಲಿಗೆ ಬಂದಾಗ ಮಡ್ಲೆ ಗುಂಪುಗಳನ್ನು ಹಿಂಬಾಲಿಸಿಕೊಂಡು ಕಾಳಿ ನದಿಗೆ ಬಂದಿರಬಹುದು'' ಎನ್ನುತ್ತಾರೆ.

ಇನ್ನು ಈ ಬಗ್ಗೆ ಮೀನುಗಾರರನ್ನು ಕೇಳಿದರೆ, "ಸಮುದ್ರದಲ್ಲಿ ಮತ್ಸ್ಯ ಕ್ಷಾಮವಿದೆ. ಯಾವುದೇ ಮೀನುಗಳು ಸಿಗದ ಕಾರಣ ಡಾಲ್ಫಿನ್‌ಗಳು ಆಹಾರ ಹುಡುಕಿಕೊಂಡು ಕಾಳಿ ನದಿಗೆ ಬಂದಿವೆ. ಕಾಳಿ ನದಿಯಲ್ಲಿ ಸಣ್ಣಪುಟ್ಟ ಮೀನುಗಳು ಹೇರಳವಾಗಿರುತ್ತವೆ' ಎನ್ನುತ್ತಾರೆ.

   #Covid19Update : ದೇಶದಲ್ಲಿ 24 ಗಂಟೆಗಳಲ್ಲಿ 1,31,968 ಜನರಿಗೆ ಕೊರೊನಾ ಪಾಸಿಟಿವ್ | Oneindia Kannada

   ಒಟ್ಟಾರೆಯಾಗಿ, ಸಮುದ್ರದಲ್ಲಿ ಡಾಲ್ಫಿನ್ ವೀಕ್ಷಣೆ ನಡೆಸುವವರು ಇನ್ನು ಮುಂದೆ ಕಾಳಿ ನದಿಯಲ್ಲೂ ಡಾಲ್ಫಿನ್ ವೀಕ್ಷಣಾ ಚಟುವಟಿಕೆ ನಡೆಸಿದರೂ ಅಚ್ಚರಿಪಡಬೇಕಿಲ್ಲ.

   English summary
   Dolphins are common in the sea. But now dolphins are also found off river Kali coast near Karwar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X