• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ; 2,220 ಕೆ.ಜಿ ಗೋಮಾಂಸ ಸಾಗಾಟ; ಐವರು ಆರೋಪಿಗಳು ಅಂದರ್

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಅಕ್ಟೋಬರ್‌ 02: ಹುಬ್ಬಳ್ಳಿಯಿಂದ ಗೋವಾಕ್ಕೆ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಮೂರು ವಾಹನ ಸಹಿತ ಐವರು ಆರೋಪಿಗಳನ್ನು ಜೊಯಿಡಾದ ಅನಮೋಡ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯಿಂದ ಗೋವಾ ಕಡೆಗೆ ಹಸುಗಳನ್ನು ವಧೆ ಮಾಡಿ ಮಾಂಸವನ್ನು ಎರಡು ಮಹೀಂದ್ರ ಬುಲೆರೋ ಹಾಗೂ ಒಂದು ಟಾಟಾ ವಾಹನದಲ್ಲಿ ಸಾಗಿಸುತ್ತಿದ್ದರು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ನಾ ಫೆನ್ನೇಕರ್ ಅವರಿಗೆ ಖಚಿತ ಮಾಹಿತಿ ಸಿಕ್ಕಿತ್ತು.‌ ಅದರಂತೆ ಪಿಎಸ್‌ಐ ಪ್ರಮೇನಗೌಡ ಪಾಟೀಲ್‌ ನೇತೃತ್ವದಲ್ಲಿ ರಾಮನಗರ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ಮತ್ತು ಠಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ; ಸ್ಥಳೀಯರಿಂದ ಲಿಖಿತ ಅಭಿಪ್ರಾಯ ಸಂಗ್ರಹಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ; ಸ್ಥಳೀಯರಿಂದ ಲಿಖಿತ ಅಭಿಪ್ರಾಯ ಸಂಗ್ರಹ

ಬೆಳಗ್ಗೆ 5:30ರ ಸುಮಾರಿಗೆ ಕಾರ್ಯಾಚರಣೆ
ಬೆಳಗ್ಗೆ 5:30ರ ಸುಮಾರಿಗೆ ಪೊಲೀಸ್ ತಂಡ ಜೊಯಿಡಾದ ಅನಮೋಡ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಕಾಯುತ್ತಿದ್ದ ವೇಳೆ ಮಾಂಸ ತುಂಬಿಕೊಂಡಿದ್ದ ಮೂರು ವಾಹನಗಳು ಸಾಲಿನಲ್ಲಿ ಬಂದಿದೆ. ಈ ವೇಳೆ ಅವುಗಳನ್ನು ತಡೆದು ಪರಿಶೀಲಿಸಿದಾಗ ತಮ್ಮ ಬಳಿ ಮಾಂಸ ಸಾಗಾಟದ ಪರವಾನಗಿ ಇದೆ ಎಂದು ಹೇಳಿ ಆರೋಪಿತರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದಾಖಲೆಗಳು ಇರಲಿಲ್ಲ ಎನ್ನುವುದು ವಿಚಾರಣೆಯ ವೇಳೆಗೆ ತಿಳಿದುಬಂದಿದೆ. ತಕ್ಷಣ ಮೂರು ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, 3.10 ಲಕ್ಷ ರೂಪಾಯಿ ಮೌಲ್ಯದ 2,220 ಕೆ.ಜಿ ದನದ ಮಾಂಸ ಜಪ್ತಿ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಅಳ್ನಾವರದ ಸಾದಿಕ್, ಇಲಿಯಾಸ್, ದಾವಲ್, ಖಾನಾಪುರದ ರಾಜಾಸಾಬ ಹಾಗೂ ಶಾಹೀದ್ ಗುಡುಸಾಬ ಎನ್ನುವವರನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮ ಗೋಮಾಂಸ ಸಾಗಾಟ; ಕೇಸ್‌ ದಾಖಲು
ಆರೋಪಿಗಳ ವಿರುದ್ಧ ಕರ್ನಾಟಕ ಗೋಹತ್ಯೆ ತಡೆ ಕಾಯ್ದೆ- 2020ರ ಕಲಂ 4, 7, 12 ಮತ್ತು ಮೋಟಾರು ವಾಹನ ಕಾಯ್ದೆ 192 (ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರಾಮನಗರ ಪೊಲೀಸ್ ಠಾಣೆಯ ತನಿಖಾ ಪಿಎಸ್‌ಐ ಲಕ್ಷ್ಮಣ ಪೂಜಾರಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ. ಗಾಂಧಿ ಜಯಂತಿಯಂದು ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟ ನಿಷೇಧ ಇರುತ್ತದೆ. ಹೀಗಾಗಿ ನಿನ್ನೆ ತಡರಾತ್ರಿಯೇ ಹಸುಗಳನ್ನು ಹುಬ್ಬಳ್ಳಿಯಲ್ಲಿ ವಧೆ ಮಾಡಿದ್ದಾರೆ. ಇಂದು ಗಾಂಧಿ ಜಯಂತಿ ಆಗಿರುವುದರಿಂದ ಮಾಂಸದ ಬಗ್ಗೆ ಯಾರಿಗೂ ಅನುಮಾನ ಬರಲ್ಲ ಎಂಬ ಆಲೋಚನೆಯಲ್ಲಿ ಆರೋಪಿಗಳು ಮಾಂಸ ಸಾಗಿಸುತ್ತಿದ್ದರು ಎನ್ನಲಾಗಿದೆ.

2,220 KG Beef Transportation; Five Persons Arrested in Karwar

ಅದರಲ್ಲೂ, ಹುಬ್ಬಳ್ಳಿ ಭಾಗದಿಂದ ಗೋವಾಕ್ಕೆ ತರಕಾರಿ ವಾಹನಗಳು ನಿರಂತರವಾಗಿ ಓಡಾಡುತ್ತಿರುವೆ. ಭಾನುವಾರ ಈ ವಾಹನಗಳ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಈ ನೆಪದಲ್ಲಿ ಆರೋಪಿಗಳು ಮಾಂಸ ಸಾಗಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಇಂತಹ ಅಕ್ರಮ ಮಾಂಸ ಸಾಗಾಟಕಾರರು ಒಂದು ವಾಹನದಲ್ಲಿ ಮಾಂಸ ಸಾಗಿಸಿ, ಅದು ತಮ್ಮ ನಿಗದಿತ ಸ್ಥಳ ತಲುಪಿದ ಬಳಿಕ ಮತ್ತೊಂದು ವಾಹನ ಕಳುಹಿಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಮೂರೂ ವಾಹನಗಳನ್ನು ಸರದಿಯಲ್ಲಿ ಕಳುಹಿಸಿದ್ದು, ದಂಧೆಕೋರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂರೂ ವಾಹನದಲ್ಲಿ ಸಾಗಿಸುತ್ತಿದ್ದ ಮಾಂಸ ಕೂಡ ಒಬ್ಬನೇ ಮಾಲಕನಿಗೆ ಸೇರಿದ್ದು ಎಂದು ತನಿಖೆಯಲ್ಲಿ ಬಯಲಾಗಿದೆ. ಸದ್ಯ ಪೊಲೀಸರು ಅಕ್ರಮ ಕಸಾಯಿ ಖಾನೆ ಹಾಗೂ ಮೂಲ ದಂಧೆಕೋರನ ಪತ್ತೆಗೆ ಶೋಧ ಮುಂದುವರೆಸಿದ್ದಾರೆ.

English summary
Karwar Police have arrested five persons accused of illegally transporting beef from Hubli to Goa at Anamoda Zoida check post. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X