• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೆಲ್ಕಂ ಟು ಕಾಂಗ್ರೆಸ್ಸಿನ ಹೊಸ ಟ್ರಬಲ್ ಶೂಟರ್: ಡಿಕೆಶಿಗೆ ಜಮೀರ್ ಅಹಮದ್ ಸೆಡ್ಡು

|
   Lok Sabha Elections 2019: ಮಹಾಘಟಬಂಧನದ ಬಗ್ಗೆ ಅಚ್ಚರಿಯ ಹೇಳಿಕೆಯನ್ನ ನೀಡಿದ ಸ್ಯಾಮ್ ಪಿತ್ರೋಡಾ

   ನ್ಯಾಷನಲ್ ಟ್ರಾವೆಲ್ಸ್ ಮಾಲೀಕ, ಭಾರೀ ಕುಳ ಜಮೀರ್ ಅಹಮದ್ ಖಾನ್ ಅವರಿಗೆ ರಾಜಕೀಯದಲ್ಲಿ ತುಂಬಾ ಆಸಕ್ತಿಯಿದ್ದರೂ, ನೆಲೆಕಾಣಲು ಸಾಲಿಡ್ ಬ್ಯಾಂಕ್ ಗ್ರೌಂಡ್ ಒಂದು ಬೇಕಿತ್ತು. ಚಾಮರಾಜಪೇಟೆಯ ಓಣಿಯಲ್ಲಿ 'ದರಿದ್ರ ನಾರಾಯಣ" ರ‍್ಯಾಲಿ ನಡೆಸುವ ಮೂಲಕ ದೇವೇಗೌಡ್ರು, ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕರೆತಂದರು.

   ತನ್ನನ್ನು ಶಾಸಕನನ್ನಾಗಿ ಮಾಡಿದ ಗೌಡ್ರು ಮತ್ತು ಅವರ ಕುಟುಂಬದ ಮೇಲೆ ಜಮೀರ್ ಗೂ ಮೊದಮೊದಲು ಬಹಳ ನಿಯತ್ತು ಇತ್ತು. ಗೌಡ್ರು, ಕುಮಾರಸ್ವಾಮಿ ಮತ್ತು ರೇವಣ್ಣ ಕರೆಯದಿದ್ದರೂ ಅವರ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಜಮೀರ್ ಹಾಜರಿರುತ್ತಿದ್ದರು.

   ಮಂಡ್ಯ ಚುನಾವಣೆಯಲ್ಲಿ ಕುಮಾರಸ್ವಾಮಿ ತಪ್ಪು ಮಾಡಿದ್ದಾರೆ: ಜಮೀರ್‌

   ಆದರೆ, ಅದೇನು ಕಿರಿಕ್ ಆಯಿತೋ, ಗೌಡ್ರ ವಿರುದ್ದ ಅದರಲ್ಲೂ ಪ್ರಮುಖವಾಗಿ ಕುಮಾರಸ್ವಾಮಿ ವಿರುದ್ದ ತಿರುಗಿಬಿದ್ದ ಜಮೀರ್, ಜೆಡಿಎಸ್ಸಿಗೆ ಸಡ್ಡು ಹೊಡೆದು, ಎಲ್ಲಿಂದ ಗೌಡ್ರು ತನ್ನನ್ನು ಗೆಲ್ಲಿಸಿ ಅಸೆಂಬ್ಲಿಗೆ ಕರೆದುಕೊಂಡು ಬಂದಿದ್ದರೋ ಅಲ್ಲೇ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿ, ಗೆದ್ದು, ಮತ್ತೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿರುವುದು ಇತಿಹಾಸ.

   ಕುಮಾರಸ್ವಾಮಿ ಕಟ್ಟಾ ವಿರೋಧಿಗಳ ಜೊತೆ ಏನದು ಸಿದ್ದರಾಮಯ್ಯನವರ ಚರ್ಚೆ?

   ಬದಲಾದ ಪರಿಸ್ಥಿತಿಯಲ್ಲಿ ಜಮೀರ್ ಈಗ ಕಾಂಗ್ರೆಸ್ ನಲ್ಲಿದ್ದಾರೆ. 'Experience makes you wiser' ಎನ್ನುವಂತೆ, ಪಳಗಿದ ರಾಜಕಾರಣಿಗಳ ಜೊತೆ ಬೆರೆತು, ಜಮೀರ್ ದಿನದಿಂದ ದಿನಕ್ಕೆ ಕಾಂಗ್ರೆಸ್ಸಿನಲ್ಲಿ ಪ್ರಭಾವಿಯಾಗುತ್ತಾ, ಪಕ್ಷದ ಪಾಲಿಗೆ ಹೊಸ ಟ್ರಬಲ್ ಶೂಟರ್ ಆಗಿ ಹೊರಹೊಮ್ಮುತ್ತಿದ್ದಾರೆ ಎನ್ನುವುದಕ್ಕೆ ಹಲವು ನಿರ್ದರ್ಶನಗಳಿವೆ.

   ಎಲ್ಲವನ್ನೂ ಮೀರಿ ಜಮೀರ್ ಅಹಮದ್ ಬೆಳೆದುನಿಂತಿದ್ದಾರೆ

   ಎಲ್ಲವನ್ನೂ ಮೀರಿ ಜಮೀರ್ ಅಹಮದ್ ಬೆಳೆದುನಿಂತಿದ್ದಾರೆ

   ಜಮೀರ್ ಗೆ ತನ್ನನ್ನು ರಾಜಕೀಯದ ಮುಖ್ಯಭೂಮಿಕೆಗೆ ತಂದ ಗೌಡ್ರ ಕುಟುಂಬದ ಮೇಲೆ ಅದೆಷ್ಟು ನಿಯತ್ತು ಇತ್ತೆಂದರೆ, ರೆಸಾರ್ಟಿಗೆ ಶಾಸಕರನ್ನು ಕರೆದುಕೊಂಡಲು ತನ್ನದೇ ಸಂಸ್ಥೆಯ ಬಸ್ ಅನ್ನು ಬುಕ್ ಮಾಡಿ, ತಾನೇ ಚಲಾಯಿಸಿ, ಸೇರಬೇಕಾದ ಜಾಗಕ್ಕೆ ಸೇರಿಸಿದ್ದರು. ಜಮೀರ್ ಅಹಮದ್ ರನ್ನು ರೇವಣ್ಣ ಖಿಂಡಾಲ್ ಮಾಡಿರುವುದಕ್ಕೆ ಲೆಕ್ಕವೇ ಇಲ್ಲ. ಆರ್ ವಿ ದೇವರಾಜ್ ಮುಂದೆ ತಲೆಕೆರ್ಕೊಂಡು ನಿಂತಿದ್ದ ಗಿರಾಕಿ, ಕೊನೆಗೆ ಅವನಿಗೇ ಟೋಪಿ ಹಾಕಿದ್ದವನು ಎಂದು ರೇವಣ್ಣ, ತುಂಬಿದ ಪತ್ರಿಕಾಗೋಷ್ಠಿಯಲ್ಲಿ ಜಮೀರ್ ರನ್ನು ಟೀಕಿಸಿದ್ದುಂಟು. ಆದರೆ, ಇವೆಲ್ಲವನ್ನೂ ಮೀರಿ ಜಮೀರ್ ಈಗ ಬೆಳೆದು ನಿಂತಿದ್ದಾರೆ.

   ಡಾ. ಸುಧಾಕರ್, ಎಂಟಿಬಿ ನಾಗರಾಜ್ ಮುಂತಾದವರನ್ನು ಒಂದೇ ವೇದಿಕೆಯಲ್ಲಿ

   ಡಾ. ಸುಧಾಕರ್, ಎಂಟಿಬಿ ನಾಗರಾಜ್ ಮುಂತಾದವರನ್ನು ಒಂದೇ ವೇದಿಕೆಯಲ್ಲಿ

   ಸಿದ್ದರಾಮಯ್ಯನವರ ಆಪ್ತಬಣದಲ್ಲಿ ಗುರುತಿಸಿಕೊಂಡಿರುವ ಜಮೀರ್, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಬಿಜೆಪಿಯ ಆಪರೇಷನ್ ಕಮಲದಿಂದ ತಪ್ಪಿಸಲು ಡಿಕೆಶಿಯ ಪರಿಶ್ರಮ ಎಷ್ಟಿದೆಯೋ ಅದರಲ್ಲಿ ಜಮೀರ್ ಪಾಲೂ ಕೂಡಾ ಅಷ್ಟೇ ಇದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಸೂಕ್ತಸ್ಥಾನಮಾನ ಸಿಗಲಿಲ್ಲ ಎಂದು ಬೇಸರಿಸಿಕೊಂಡಿದ್ದ, ಡಾ. ಸುಧಾಕರ್, ಎಂಟಿಬಿ ನಾಗರಾಜ್ ಮುಂತಾದವರನ್ನು ಒಂದೇ ವೇದಿಕೆಯಡಿಯಲಿ ತಂದವರು ಜಮೀರ್.

   ಸಿದ್ದರಾಮಯ್ಯನವರ ಆಪ್ತಬಣದಲ್ಲಿ ಗುರುತಿಸಿಕೊಂಡಿರುವ ಜಮೀರ್

   ಸಿದ್ದರಾಮಯ್ಯನವರ ಆಪ್ತಬಣದಲ್ಲಿ ಗುರುತಿಸಿಕೊಂಡಿರುವ ಜಮೀರ್

   ರಾಜ್ಯಸಭಾ ಚುನಾವಣೆಯಲ್ಲಿ ಅಡ್ದಮತದಾನ ಮಾಡಿ, ಸಿದ್ದರಾಮಯ್ಯನವರಿಗೆ ಇನ್ನೂ ಹತ್ತಿರವಾದ ಜಮೀರ್, ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಎರಡನೇ ಬಾರಿಗೆ ಆಪರೇಶನ್ ಕಮಲದ ರಗಳೆ ತಾರಕಕ್ಕೇರಿದಾಗ, ಜಾರಕಿಹೊಳಿ, ಆನಂದ್ ಸಿಂಗ್ ಮುಂತಾದವರ ಜೊತೆ ನಿರಂತರ ಸಂಪರ್ಕ ಕಾಯ್ದುಕೊಂಡು, ಸರಕಾರವನ್ನು ಸೇಫ್ ಮಾಡುವಲ್ಲಿ ಜಮೀರ್ ಪ್ರಮುಖ ಪಾತ್ರಧಾರಿಯಲ್ಲೊಬ್ಬರಾಗಿದ್ದರು.

   ಚೆಲುವರಾಯಸ್ವಾಮಿಯ ಪರವಾಗಿ ನಿಂತಿರುವ ಜಮೀರ್

   ಚೆಲುವರಾಯಸ್ವಾಮಿಯ ಪರವಾಗಿ ನಿಂತಿರುವ ಜಮೀರ್

   ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಚೆಲುವರಾಯಸ್ವಾಮಿಯ ಪರವಾಗಿ ನಿಂತಿರುವ ಜಮೀರ್, ಡಿನ್ನರ್ ಗೆ ಹೋಗಿರುವುದರಲ್ಲಿ ತಪ್ಪೇನಿದೆ, ಕುಮಾರಸ್ವಾಮಿಯವರು ಇದಕ್ಕೆಲ್ಲಾ ಬೇಸರಗೊಂಡರೆ ಹೇಗೆ ಎನ್ನುವ ಹೇಳಿಕೆಯನ್ನು ನೀಡುವ ಮೂಲಕ, ಕಾಂಗ್ರೆಸ್ಸಿನಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ, ಒಂದು ಕಾಲದಲ್ಲಿ ಜೆಡಿಎಸ್ ಪಕ್ಷದ ಭಿನ್ನಮತ ಶಾಸಕರ ಜೊತೆಗಿದ್ದು, ಅವರನ್ನೆಲ್ಲಾ ಕಾಂಗ್ರೆಸ್ಸಿಗೆ ಕರೆತರುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಜಮೀರ್, ಈಗ ಅವರಿಗೆಲ್ಲಾ, ಜೆಡಿಎಸ್ ಕಡೆಯಿಂದ ತೊಂದರೆ ಬರದಂತೆ ನೋಡಿಕೊಳ್ಳುವಲ್ಲಿ ಒಂದು ಹಂತಕ್ಕೆ ಯಶಸ್ವಿಯಾಗಿದ್ದಾರೆ.

   ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ

   ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ

   ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿನ ಬಂಡಾಯವನ್ನು ಜಮೀರ್ ಸಮರ್ಥವಾಗಿ ನಿಭಾಯಿಸಿ ಪಕ್ಷ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಖಾಸಗಿ ಹೊಟೇಲ್ ನಲ್ಲಿ ಅತೃಪ್ತರ ಜೊತೆ ಸಂಧಾನ ನಡೆಸಿ, ಅವರ ಮನವೊಲಿಸಲು ಜಮೀರ್ ಯಶಸ್ವಿಯಾದರು. ಸಚಿವ ಡಿಕೆ ಶಿವಕುಮಾರ್ ಅವರಿಗೆ ಸೆಡ್ಡು ಹೊಡೆದು ಹಲವಾರು ಮುಖಂಡರು ನಾಮಪತ್ರ ಸಲ್ಲಿಸಿದ್ದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Food and Civil Supply Minister Zameer Ahmed Khan is the new trouble shooter of Karnataka Congress. Zameer resolved party's Kundagol by assembly election candidate issue too.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more