ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡ: 4 ತಿಂಗಳಲ್ಲಿ 5,338 ಮಕ್ಕಳಿಗೆ ಕೋವಿಡ್ ಸೋಂಕು!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್ 23; ಕೋವಿಡ್ ಸೋಂಕು ಇಷ್ಟು ದಿನ ವಯಸ್ಕರಲ್ಲಿ ಹೆಚ್ಚು ಕಾಡುತಿತ್ತು. ಆದರೆ ಇದೀಗ ಮಕ್ಕಳಲ್ಲೂ ಸೋಂಕು ಕಾಡತೊಡಗಿದ್ದು, ಪೋಷಕರಲ್ಲಿ ಆತಂಕ ಸೃಷ್ಟಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಈವರೆಗೆ ಸುಮಾರು 5,338 ಮಕ್ಕಳು ಕೋವಿಡ್ ಸೋಂಕಿತರಾಗಿದ್ದಾರೆ.

ಕಾರವಾರ ತಾಲೂಕಿನಲ್ಲಿ 387, ಅಂಕೋಲಾ 319, ಕುಮಟಾ 511, ಭಟ್ಕಳ 338, ಹಳಿಯಾಳ 728, ಜೊಯಿಡಾ 296, ಹೊನ್ನಾವರ 568, ಮುಂಡಗೋಡ 491, ಸಿದ್ದಾಪುರ 498, ಶಿರಸಿ 681 ಹಾಗೂ ಯಲ್ಲಾಪುರ 527 ಮಕ್ಕಳು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.

ಕೋವಿಡ್; ರಾಜ್ಯದಲ್ಲಿ ಪೋಷಕರನ್ನು ಕಳೆದುಕೊಂಡ 52 ಮಕ್ಕಳು ಕೋವಿಡ್; ರಾಜ್ಯದಲ್ಲಿ ಪೋಷಕರನ್ನು ಕಳೆದುಕೊಂಡ 52 ಮಕ್ಕಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 1,909 ಮಕ್ಕಳಲ್ಲಿ ಸೋಂಕಿನ ಪ್ರಕರಣ ವರದಿಯಾಗಿತ್ತು. ಆದರೆ ಎರಡನೇ ಅಲೆಯಲ್ಲಿ ಅತಿಹೆಚ್ಚು ಪ್ರಕರಣ ದಾಖಲಾಗಿದೆ. ಮಾರ್ಚ್ 1ರಿಂದ ಇಲ್ಲಿಯವರೆಗೆ 5338 ಪ್ರಕರಣ ಸೇರಿ ಒಟ್ಟು ಮೊದಲ ಹಾಗೂ ಎರಡನೇ ಅಲೆಯಲ್ಲಿ 7,247 ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಇಬ್ಬರು ಮಕ್ಕಳು ಮಾತ್ರ ಈವರೆಗೆ ಮೃತಪಟ್ಟಿದ್ದಾರೆ.

ಕಾರವಾರ; ವೃದ್ಧೆಯ ಸಂಕಷ್ಟಕ್ಕೆ ಮಿಡಿದ ಉಪವಿಭಾಗಾಧಿಕಾರಿಕಾರವಾರ; ವೃದ್ಧೆಯ ಸಂಕಷ್ಟಕ್ಕೆ ಮಿಡಿದ ಉಪವಿಭಾಗಾಧಿಕಾರಿ

5,338 Children Infected With Covid In Uttara Kannada District

ಜಿಲ್ಲೆಯಲ್ಲಿ ಸರ್ಕಾರಿ ದಾಖಲೆ ಪ್ರಕಾರ 1ರಿಂದ 18 ವರ್ಷದೊಳಗಿನ 3,91,519 ಜನ ಮಕ್ಕಳಿದ್ದಾರೆ. ಇದರಲ್ಲಿ ಕಳೆದ 10 ದಿನಗಳ ಅಂತರದಲ್ಲಿ 216 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಶಿರಸಿ ಮತ್ತು ಹಳಿಯಾಳದಲ್ಲಿ ಮಕ್ಕಳ ಸೋಂಕಿನ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.

ಕಾರವಾರ; ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರ ಹಿಂದೇಟು ಕಾರವಾರ; ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರ ಹಿಂದೇಟು

ಜಿಲ್ಲಾಡಳಿತದಿಂದ ಕಿಟ್ ವಿತರಣೆ; ಜಿಲ್ಲೆಯಲ್ಲಿ ಮಕ್ಕಳಲ್ಲಿ ಅಪೌಷ್ಠಿಕತೆ ಕಂಡುಬಂದಿದ್ದು, ಹಲವು ಮಕ್ಕಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ಸರ್ವೇ ಮಾಡಲಾಗಿದೆ. ಜಿಲ್ಲೆಯಲ್ಲಿ ಆರು ವರ್ಷದ ಒಳಗಿನ 1,06,263 ಮಂದಿ ಮಕ್ಕಳು ಇದ್ದು, ಈ ಪೈಕಿ 184 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.

4142 ಮಕ್ಕಳು ಸಾಧಾರಣ ಅಪೌಷ್ಠಿಕತೆಯಿಂದ ಬಳಲುತ್ತಿದ್ದು ಇಂತಹ ಮಕ್ಕಳ ಆರೈಕೆಗೆ ಮೆಡಿಕಲ್ ಕಿಟ್ ಅನ್ನು ಜಿಲ್ಲಾ ಪಂಚಾಯತಿ ವತಿಯಿಂದ ಸಿದ್ಧಪಡಿಸಿ ಮೊದಲ ಹಂತದಲ್ಲಿ 1500 ಕಿಟ್‌ಗಳನ್ನು ನೀಡಲಾಗಿದೆ. ಈ ವಾರದಲ್ಲಿ ಉಳಿದ ಮಕ್ಕಳಿಗೂ ನೀಡಲು ಸಿದ್ಧತೆ ನಡೆದಿದೆ.

ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಮೊದಲ ಹಂತವಾಗಿ ಮಲ್ಟಿವಿಟಾಮಿನ್, ಪ್ಯಾರಾಸಿಟಾಮಲ್, ಜಿಂಕ್- ಐಯಾನ್ ಸಿರಪ್ ಹಾಗೂ ಪ್ರೋಟೀನ್ ಪೌಡರ್ ಸೇರಿದಂತೆ ಉಸಿರಾಟಕ್ಕೆ ಅನುಕೂಲವಾಗುವ ಚ್ಯಾವನ್‌ಪ್ರಾಶ್ ಅನ್ನು ಒಳಗೊಂಡ ಕಿಟ್ ಅನ್ನು ವಿತರಿಸಲಾಗಿದೆ.

ಪ್ರತಿ ತಿಂಗಳು ಆದ್ಯತೆಯ ಮೇರೆಗೆ ಸಾಧಾರಣ ಅಪೌಷ್ಠಿಕತೆ ಹೊಂದಿರುವ ಮಕ್ಕಳಿಗೂ ಕಿಟ್ ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮೂಲಕ ಕಿಟ್ ಅನ್ನು ಮಕ್ಕಳಿಗೆ ಪೂರೈಸಲು ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮಕ್ಕಳಿಗಾಗಿ ಆಕ್ಸಿಜನ್ ಬೆಡ್ ವ್ಯವಸ್ಥೆಯ ಕೋವಿಡ್ ಸೆಂಟರ್ ಸಹ ತೆರೆಯಲಾಗುತ್ತಿದ್ದು, ಮೂರನೇ ಅಲೆಯಲ್ಲಿ ಮಕ್ಕಳಿಗೆ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ.

Recommended Video

Covid 3rd Wave ಬಗ್ಗೆ ವೈದ್ಯರು ಹೇಳ್ತಿರೋದೇನು | Oneindia Kannada

English summary
From March 2021 5,338 children infected with COVID 19 in Uttara Kannada district. Two children died due to Covid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X