ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಕ್ ವಿರುದ್ಧ ಗೆಲುವಿಗೆ 50 ವರ್ಷ: ಕಾರವಾರದಿಂದ ನವದೆಹಲಿವರೆಗೆ ಬೈಕ್ ಜಾಥಾ

|
Google Oneindia Kannada News

ಕಾರವಾರ, ಸೆಪ್ಟೆಂಬರ್ 7: 75ನೇ ಸ್ವಾತಂತ್ರ್ಯ ವರ್ಷದ ಹಿನ್ನೆಲೆಯಲ್ಲಿ 'ಆಜಾದಿ ಕಾ ಅಮೃತ ಮಹೋತ್ಸವ' ಹಾಗೂ ಪಾಕ್ ವಿರುದ್ಧ ಯುದ್ಧದಲ್ಲಿ ಗೆಲುವು ಸಾಧಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ 'ಸ್ವರ್ಣಿಮ್ ವಿಜಯ್ ಅಭಿಯಾನ'ದ ಅಂಗವಾಗಿ ಭಾರತೀಯ ನೌಕಾಪಡೆಯು ಬೈಕ್ ಮೆರವಣಿಗೆ ಆಯೋಜಿಸಿದ್ದು, ಕಾರವಾರದಿಂದ ಚಾಲನೆ ನೀಡಲಾಗಿದೆ.

ಡಿಸೆಂಬರ್ 1971ರಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಸೈನ್ಯದ ಮೇಲೆ ನಿರ್ಣಾಯಕ ಮತ್ತು ಐತಿಹಾಸಿಕ ವಿಜಯವನ್ನು ಪಡೆದುಕೊಂಡವು. ಇದು ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಯಿತು ಮತ್ತು ವಿಶ್ವಯುದ್ಧ IIರ ನಂತರ ಅತಿದೊಡ್ಡ ಮಿಲಿಟರಿ ಶರಣಾಗತಿಗೆ ಕಾರಣವಾಯಿತು. 2020ರ ಡಿಸೆಂಬರ್ 16ರಿಂದ ರಾಷ್ಟ್ರವು ಭಾರತ- ಪಾಕ್ ಯುದ್ಧದ ಗೆಲುವಿನ 50 ವರ್ಷಗಳ ಸಂಭ್ರಮಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದನ್ನು 'ಸ್ವರ್ಣಿಮ್ ವಿಜಯ್ ವರ್ಷ್' ಎಂದೂ ಕರೆಯಲಾಗುತ್ತದೆ.

ಇದರ ಅಂಗವಾಗಿ ರಾಷ್ಟ್ರಾದ್ಯಂತ ವಿವಿಧ ಸ್ಮರಣೀಯ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದ್ದು, ಇದರ ಭಾಗವಾಗಿಯೇ ಈ 'ಸ್ವರ್ಣಿಮ್ ವಿಜಯ್ ಅಭಿಯಾನ' ಬೈಕ್ ಮೆರವಣಿಗೆ ಆರಂಭವಾಗಿದೆ.

 ಐಎನ್ಎಸ್ ವಿಕ್ರಮಾದಿತ್ಯದ ಮೇಲೆ ಚಾಲನೆ

ಐಎನ್ಎಸ್ ವಿಕ್ರಮಾದಿತ್ಯದ ಮೇಲೆ ಚಾಲನೆ

ಈ ಬೈಕ್ ಮೆರವಣಿಗೆಗೆ ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆ‌ಯಲ್ಲಿರುವ ಭಾರತೀಯ ನೌಕಾಸೇನೆಯ ಯುದ್ಧ ವಿಮಾನ ವಾಹಕ ನೌಕೆ 'ಐಎನ್ಎಸ್ ವಿಕ್ರಮಾದಿತ್ಯ'ದ ಮೇಲೆ ಚಾಲನೆ ನೀಡಲಾಗಿದೆ. ಈ ಮೆರವಣಿಗೆ ಅಕ್ಟೋಬರ್ 21ಕ್ಕೆ ನವದೆಹಲಿ ತಲುಪುವ ಸಾಧ್ಯತೆ ಇದೆ.
ಕಾಕತಾಳೀಯ ಎಂಬಂತೆ ಈ ಬೈಕ್ ಮೆರವಣಿಗೆಯು ನೌಕಾ- ವಾಯುಪಡೆಗೆ 'ರಾಷ್ಟ್ರಪತಿ ಬಣ್ಣ' ನೀಡುವ ದಿನವೇ ಚಾಲನೆ ದೊರೆತಿದೆ. ಈ ಮೆರವಣಿಗೆಯ ವಿವಿಧ ಹಂತಗಳಲ್ಲಿ 50ಕ್ಕೂ ಹೆಚ್ಚು ನೌಕಾ ಸಿಬ್ಬಂದಿ, 11 ದ್ವಿಚಕ್ರ ವಾಹನಗಳು ಮತ್ತು ಎರಡು ಬೆಂಬಲ ವಾಹನಗಳ ಮೂಲಕ 6000 ಕಿ.ಮೀ. ದೂರವನ್ನು ಕಾರವಾರದಿಂದ ನವದೆಹಲಿಯವರೆಗೆ ಕ್ರಮಿಸಲಿದ್ದಾರೆ.

 ಕೆಲವು ಯುದ್ಧಭೂಮಿಗಳಿಗೆ ಭೇಟಿ ನೀಡಲಿದೆ

ಕೆಲವು ಯುದ್ಧಭೂಮಿಗಳಿಗೆ ಭೇಟಿ ನೀಡಲಿದೆ

ಈ ಯಾತ್ರೆಯ ಸಮಯದಲ್ಲಿ ಮೆರವಣಿಗೆ ತಂಡವು, 1971ರ ಯುದ್ಧದಲ್ಲಿ ಸೈನಿಕರು ಹೋರಾಡಿದ್ದ ಕೆಲವು ಯುದ್ಧಭೂಮಿಗಳಿಗೆ ಭೇಟಿ ನೀಡಲಿದೆ. ಜೊತೆಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಸೈನಿಕ್ ಶಾಲೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದೆ. ಅಲ್ಲದೇ ಭಾರತೀಯ ಸೇನೆ ಮತ್ತು ಭಾರತೀಯ ವಾಯುಸೇನೆಯ ವಿವಿಧ ಸಂಸ್ಥೆಗಳ ಜೊತೆಗೆ ಲೋನಾವಾಲಾ, ಪೋರ್‌ಬಂದರ್ ಮತ್ತು ಜಾಮ್‌ನಗರದಲ್ಲಿರುವ ನೌಕಾ ಘಟಕಗಳಿಗೂ ಭೇಟಿ ನೀಡಲಿದೆ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

 'ರಾಷ್ಟ್ರಪತಿ ಬಣ್ಣ' ಪಡೆದ ನೌಕಾ- ವಾಯುಪಡೆ

'ರಾಷ್ಟ್ರಪತಿ ಬಣ್ಣ' ಪಡೆದ ನೌಕಾ- ವಾಯುಪಡೆ

ಇನ್ನು ಗೋವಾ ಸಮೀಪದ ಐಎನ್ಎಸ್ ಹನ್ಸಾ ನೌಕಾನೆಲೆಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಸಮ್ಮುಖದಲ್ಲಿ ನೌಕಾ- ವಾಯುಪಡೆಗೆ 'ರಾಷ್ಟ್ರಪತಿ ಬಣ್ಣ'ವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ, ರಾಷ್ಟ್ರಪತಿಗೆ ಭಾರತೀಯ ನೌಕಾಪಡೆಯಿಂದ ಗೌರವ ವಂದನೆ ನೀಡಲಾಯಿತು.

 ವಾಸ್ಕೋ ಪಟ್ಟಣದಲ್ಲಿರುವ ಐಎನ್ಎಸ್ ಹನ್ಸಾ ನೆಲೆ

ವಾಸ್ಕೋ ಪಟ್ಟಣದಲ್ಲಿರುವ ಐಎನ್ಎಸ್ ಹನ್ಸಾ ನೆಲೆ

ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ, ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮತ್ತು ಇತರರು ರಾಜ್ಯ ರಾಜಧಾನಿ ಪಣಜಿಯಿಂದ ಸುಮಾರು 40 ಕಿ.ಮೀ. ದೂರದ ವಾಸ್ಕೋ ಪಟ್ಟಣದಲ್ಲಿರುವ ಐಎನ್ಎಸ್ ಹನ್ಸಾ ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಹಾಜರಿದ್ದರು.

'ರಾಷ್ಟ್ರಪತಿ ಬಣ್ಣ'ವು ರಾಷ್ಟ್ರಕ್ಕೆ ನೀಡಿದ ಅಸಾಧಾರಣ ಸೇವೆಯನ್ನು ಗುರುತಿಸಿ ಮಿಲಿಟರಿ ಘಟಕಕ್ಕೆ ನೀಡುವ ಅತ್ಯುನ್ನತ ಗೌರವವಾಗಿದೆ. ಇದು 36 ಇಂಚಿನಿಂದ 48 ಇಂಚಿನ ಬಿಳಿ ಚಿಹ್ನೆಯನ್ನು ಕ್ಯಾಂಟನ್‌ನಲ್ಲಿ ರಾಷ್ಟ್ರಧ್ವಜವನ್ನು ಹೊಂದಿದೆ ಮತ್ತು ಮಧ್ಯದಲ್ಲಿ ಚಿನ್ನದ ಲಾಂಛನವನ್ನು ಕಸೂತಿ ಮಾಡಲಾಗಿದೆ. ಬಲವನ್ನು ಸೂಚಿಸುವ ಆನೆಯನ್ನು ಕ್ಯಾಂಟನ್‌ನಲ್ಲಿ ರಾಷ್ಟ್ರಧ್ವಜದ ಎದುರು ಕರ್ಣೀಯವಾಗಿ ಇರಿಸಲಾಗಿದೆ ಎಂದು ನೌಕಾ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ರಾಷ್ಟ್ರಪತಿ ಬಣ್ಣ ಪಡೆದ ಭಾರತೀಯ ನೌಕಾಪಡೆ

ರಾಷ್ಟ್ರಪತಿ ಬಣ್ಣ ಪಡೆದ ಭಾರತೀಯ ನೌಕಾಪಡೆ

ನೌಕಾಪಡೆಯು ಮೇ.27, 1951ರಂದು ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್‌ರಿಂದ 'ರಾಷ್ಟ್ರಪತಿ ಬಣ್ಣ'ವನ್ನು ಪಡೆದ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮೊದಲನೆಯದು. ದಕ್ಷಿಣ ನೌಕಾ ಕಮಾಂಡ್, ಪೂರ್ವ ನೌಕಾ ಕಮಾಂಡ್, ಪಶ್ಚಿಮ ನೌಕಾ ಕಮಾಂಡ್, ಈಸ್ಟರ್ನ್ ಫ್ಲೀಟ್, ವೆಸ್ಟರ್ನ್ ಫ್ಲೀಟ್, ಜಲಾಂತರ್ಗಾಮಿ ಆರ್ಮ್, ಐಎನ್ಎಸ್ ಶಿವಾಜಿ ಮತ್ತು ಭಾರತೀಯ ನೌಕಾ ಅಕಾಡೆಮಿಗಳು 'ರಾಷ್ಟ್ರಪತಿ ಬಣ್ಣ'ದ ಗೌರವಕ್ಕೆ ಪಾತ್ರವಾಗಿವೆ ಎಂದು ಅವರು ತಿಳಿಸಿದ್ದಾರೆ.

Recommended Video

F1 ರೇಸ್ ಕಾರ್ ಬಗ್ಗೆ ಪಾಕಿಸ್ತಾನಿ ಆ್ಯಂಕರ್ ಕೇಳಿದ ಪ್ರಶ್ನೆ ಸಿಕ್ಕಾಪಟ್ಟೆ ವೈರಲ್ | Oneindia Kannada
 1953ರಂದು ಮೊದಲ ನೌಕಾ- ವಾಯು ನಿಲ್ದಾಣ

1953ರಂದು ಮೊದಲ ನೌಕಾ- ವಾಯು ನಿಲ್ದಾಣ

ಭಾರತೀಯ ನೌಕಾ- ವಾಯುಪಡೆಯು ಜನವರಿ 13, 1951ರಂದು ಮೊದಲ ಸೀಲ್ಯಾಂಡ್ ವಿಮಾನವನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಮೇ 11, 1953ರಂದು ಮೊದಲ ನೌಕಾ- ವಾಯು ನಿಲ್ದಾಣವಾದ ಐಎನ್ಎಸ್ ಗರುಡವನ್ನು ಪ್ರಾರಂಭಿಸಿತು. ಇಂದು ಭಾರತೀಯ ನೌಕಾ- ವಾಯುಪಡೆಯು ಒಂಬತ್ತು ವಾಯು ನಿಲ್ದಾಣಗಳು ಮತ್ತು ಮೂರು ನೌಕಾ- ವಾಯು ವಲಯಗಳನ್ನು ಭಾರತೀಯ ಕರಾವಳಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹೊಂದಿದೆ ಎಂದು ತಿಳಿಸಿದ್ದಾರೆ.
ಕಳೆದ ಏಳು ದಶಕಗಳಲ್ಲಿ ಇದು 250ಕ್ಕಿಂತ ಹೆಚ್ಚು ವಿಮಾನಗಳನ್ನು ಹೊಂದಿರುವ ಆಧುನಿಕ, ತಾಂತ್ರಿಕವಾಗಿ ಮುಂದುವರಿದ ಮತ್ತು ಅತ್ಯಂತ ಶಕ್ತಿಯುತ ಶಕ್ತಿಯಾಗಿ ಪರಿವರ್ತನೆಗೊಂಡಿರುವ ಸಶಸ್ತ್ರ ಪಡೆಯಾಗಿದೆ. ಇದರಲ್ಲಿ ಕಡಲ ವಿಚಕ್ಷಣ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ರಿಮೋಟ್ ಪೈಲಟ್ ವಿಮಾನಗಳು ಸೇರಿವೆ.

English summary
50th anniversary of 1971 India-Pakistan war: The Indian Navy organized a bike rally from karwar to new delhi as part of the 'Swarnim Vijay Abhiyan' celebrating 50 years of its victory over Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X