ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಸರಕೋಡ ಇಕೋ ಬೀಚ್ ಗೆ ನ.1ರಂದು ದಾಖಲೆಯ ಪ್ರವಾಸಿಗರು

|
Google Oneindia Kannada News

ಕಾರವಾರ, ನವೆಂಬರ್ 02: ಎರಡು ವಾರಗಳ ಹಿಂದಷ್ಟೇ ಅಂತರರಾಷ್ಟ್ರೀಯ ಮಟ್ಟದ ಬ್ಲೂ ಫ್ಲಾಗ್ ಪ್ರಮಾಣಪತ್ರ ಪಡೆದ ಹೊನ್ನಾವರದ ಕಾಸರಕೋಡ ಇಕೋ ಬೀಚ್ ಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಕೋವಿಡ್ ಲಾಕ್ ಡೌನ್ ನಿಂದಾಗಿ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಭಾರೀ ಪರಿಣಾಮ ಬೀರಿತ್ತು. ಅಲ್ಲದೇ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿಯೂ ಭಾರೀ ಇಳಿಮುಖವಾಗಿತ್ತು. ಅನ್ ಲಾಕ್ ಘೋಷಿಸಿದರೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಆದರೆ, ಕೆಲವು ದಿನಗಳಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಪ್ರವಾಸೋದ್ಯಮ ಗರಿಗೆದರುವ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ. ಮುಂದೆ ಓದಿ...

 ಕಡಲ ತೀರದಲ್ಲಿದೆ ಸುಂದರ ಇಕೋ ಪಾರ್ಕ್

ಕಡಲ ತೀರದಲ್ಲಿದೆ ಸುಂದರ ಇಕೋ ಪಾರ್ಕ್

ಇತ್ತೀಚೆಗೆ ಕಾಸರಕೋಡ ಇಕೋ ಬೀಚ್ ಗೆ ಬ್ಲೂ ಫ್ಲಾಗ್ ಪ್ರಮಾಣಪತ್ರ ಸಿಕ್ಕಿ ಅಂತರರಾಷ್ಟ್ರ ಮಟ್ಟದ ಮಾನ್ಯತೆ ಪಡೆದಿದ್ದು, ಇದು ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಇಕೋ ಬೀಚ್ ಈ ಮೊದಲಿನಿಂದಲೂ ನೈಸರ್ಗಿಕವಾಗಿ ಸುಂದರ ತಾಣವಾಗಿದ್ದು, ಕಡಲತೀರದಲ್ಲೇ ಇರುವ ಇಕೋ ಪಾರ್ಕ್ ಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದರು.

ಕಾರವಾರ: ಇಕೋ ಬೀಚ್ ಗೆ 'ಬ್ಲ್ಯೂ ಫ್ಲಾಗ್' ಅಂತರಾಷ್ಟ್ರೀಯ ಮಾನ್ಯತೆಕಾರವಾರ: ಇಕೋ ಬೀಚ್ ಗೆ 'ಬ್ಲ್ಯೂ ಫ್ಲಾಗ್' ಅಂತರಾಷ್ಟ್ರೀಯ ಮಾನ್ಯತೆ

 ನ.1ರಂದು ದಾಖಲೆಯ ಪ್ರವಾಸಿಗರು

ನ.1ರಂದು ದಾಖಲೆಯ ಪ್ರವಾಸಿಗರು

ಆದರೆ, ಬ್ಲೂ ಫ್ಲಾಗ್ ಪ್ರಮಾಣಪತ್ರ ಸಿಕ್ಕ ಬಳಿಕ ಈ‌ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿದೆ ಎನ್ನುತ್ತಾರೆ ಅಧಿಕಾರಿಗಳು. ಭಾನುವಾರ, ನವೆಂಬರ್ 1ರಂದು ಒಂದೇ ದಿನ ದಾಖಲೆಯ 3200 ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

 ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳು

ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳು

ಅಂತರರಾಷ್ಟ್ರೀಯ ಮಟ್ಟದ ಬೀಚ್‌ ಆಗಿ ಮೇಲ್ದರ್ಜೆಗೇರಿರುವ ಕಾಸರಕೋಡ ಇಕೋ ಬೀಚ್ ಗೆ ಬರುವ ಪ್ರವಾಸಿಗರಿಗೆ ಕುಳಿತುಕೊಳ್ಳುವ ಆಸನದಿಂದ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲ ತೀರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಸಿಬ್ಬಂದಿ ಒಳಗೊಂಡು ವಿನೂತನ ಮಾದರಿಯ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

ರಾಜ್ಯದ ಏಕೈಕ ಬ್ಲೂಫ್ಲ್ಯಾಗ್ ಕಡಲು ಹೆಗ್ಗಳಿಕೆಗೆ ಕಾಸರಕೋಡು ತೀರ!ರಾಜ್ಯದ ಏಕೈಕ ಬ್ಲೂಫ್ಲ್ಯಾಗ್ ಕಡಲು ಹೆಗ್ಗಳಿಕೆಗೆ ಕಾಸರಕೋಡು ತೀರ!

Recommended Video

DK Ravi ನಾನು ತುಂಬಾ ಚನ್ನಾಗಿದ್ವಿ! | Kusuma Exclusive Interview | Part 2 | Oneindia Kannada
 8 ಕೋಟಿ ವೆಚ್ಚದಲ್ಲಿ ಬೀಚ್ ಅಭಿವೃದ್ಧಿ ಕಾರ್ಯ

8 ಕೋಟಿ ವೆಚ್ಚದಲ್ಲಿ ಬೀಚ್ ಅಭಿವೃದ್ಧಿ ಕಾರ್ಯ

5.6 ಕಿಲೋ ಮೀಟರ್ ಉದ್ದವಿರುವ ಕಡಲ ತೀರದ 750 ಮೀಟರ್ ವ್ಯಾಪ್ತಿಯಲ್ಲಿ ಸದ್ಯ ಸುಮಾರು 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಬರುವ ಪ್ರವಾಸಿಗರಿಗೆ ಸ್ವಚ್ಛ ಕಡಲ ತೀರದ ಜೊತೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರಿಂದ ದೇಶ, ವಿದೇಶಗಳ ಪ್ರವಾಸಿಗರನ್ನೂ ಇತ್ತ ಸೆಳೆಯುವಲ್ಲಿ ಅನುಕೂಲವಾಗಿದೆ.

English summary
Tourists are increasing in Kasarakodu Eco Beach in honnavar since few days. 3200 tourists visited this eco beach on Nov 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X