ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈಗಾದಲ್ಲಿ ಬರ್ಡ್‌ ಮ್ಯಾರಾಥಾನ್; 8 ಹೊಸ ಪಕ್ಷಿಗಳು ಪತ್ತೆ

By ಡಿ.ಪಿ.ನಾಯ್ಕ
|
Google Oneindia Kannada News

ಕಾರವಾರ, ಜನವರಿ 22: ಪರಿಸರ ಮುಂದಾಳತ್ವ ಕಾರ್ಯಕ್ರಮದಡಿ ಕೈಗಾ ಅಣು ವಿದ್ಯುತ್ ಕೇಂದ್ರವು ಭಾನುವಾರ 'ಕೈಗಾ ಬರ್ಡ್‌ ಮ್ಯಾರಾಥಾನ್' 8ನೇ ಆವೃತ್ತಿಯ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಕೈಗಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಒಟ್ಟು 8 ಹೊಸ ಪಕ್ಷಿಗಳು ಪತ್ತೆಯಾಗಿವೆ.

ಈ ಮೂಲಕ ಕೈಗಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಆಯೋಜಿಸಿದ್ದ ಪಕ್ಷಿ ಗಣತಿಯಲ್ಲಿ ಈವರೆಗೆ ಪತ್ತೆಯಾದ ಪಕ್ಷಿಗಳ ಸಂಖ್ಯೆ 284ಕ್ಕೆ ಏರಿದೆ.

115 ಪಕ್ಷ ವೀಕ್ಷಣಾಕಾರರು ಈ ಬರ್ಡ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದರು. ಹೊಸ ಪಕ್ಷಿಗಳು ಸ್ಥಾವರದ ಪರಿಸರದಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಇಲ್ಲಿನ ವಾತಾವರಣವು ಆರೋಗ್ಯಕರವಾಗಿದೆ ಎಂದು ಕೈಗಾ ಅಣು ವಿದ್ಯುತ್ ಸ್ಥಾವರದ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.

 ಹೊಸ ಪಕ್ಷಿಗಳು ಇವು

ಹೊಸ ಪಕ್ಷಿಗಳು ಇವು

ಇಂಡಿಯನ್ ಸ್ವಿಫ್ಟಲೆಟ್, ವೆಟ್ರಂಪಡ್ ಸ್ಪೆನ್ ಟೇಲ್, ಯುರೇಶಿಯನ್ ಹಾಬಿ, ನಾರ್ತರ್ನ್‌ ಪಿನ್ಟೇಲ್, ನಾರ್ತರ್ನ್‌ ಶೆವೇಲಿಯರ್, ಯುವ್ರೀ ಬೆಲ್ಲಿಡ್ ಕುಕ್ಕೂ, ಗ್ರೇಟರ್ ಸ್ಪಾಟ್ಟೆಡ್‌ ಈಗಲ್, ಯುರೇಶಿಯನ್ ಸ್ಪಾರ್ರೋ ಹಾಕ್‌ಗಳು ಈ ಬಾರಿ ಪತ್ತೆಯಾದ ಹೊಸ ಪಕ್ಷಿಗಳಾಗಿವೆ.

 115 ಮಂದಿ ಭಾಗಿ

115 ಮಂದಿ ಭಾಗಿ

ಸ್ಥಳೀಯ ಕೈಗಾ ನೌಕರರು, ಶಿರಸಿಯ ಅರಣ್ಯ ಮಹಾವಿದ್ಯಾಲಯ, ಉತ್ತರ ಕರ್ನಾಟಕ ಪಕ್ಷಿ ವೀಕ್ಷಣಾ ತಂಡ, ಗೋವಾ ಬರ್ಡ್‌ ಕನ್ಸರ್ವೇಷನ್ ನೆಟ್ವರ್ಕ್‌, ಗೋವಾ ಮಹಾವಿದ್ಯಾಲಯ, ಬೆಂಗಳೂರು ಪಕ್ಷಿ ವೀಕ್ಷಣಾಕಾರರ ಸಂಘ, ಡೆಹರಾಡೂನ್‌ನ ವೈಲ್ಡ್‌ಲೈಫ್‌ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ, ಕೇರಳ ಬರ್ಡರ್ಸ್‌ ಹೀಗೆ ದೇಶದ ವಿವಿಧ ಭಾಗಗಳಿಂದ ಸುಮಾರು 115 ಪಕ್ಷಿ ವೀಕ್ಷಣಾಕಾರರು ಈ ಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಪೂರಕ ಪರಿಸರ

ಪೂರಕ ಪರಿಸರ

ಪಕ್ಷಿ ಗಣತಿಗೆ ಚಾಲನೆ ನೀಡಿದ ಕೈಗಾ ವಿದ್ಯುತ್ ಕೇಂದ್ರದ ನಿರ್ದೇಶಕ ಸಂಜಯ ಕುಮಾರ, "ವರ್ಷದಿಂದ ವರ್ಷಕ್ಕೆ ಈ ಭಾಗದಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಲ್ಲಿನ ಪರಿಸರ ಆರೋಗ್ಯಕರವಾಗಿದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಕೈಗಾ ಅಣುವಿದ್ಯುತ್ ಕೇಂದ್ರವು ಪರಿಸರಕ್ಕೆ ಪೂರಕವಾಗಿದ್ದು, ಭಾರತದ ವಿದ್ಯತ್‌ ಶಕ್ತಿಯ ಬೇಡಿಕೆಯನ್ನು ನೀಗಿಸುವತ್ತ ತನ್ನ ಅಮೂಲ್ಯ ಕೊಡುಗೆಯನ್ನು ನೀಡುತ್ತಿದೆ," ಎಂದರು.

 ಗಣ್ಯರು ಉಪಸ್ಥಿತಿ

ಗಣ್ಯರು ಉಪಸ್ಥಿತಿ

ಕೈಗಾ 3 ಮತ್ತು 4ನೇ ಘಟಕದ ನಿರ್ದೇಶಕ ಜೆ.ಆರ್.ದೇಶಪಾಂಡೆ, ಭಾರತೀಯ ಅಣು ವಿದ್ಯುತ್ ನಿಗಮದ ಮುಂಬೈ ಶಾಖೆಯ ಸುಶಾಂತ ಕುಮಾರ ಜೇನಾ, ವೈಲ್ಡ್‌ಲೈಫ್ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾದ ಡಾ.ಹುಸೇನ್, ಕೈಗಾ ಪರಿಸರ ಮುಂದಾಳತ್ವ ಕಾರ್ಯಕ್ರಮದ ಅಧ್ಯಕ್ಷ ಪ್ರೇಮ ಕುಮಾರ ಉಪಸ್ಥಿತರಿದ್ದರು.

ಫೋಟೋಗಳು: ಸುನೀಲ್ ಬಾರ್ಕೂರ್, ಕೈಗಾ

English summary
Kaiga Atomic Power Station organized a '8th edition of Kaiga Bird Marathon' on Sunday. 8 new birds have been detected in the area around Kaiga nuclear power plant, Uttara Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X