ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡಕ್ಕೆ ಇಂಗ್ಲೆಂಡ್‌ನಿಂದ 12 ಮಂದಿ ಆಗಮನ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಡಿಸೆಂಬರ್ 24: ಬ್ರಿಟನ್‌ನಲ್ಲಿ ಕಂಡು ಬಂದಿರುವ ಹೊಸ ರೂಪಾಂತರ ಕೊರೋನಾ ಇದೀಗ ಮತ್ತೆ ಎಲ್ಲರಲ್ಲಿ ಆತಂಕ ಸೃಷ್ಟಿ ಮಾಡಿದೆ. ಇಂಗ್ಲೆಂಡ್‌ನಿಂದ 12 ಮಂದಿ ಉತ್ತರ ಕನ್ನಡಕ್ಕೆ ಬಂದಿರುವ ಬಗ್ಗೆ ಸರ್ಕಾರ ಜಿಲ್ಲಾಡಳಿತಕ್ಕೆ ಪಟ್ಟಿ ಕಳುಹಿಸಿದ್ದು, ಜಿಲ್ಲಾಡಳಿತ ಸಹ ಮುಂಜಾಗ್ರತೆ ಕ್ರಮಕ್ಕೆ ಮುಂದಾಗಿದೆ.

ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪಿಗೆ 8, ದಾಂಡೇಲಿ ಹಾಗೂ ಕುಮಟಾ ತಾಲೂಕಿಗೆ ತಲಾ ಇಬ್ಬರು ಇಂಗ್ಲೆಂಡ್‌ನಿಂದ ಆಗಮಿಸಿರುವ ಮಾಹಿತಿ ದೊರಕಿದೆ. ಜಿಲ್ಲಾಡಳಿತ ಈಗಾಗಲೇ ಎಲ್ಲರನ್ನೂ ಸಂಪರ್ಕಿಸಿ ಕ್ವಾರಂಟೈನ್ ಆಗಲು ಸೂಚನೆ ನೀಡಿದೆ. ಪ್ರತ್ಯೇಕವಾಗಿ ಎಲ್ಲರೂ ಜಿಲ್ಲೆಗೆ ಆಗಮಿಸಿದ್ದು, ಈ ಪೈಕಿ ಕೆಲವರು ಈಗಾಗಲೇ 14 ದಿನಗಳ ಅವಧಿಯನ್ನು ಕಳೆದಿದ್ದಾರೆ. ಆದರೂ ಎಲ್ಲರ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಒಳಪಡಿಸಲಾಗಿದೆ.

ಬ್ರಿಟನ್‌ನಿಂದ ಬೆಳಗಾವಿಗೆ ಆಗಮಿಸಿದ್ದ ಮಹಿಳೆಯ ಕೋವಿಡ್ ವರದಿ ನೆಗೆಟಿವ್ಬ್ರಿಟನ್‌ನಿಂದ ಬೆಳಗಾವಿಗೆ ಆಗಮಿಸಿದ್ದ ಮಹಿಳೆಯ ಕೋವಿಡ್ ವರದಿ ನೆಗೆಟಿವ್

"ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತಕ್ಕೆ ಬಂದಿರುವ ಪಟ್ಟಿಯಲ್ಲಿರುವ ಎಲ್ಲರನ್ನೂ ಸಂಪರ್ಕಿಸಿ ಕ್ವಾರಂಟೈನ್ ಆಗಲು ಸೂಚನೆ ನೀಡಿದ್ದೇವೆ. ಯಾರಲ್ಲೂ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿದೆ" ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ ಕುಮಾರ್ ಹೇಳಿದ್ದಾರೆ.

ದೇಶದಲ್ಲಿ 23,950 ಹೊಸ ಕೋವಿಡ್ ಪ್ರಕರಣಗಳು ಪತ್ತೆದೇಶದಲ್ಲಿ 23,950 ಹೊಸ ಕೋವಿಡ್ ಪ್ರಕರಣಗಳು ಪತ್ತೆ

12 People Returned To Uttara Kannada From UK

ರಾತ್ರಿ ಕರ್ಫ್ಯೂ ಜಾರಿ; ಹೊಸ ರೂಪಾಂತರ ಕೊರೋನಾ ಹರಡುವಿಕೆ ತಡೆಗೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಲು ಆದೇಶ ನೀಡಿದೆ. ಜಿಲ್ಲಾಧಿಕಾರಿ ಡಾ. ಕೆ. ಹರೀಶ ಕುಮಾರ್ ಗುರುವಾರ ರಾತ್ರಿಯಿಂದ ಜನವರಿ 2ರವರೆಗೆ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5ರವರೆಗೆ ಕಲಂ 144 ಅಡಿಯಲ್ಲಿ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಜುಲೈ 1ರ ಬಳಿಕ ಮೊದಲ ಬಾರಿ 20 ಸಾವಿರಕ್ಕಿಂತ ಕಡಿಮೆ ಕೋವಿಡ್ ಸೋಂಕಿತರು ಪತ್ತೆಜುಲೈ 1ರ ಬಳಿಕ ಮೊದಲ ಬಾರಿ 20 ಸಾವಿರಕ್ಕಿಂತ ಕಡಿಮೆ ಕೋವಿಡ್ ಸೋಂಕಿತರು ಪತ್ತೆ

ನೈಟ್ ಕರ್ಫ್ಯೂ ಇರುವ ವೇಳೆಯಲ್ಲಿ ಜನರು ಅತ್ಯಾವಶ್ಯಕ ಕಾರಣ ಬಿಟ್ಟು ಬೇರೆ ಕಾರಣಕ್ಕೆ ಓಡಾಡದಂತೆ, ನಿಷೇಧಿತ ಅವಧಿಯಲ್ಲಿ ಕೆಲಸ ನಿರ್ವಹಿಸುವ ಕೈಗಾರಿಕೆ, ಕಂಪನಿ, ಸಂಘ- ಸಂಸ್ಥೆಗಳಲ್ಲಿ ಶೇಕಡಾ 50 ಸಿಬ್ಬಂದಿಗಳು ಮಾತ್ರ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ.

ಇನ್ನು ನಿಷೇಧಿತ ಅವಧಿಯಲ್ಲಿ ದೂರ ಪ್ರಯಾಣದ ಬಸ್, ರೈಲ್ವೆ, ವಿಮಾನ ಸಂಚಾರ ಮಾಡಬಹುದಾಗಿದ್ದು, ಅಧಿಕೃತ ಪ್ರಯಾಣ ಚೀಟಿ ಇರುವವರು ಓಡಾಡಲು ಅವಕಾಶ ನೀಡಲಾಗಿದೆ. ಅವರನ್ನು ಕರೆದುಕೊಂಡು ಹೋಗಿ ಬರಲು ಆಟೋ, ಟ್ಯಾಕ್ಸಿಗೆ ಸಹ ಅನುಮತಿ ನೀಡಲಾಗಿದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಇದಲ್ಲದೇ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಕ್ರಿಸ್‌ಮಸ್ ಹಬ್ಬವನ್ನು ಕೋವಿಡ್ ನಿಯಮಾವಳಿಗಳ ಪ್ರಕಾರ ಕಟ್ಟುನಿಟ್ಟಾಗಿ ಆಚರಿಸುವಂತೆ ಆದೇಶಿಸಲಾಗಿದೆ.

Recommended Video

Australia ಮಾಜಿ ಆಟಗಾರನ ಪ್ರಕಾರ ಭಾರತ ಈಗಲೂ ಗೆಲ್ಲಬಹುದು | Oneindia Kannada

English summary
12 people returned from United Kingdom to Uttara Kannada district. All people traced and sample collected for Coronavirus test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X