ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ: ಬ್ಲ್ಯಾಕ್ ಫಂಗಸ್ ಎರಡನೇ ಪ್ರಕರಣ ಪತ್ತೆ!

|
Google Oneindia Kannada News

ಕಾರವಾರ, ಮೇ 29: ಇತ್ತೀಚೆಗಷ್ಟೇ ಹಳಿಯಾಳ ಮೂಲದ ವ್ಯಕ್ತಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿ ಉತ್ತರ ಕನ್ನಡದ ಮೊದಲ ಪ್ರಕರಣ ವರದಿಯಾಗಿತ್ತು. ಇದೀಗ ಮತ್ತೋರ್ವರಲ್ಲಿ ಇದೇ ರೀತಿಯ ಲಕ್ಷಣ ಕಂಡುಬಂದಿದ್ದು, ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡನೇ ಪ್ರಕರಣದಲ್ಲಿ ಮಂಗಳೂರಿಗೆ ದಾಖಲಾಗಿರುವ ವ್ಯಕ್ತಿಗೆ 60 ವರ್ಷ ವಯಸ್ಸಾಗಿದ್ದು, ಉತ್ತರ ಕನ್ನಡ ಜಿಲ್ಲೆ ಕಾರವಾರದ ಸದಾಶಿವಗಡ ಮೂಲದವರಾಗಿದ್ದಾರೆ. ಕಿಡ್ನಿ, ಡಯಾಬಿಟಿಸ್, ನ್ಯುಮೋನಿಯಾ, ಹೈಪರ್ ಟೆನ್ಶನ್‌ಗಳಿಂದ ಬಳಲುತ್ತಿದ್ದ ಇವರು ಕೋವಿಡ್ ಸೋಂಕಿಗೆ ಒಳಗಾಗಿದ್ದರು.

ಹೀಗಾಗಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಕೋವಿಡ್ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇವರಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

Karwar: 2nd Black Fungus Case Found In Uttar Kannada District

Recommended Video

ನೀವೇನಾದರೂ ಹೆಚ್ಚು ಸ್ಟೀಮ್ ತಗೊಂಡ್ರೆ ಬ್ಲ್ಯಾಕ್ ಫಂಗಸ್ ಅಪಾಯ ಕಟ್ಟಿಟ್ಟ ಬುತ್ತಿ! | Oneindia Kannada

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪವಿಭಾಗಾಧಿಕಾರಿ ವಿದ್ಯಾಶ್ರೀ, ಸೋಂಕಿತರ ಸ್ಕ್ಯಾನಿಂಗ್ ತಪಾಸಣೆಗಳು ನಡೆದಿವೆ. ಆದರೆ ವೈದ್ಯರು ಇದು ಬ್ಲ್ಯಾಕ್ ಫಂಗಸ್ ಪ್ರಕರಣವೇ ಎಂದು ಇನ್ನಷ್ಟೇ ಖಚಿತಪಡಿಸುವುದು ಬಾಕಿ ಇದೆ. ಸೋಂಕಿತ ಸದ್ಯ ಚಿಕಿತ್ಸೆಯಲ್ಲಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

English summary
A 60-year-old man from Karwar, Uttara Kannada district has been diagnosed with black fungas infection and has been admitted to Wenlock Hospital, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X