ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಬಿಜೆಪಿ ನಾಯಕರ ಆರೋಪಕ್ಕೆ ಟ್ವೀಟ್‌ ಬಾಣ ಬಿಟ್ಟ ಜಮೀರ್

|
Google Oneindia Kannada News

ಬೆಂಗಳೂರು, ಏಪ್ರಿಲ್ 29 ; ಬೆಂಗಳೂರು ತೊರೆದು ಧಾರ್ಮಿಕ ಯಾತ್ರೆಯಲ್ಲಿರುವ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಬಿಜೆಪಿ ನಾಯಕರ ಆರೋಪಗಳಿಗೆ ಟ್ವೀಟ್ ಬಾಣ ಬಿಟ್ಟಿದ್ದಾರೆ.

ಹಳೇ ಹುಬ್ಬಳಿ ಗಲಭೆ ಪ್ರಕರಣದ ಆರೋಪಿಗಳ ಕುಟುಂಬಕ್ಕೆ ಶಾಸಕ ಜಮೀರ್ ಅಹ್ಮದ್ ಖಾನ್ ಪಡಿತರ ವಿತರಣೆ ಮಾಡಿದ್ದಾರೆ ಎಂಬುದು ಆರೋಪ. ಶುಕ್ರವಾರ ಈ ಕುರಿತು ಬಿಜೆಪಿಯ ವಿವಿಧ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

 ನಾನು ಜಾತಿವಾದಿಯಾಗಿದ್ದರೆ ನನ್ನ ವಂಶ ನಿರ್ನಾಮವಾಗಲಿ: ಜಮೀರ್ ಅಹಮದ್ ಡೈಲಾಗ್! ನಾನು ಜಾತಿವಾದಿಯಾಗಿದ್ದರೆ ನನ್ನ ವಂಶ ನಿರ್ನಾಮವಾಗಲಿ: ಜಮೀರ್ ಅಹಮದ್ ಡೈಲಾಗ್!

ಶುಕ್ರವಾರ ಸಂಜೆ ಟ್ವೀಟ್ ಮತ್ತು ಫೇಸ್‌ ಬುಕ್ ಮೂಲಕ ಜಮೀರ್ ಅಹ್ಮದ್ ಖಾನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಕಳೆದ 17ನೇ ತಾರೀಖಿನಂದು ಬೆಂಗಳೂರು ತೊರೆದು ಧಾರ್ಮಿಕ ಯಾತ್ರೆಗಾಗಿ ಮಕ್ಕಾಗೆ ಬಂದಿದ್ದೇನೆ. ಈಗ ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೂ ನನಗೂ ಯಾವ ರೀತಿಯ ಸಂಬಂಧವೂ ಇಲ್ಲ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದವು" ಎಂದು ಹೇಳಿದ್ದಾರೆ.

ಚಂದ್ರು ಪ್ರಕರಣ ಮುಂದಿಟ್ಟುಕೊಂಡು ಗಲಭೆ ಸೃಷ್ಟಿಸಲು ಬಿಜೆಪಿ ಯತ್ನ: ಜಮೀರ್ ಚಂದ್ರು ಪ್ರಕರಣ ಮುಂದಿಟ್ಟುಕೊಂಡು ಗಲಭೆ ಸೃಷ್ಟಿಸಲು ಬಿಜೆಪಿ ಯತ್ನ: ಜಮೀರ್

zameer ahmed khan Clarification On Allegations Against Him By BJP

ಜಮೀರ್ ಪಡಿತರ ಹಂಚಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, "ಜಮೀರ್ ಮನಸ್ಥಿತಿ ಆರೋಪಿಗಳಿಗೆ ಬೆಂಬಲ ನೀಡುವುದು. ಇದು ಸಿದ್ದರಾಮಯ್ಯ ಕೃಪಾಕಟಾಕ್ಷದಿಂದಲೇ ಆಗಿದೆ. ಹಿಂದೆ ಡಿ. ಜೆ. ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲೂ ಇವರು ಆರೋಪಿಗಳ ಪರ ಇದ್ದರು. ಕಾಂಗ್ರೆಸ್ ಪಕ್ಷದಲ್ಲಿ ಹಿಂದೂ ಪರ ಇರುವ ಒಬ್ಬ ನಾಯಕನೂ ಇಲ್ಲ. ಸಿದ್ದರಾಮಯ್ಯ ವೈಸ್ ಕ್ಯಾಪ್ಟನ್ ಜಮೀರ್" ಎಂದು ಆರೋಪಿಸಿದ್ದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಸಹ ಈ ಕುರಿತು ಮಾತನಾಡಿದ್ದರು, "ಡಿ. ಜೆ. ಹಳ್ಳಿ, ಕೆಜಿ ಹಳ್ಳಿ, ಪಾದರಾಯನಪುರದಲ್ಲೂ ಕಾಂಗ್ರೆಸ್ ಪಾತ್ರ ಹಾಗೇ ಇತ್ತು. ಅವರಿಗೆ ಹಣ, ವಕೀಲರ ನೇಮಕ ಎಲ್ಲ ಮಾಡಿದ್ದು ಕಾಂಗ್ರೆಸ್. ಆ ಸಂದರ್ಭದಲ್ಲಿ ಜಮೀರ್ ಹೆಸರು ಕೇಳಿ ಬಂದಿತ್ತು" ಎಂದು ದೂರಿದ್ದರು.

ಮೊದಲು ಆರ್‌ಎಸ್ಎಸ್ ನಿಷೇಧಿಸಿ; ಜಮೀರ್ ಅಹ್ಮದ್ ಖಾನ್ ಮೊದಲು ಆರ್‌ಎಸ್ಎಸ್ ನಿಷೇಧಿಸಿ; ಜಮೀರ್ ಅಹ್ಮದ್ ಖಾನ್

"ಈಗ ಹುಬ್ಬಳ್ಳಿ ಪ್ರಕರಣದಲ್ಲೂ ಜಮೀರ್ ಹೆಸರು ಕೇಳಿ ಬರುತ್ತಿದೆ. ಮಗು ಚಿವುಟಿ ತೊಟ್ಟಿಲು ತೂಗೋ ಕೆಲಸ ಮಾಡುತ್ತಿದ್ದಾರೆ. ಕೋಮು ಗಲಭೆ ಹುಟ್ಟುಹಾಕಿ ವೋಟ್ ಬ್ಯಾಂಕ್ ಗಟ್ಟಿಯಾಗಿ ಇಟ್ಟು ಕೊಳ್ಳಲು ಮುಂದಾಗಿದ್ದಾರೆ. ಅವರಿಗೆ ನೆರವು ಕೊಡುವ ಪಾತ್ರ ಕಾಂಗ್ರೆಸ್‌ನದ್ದು ಇರಬಹುದು ಎಂಬ ಅನುಮಾನಕ್ಕೆ ಸಾಕ್ಷಿ ಒದಗಿಸುವ ರೀತಿ ಜಮೀರ್, ಕಾಂಗ್ರೆಸ್ ನಡುವಳಿಕೆ ಇದೆ" ಎಂದು ಹೇಳಿದ್ದರು.

English summary
Chamarajpet Congress MLA Zameer Ahmed Khan clarification on allegations against him by BJP leaders on Hubballi clash issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X