• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರವಾರ; ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರ ಹಿಂದೇಟು

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಮೇ 26; ಕೋವಿಡ್ ನಿಯಂತ್ರಣಕ್ಕಾಗಿ ಲಸಿಕೆ ಹಾಕಿಸಿಕೊಳ್ಳುವುದು ಅನಿವಾರ್ಯವಾದ ಕಾರಣ ಜನರು ಮೊದಲ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಾಗಿ ಮುಂದೆ ಬರುತ್ತಿದ್ದಾರೆ. ಆದರೆ ಲಸಿಕೆ ಸಿಗುತ್ತಿಲ್ಲ ಎನ್ನುವ ದೂರೇ ಹೆಚ್ಚಾಗಿ ಕೇಳಿ ಬರುತ್ತಿದೆ. ಇದರ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ 2 ಡೋಸ್ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದು, ಇದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ.

ಕೊರೊನಾ ಲಸಿಕೆ ನೀಡಲು ಪ್ರಾರಂಭವಾದಾಗ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡು ಲಸಿಕೆಯನ್ನು ಕೊಡುತ್ತಿದ್ದರು. ಮೊದಲು ಕೊವ್ಯಾಕ್ಸಿನ್‌ಗೆ ಹೆಚ್ಚಿನ ಬೇಡಿಕೆ ಇದ್ದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 9,600 ಜನರು ಲಸಿಕೆ ಹಾಕಿಸಿಕೊಂಡಿದ್ದರು. ಇದಾದ ನಂತರ ಕೊವ್ಯಾಕ್ಸಿನ್ ಲಸಿಕೆ ಅಭಾವ ಕಂಡುಬಂದಿದ್ದರಿಂದ ಕೋವಿಶೀಲ್ಡ್ ಕೊಡಲು ಪ್ರಾರಂಭಿಸಲಾಯಿತು.

ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!

ಕೊವ್ಯಾಕ್ಸಿನ್ ಮೊದಲ ಡೋಸ್ ಹಾಕಿಸಿಕೊಂಡವರಿಗೆ ಮಾತ್ರ 2 ಡೋಸ್ ಲಸಿಕೆ ಕೊಡಬೇಕು. ಹೊಸದಾಗಿ ಮೊದಲ ಡೋಸ್ ಕೊವ್ಯಾಕ್ಸಿನ್ ಯಾರಿಗೂ ಕೊಡಬಾರದು ಎಂದು ಆದೇಶ ಬಂದ ಹಿನ್ನಲೆಯಲ್ಲಿ 2ನೇ ಡೋಸ್ ಲಸಿಕೆಯನ್ನು ಮಾತ್ರ ಕೊಡಲು ಪ್ರಾರಂಭಿಸಿದ್ದರು.

ಉತ್ತರ ಕನ್ನಡ: 10 ದಿನದಲ್ಲಿ ಕೊರೊನಾಕ್ಕೆ 171 ಬಲಿ! ಉತ್ತರ ಕನ್ನಡ: 10 ದಿನದಲ್ಲಿ ಕೊರೊನಾಕ್ಕೆ 171 ಬಲಿ!

ಕೊವ್ಯಾಕ್ಸಿನ್ ಲಸಿಕೆ ಪಡೆದವರು 4 ರಿಂದ 6 ವಾರದಲ್ಲಿ ಎರಡನೇ ಡೋಸ್ ಲಸಿಕೆ ಕಡ್ಡಾಯವಾಗಿ ಪಡೆಯಬೇಕು ಎನ್ನುವ ಆದೇಶ ಆರೋಗ್ಯ ಇಲಾಖೆಯದ್ದು. ಈ ಅವಧಿಯಲ್ಲಿ ಮೊದಲ ಡೋಸ್ ಪಡೆದ 9600 ಜನರಿಗೆ 2ನೇ ಡೋಸ್ ಲಸಿಕೆ ಕೊಡಲು ಆದ್ಯತೆ ನೀಡಲಾಗಿತ್ತು.

ಕರ್ನಾಟಕಕ್ಕೆ ಸ್ಪುಟ್ನಿಕ್ ಲಸಿಕೆ ಪೂರೈಕೆಗೆ 2 ಕಂಪನಿಗಳ ಟೆಂಡರ್ ಕರ್ನಾಟಕಕ್ಕೆ ಸ್ಪುಟ್ನಿಕ್ ಲಸಿಕೆ ಪೂರೈಕೆಗೆ 2 ಕಂಪನಿಗಳ ಟೆಂಡರ್

ಲಸಿಕೆ ಹಾಕಿಸಿಕೊಂಡಿಲ್ಲ; ಜಿಲ್ಲೆಯಲ್ಲಿ ಈವರೆಗೆ ಇನ್ನೂ 2200 ಜನರು 2ನೇ ಡೋಸ್ ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿಲ್ಲ. ಜಿಲ್ಲೆಯ ಕಾರವಾರ, ಹೊನ್ನಾವರ, ಕುಮಟಾ, ಶಿರಸಿ ಹಾಗೂ ದಾಂಡೇಲಿ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಶೇಖರಣೆ ಮಾಡಿಟ್ಟಿದ್ದು, 2ನೇ ಡೋಸ್ ಪಡೆಯುವವರು ಯಾವಾಗ ಬರುತ್ತಾರೆ? ಎಂದು ಕಾಯುತ್ತಾ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಮ್ಮೆ ಲಸಿಕೆಯ ಒಂದು ವೇಲ್ಸ್ ತೆರೆದರೆ 10 ಜನಕ್ಕೆ ಕೊಡಲೇಬೇಕು. ಆದರೆ ಕೊವ್ಯಾಕ್ಸಿನ್ ಲಸಿಕೆಯ ಅಭಾವವಿದ್ದು, ಜನರು ಒಬ್ಬರು ಇಬ್ಬರಂತೆ ಲಸಿಕೆ ಪಡೆಯಲು ಬರುತ್ತಿರುವುದರಿಂದ ಉಳಿದ ಡೋಸ್‌ಗಳು ನಿರುಪಯುಕ್ತವಾಗಲಿದೆ.

ಇದರಿಂದ ಮುಂದಿನ ದಿನದಲ್ಲಿ ಕೊವ್ಯಾಕ್ಸಿನ್ 2 ಡೋಸ್ ಲಸಿಕೆಯ ಅಭಾವ ಎದುರಾಗುವ ಭೀತಿ ಸಹ ಆರೋಗ್ಯ ಇಲಾಖೆಗೆ ಎದುರಾಗಿದೆ. ಲಸಿಕೆ ಪಡೆದು 9 ವಾರವಾದರು ಇನ್ನೂ ಎರಡನೇ ಡೋಸ್ ಹಾಕಿಸಿಕೊಳ್ಳದೇ ಇರುವವರು ಜಿಲ್ಲೆಯಲ್ಲಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಅಧಿಕಾರಿಗಳಿಗೆ ಏಕೆ 2ನೇ ಡೋಸ್ ಲಸಿಕೆ ನೀಡುತ್ತಿಲ್ಲ ಎಂದು ಪ್ರಶ್ನಿಸುವಂತಾಗಿದೆ.

ಸಂದೇಶ ಕಳಿಸಲಿದ್ದೇವೆ; "ಕೊವ್ಯಾಕ್ಸಿನ್ ಎರಡನೇ ಡೋಸ್ ತೆಗೆದುಕೊಳ್ಳದೇ ಸುಮಾರು 2200 ಜನರಿದ್ದು, ಇಂದಿನಿಂದ ಮೊಬೈಲ್‌ಗೆ ಮೆಸೇಜ್ ಹಾಕಿ ತಿಳಿಸುವ ಕಾರ್ಯವನ್ನು ಮಾಡಲಿದ್ದೇವೆ" ಎಂದು ಕೋವಿಡ್ ವ್ಯಾಕ್ಸಿನ್ ನೋಡಲ್ ಅಧಿಕಾರಿ ಡಾ. ರಮೇಶ್ ರಾವ್ ತಿಳಿಸಿದ್ದಾರೆ.

"ಕೋವಿಶಿಲ್ಡ್ ಎರಡನೇ ಡೋಸ್ ಲಸಿಕೆಯನ್ನು 84 ದಿನಗಳ ನಂತರ ಹಾಕಿಸಿಕೊಳ್ಳಬಹುದು. ಆದರೆ ಕೊವ್ಯಾಕ್ಸಿನ್ ನಾಲ್ಕರಿಂದ ಆರು ವಾರದಲ್ಲಿ ಹಾಕಿಸಿಕೊಳ್ಳಬೇಕು. ಒಬ್ಬಿಬ್ಬರು ಬಂದು ಲಸಿಕೆ ಹಾಕಿಸಿಕೊಂಡರೆ ಲಸಿಕೆಯ ವೇಲ್ಸ್ ತೆರೆದಾಗ ಉಳಿದ ಲಸಿಕೆ ಅನುಪಯುಕ್ತವಾಗಲಿದೆ. ಈ ನಿಟ್ಟಿನಲ್ಲಿ ಮೆಸೇಜ್ ಹಾಕಿ ದಿನಾಂಕ ನೀಡಿ ಒಟ್ಟಿಗೆ ಬರುವಂತೆ ತಿಳಿಸಲಿದ್ದೇವೆ" ಎಂದು ಹೇಳಿದ್ದಾರೆ.

   DK Shivakumar - ದೊರೆಸ್ವಾಮಿ ನಮಗೆಲ್ಲಾ ಸ್ಪೂರ್ತಿ ! | Oneindia Kannada

   "ಇದಲ್ಲದೇ ಎಲ್‌ಐಸಿ ಜೊತೆ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಬಲ್ಕ್ ಮೆಸೇಜ್‌ಗಳನ್ನು ಕಳುಹಿಸುವ ಕಾರ್ಯ ಸಹ ಮಾಡಲಿದ್ದೇವೆ. ಎರಡನೇ ಡೋಸ್ ಲಸಿಕೆ ಪಡೆಯುವವರು ಅವಧಿ ಮುಗಿದ ನಂತರವೂ ಹಾಕಿಸಿಕೊಳ್ಳದೇ ನಿರ್ಲಕ್ಷ ಮಾಡಬಾರದು" ಎಂದು ಕರೆ ನೀಡಿದ್ದಾರೆ.

   English summary
   Around 2,200 people in Uttara Kannada district yet to take Covaxin 2nd dose. Now Covaxin available for only 2nd dose in state.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X