• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಕನ್ನಡಕ್ಕೆ 15,090 ಡೋಸ್ ಕೋವಿಡ್ ಲಸಿಕೆ: ಜ.16ಕ್ಕೆ ವ್ಯಾಕ್ಸಿನೇಷನ್

|

ಕಾರವಾರ, ಜನವರಿ ೧೪: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್‌ಗೆ ಕ್ಷಣಗಣನೆ ಆರಂಭವಾಗಿದೆ. ಜ.16ರಂದು ಬೆಳಿಗ್ಗೆ 11ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚ್ಯುವಲ್ ವೇದಿಕೆಯ ಮೂಲಕ ದೇಶದಾದ್ಯಂತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಉತ್ತರ ಕನ್ನಡದಲ್ಲೂ ಚಾಲನೆಗೊಳ್ಳಲಿದೆ.

ಈಗಾಗಲೇ ಜಿಲ್ಲೆಗೆ 15,090 ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದ್ದು, ಈ ಪೈಕಿ ಮೊದಲ ಹಂತದಲ್ಲಿ ಕೋವಿಶೀಲ್ಡ್ ನ ಸುಮಾರು 7,000 ಡೋಸ್ ಬುಧವಾರ ರಾತ್ರಿ ಬೆಳಗಾವಿ ವಿಭಾಗದಿಂದ ಲಸಿಕಾ ವ್ಯಾನ್ ಗಳ ಮೂಲಕ ಜಿಲ್ಲೆಗೆ ಬಂದು ತಲುಪಿದೆ. ಈ ಲಸಿಕೆಯಲ್ಲಿ 190 ಕೇಂದ್ರೀಯ ಆರೋಗ್ಯ ಕಾರ್ಯಕರ್ತರು, 14,660 ರಾಜ್ಯ ಆರೋಗ್ಯ ಕಾರ್ಯಕರ್ತರು, 240 ಸಶಸ್ತ್ರ ಪಡೆಗಳ ವೈದ್ಯಕೀಯ ಸೇವಾಕರ್ತರಿಗೆ ಲಸಿಕೆ ನೀಡಲು ಸೂಚಿಸಲಾಗಿದೆ. ಇನ್ಮುಂದೆ ಹಂತ ಹಂತವಾಗಿ ಲಸಿಕೆ ಬರುವುದು, ಕೊಡುವುದು ಮುಂದುವರಿಯಲಿದೆ.

ಕಳೆಗುಂದಿದ ಮಕರ ಸಂಕ್ರಾಂತಿ: ಮಾರುಕಟ್ಟೆಯಲ್ಲಿ ವ್ಯಾಪಾರ- ವಹಿವಾಟು ಕುಸಿತ

ಉತ್ತರ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನು ಸೇರಿ ಸುಮಾರು 13 ಸಾವಿರ ಮಂದಿಯ ಪಟ್ಟಿ ಸಿದ್ಧಪಡಿಸಲಾಗಿದೆ. ಸದ್ಯ ಮೊದಲ ಹಂತದಲ್ಲಿ 11 ಲಸಿಕಾ ಕೇಂದ್ರಗಳನ್ನು ಜಿಲ್ಲೆಯಾದ್ಯಂತ ತೆರೆಯಲಾಗಿದ್ದು, ಅಲ್ಲಿ ಪ್ರತಿದಿನ ಒಂದು ಕೇಂದ್ರದಲ್ಲಿ 100ರಂತೆ 1,100 ಮಂದಿಗೆ ಪ್ರತಿದಿನ ಲಸಿಕೆ ನೀಡಲಾಗುತ್ತದೆ.

ಒಂದು ಲಸಿಕಾ ಕೇಂದ್ರಕ್ಕೆ ತಲಾ ಐದು ಸಿಬ್ಬಂದಿ (ಓರ್ವ ಪೊಲೀಸ್ ಸೇರಿ) 515 ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. 105 ಕಡೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಐಸ್ ಲೈನ್ಡ್ ರೆಫ್ರಿಜರೇಟರ್ (ILR) 105, ಪಶು ಇಲಾಖೆಯಿಂದ ಪಡೆದ 18, ಒಟ್ಟು 123 ಐಎಲ್ಆರ್ ಫ್ರಿಜ್ ಗಳ ವ್ಯವಸ್ತೆಗಳಿದ್ದು, ಆರೋಗ್ಯ ಇಲಾಖೆಯಿಂದ 1 ಹಾಗೂ ಪಶು ಇಲಾಖೆಯಿಂದ ಪಡೆದ 2 ವಾಕ್ ಇನ್ ಕೂಲರ್ ಗಳ ಮೂಲಕ ಲಸಿಕೆ ಸರಬರಾಜು ಮಾಡಲಾಗುತ್ತಿದೆ.

ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ‌. ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡುವ ಬಗ್ಗೆ ತರಬೇತಿಯನ್ನೂ ನೀಡಲಾಗಿದೆ. ಜ.16ರಂದು ಬೆಳಿಗ್ಗೆ ಪೌರಕಾರ್ಮಿಕರಿಗೆ ಮೊದಲು ಲಸಿಕೆ ನೀಡಿ, ಬಳಿಕ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

English summary
Countdown to Covid Vaccination has begun in Uttara Kannada District. Prime Minister Narendra Modi will vaccination campaign launch by virtual meeting on January 16 at 11 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X