ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿ ವಿಶೇಷ ಸ್ಪರ್ಧೆಗೆ ಕತೆ, ಕವಿತೆ, ಫೋಟೋ ಕಳಿಸಿ

|
Google Oneindia Kannada News

ಬೆಂಗಳೂರು, ಜ, 12: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಸೌರ ಯುಗಾದಿ ಪ್ರಯುಕ್ತ 'ವಿಷು ವಿಶೇಷ ಸ್ಪರ್ಧೆ-2015' ಹೆಸರಿನ ಸಾಹಿತ್ಯ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಹವ್ಯಕ ಭಾಷಾ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಸಾಹಿತಿ-ಚಿಂತಕರ ಪ್ರತಿಷ್ಠಾನ ಹೊಸ ಪ್ರತಿಭೆಗಳ ಹುಡುಕಾಟಕ್ಕೆ ಸ್ಪರ್ಧೆ ಆಯೋಜಿಸಿದೆ.

ಸ್ಪರ್ಧೆ ಮುಕ್ತವಾಗಿದ್ದು ಬರಹಗಳು ಹವ್ಯಕ ಭಾಷೆಯಲ್ಲೇ ಇರಬೇಕಾದ್ದು ಕಡ್ಡಾಯ. ಸ್ಪರ್ಧೆಯಲ್ಲಿ ಭಾಗವಹಿಸಲು ಮಾರ್ಚ್ 3 ಕೊನೆ ದಿನ ಎಂದು ಸಂಚಾಲಕ ರವಿಶಂಕರ್ ದೊಡ್ಡಮಾಣಿ ತಿಳಿಸಿದ್ದಾರೆ.[ಸಂಸ್ಕೃತವೆಲ್ಲೋ ಜರ್ಮನಿಯೆಲ್ಲೋ, ಏನಿದು ಸಂಬಂಧ]

literature

ಇದು ಹವ್ಯಕ ಭಾಷೆ ಬೆಳವಣಿಗೆ ದೃಷ್ಟಿಯಿಂದ ನಡೆಯುತ್ತಿರುವ ಸ್ಪರ್ಧೆಯಾಗಿದೆ. ಹವ್ಯಕರಲ್ಲದವರು ಭಾಷೆ ಬಲ್ಲವರಾಗಿದ್ದರೆ ಭಾಗವಹಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಪ್ರಭಂಧ, ಕತೆ, ಕವಿತೆ, ನಗೆಬರಹ ಮತ್ತು ಫೋಟೋ ಸ್ಪರ್ಧೆ ಏರ್ಪಡಿಸಲಾಗಿದೆ. ಬರಹ ಮತ್ತು ಫೋಟೋಗಳನ್ನು 'ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ, ಅನುಗ್ರಹ, ಶಿವಗಿರಿ ನಗರ ಕುಳಾಯಿ ಹೊಸಬೆಟ್ಟು, ಮಂಗಳೂರು-575019' ಇಲ್ಲಿಗೆ ಕಳಿಸಬಹುದು. ಅಥವಾ [email protected] ಗೆ ಇಮೇಲ್ ಮಾಡಬಹುದು.

ಹೆಚ್ಚಿನ ಮಾಹಿತಿಗೆ, ಕೊಡೆಯಾಲ - 09449806563 / 09591994644, ಕಾಸರಗೋಡು - 08547245304, ಬೆಂಗಳೂರು - 09448472292 / 09535354380 / 09448271447 ನ್ನು ಸಂಪರ್ಕಿಸಬಹುದು.

ಏನಿದು ಒಪ್ಪಣ್ಣ ಪ್ರತಿಷ್ಠಾನ ?
ಹವ್ಯಕರ ಆಡು ಭಾಷೆಯಲ್ಲಿ ಒಪ್ಪಣ್ಣ ಎಂದರೆ ಒಳ್ಳೆಯ ಹುಡುಗ ಎಂಬ ಅರ್ಥವಿದೆ. ಇದೇ ಹೆಸರಿನ್ನಿಟ್ಟುಕೊಂಡು 2009 ರಲ್ಲಿ ಆರಂಭವಾದ ಅಂತರ್ಜಾಲ ತಾಣ ಇಂದು ಬೃಹತ್ ಆಗಿ ಬೆಳೆದಿದೆ. ತಾಣ ಒಳ ಹೊಕ್ಕಿದರೆ ಸುಮಾರು 2000 ಕ್ಕೂ ಅಧಿಕ ಬರಹಗಳನ್ನು ಕಾಣಬಹುದು.

ಒಪ್ಪಣ್ಣ ಪ್ರತಿಷ್ಠಾನದ ಸಂಪರ್ಕ
ವೆಬ್ ಸೈಟ್
ಫೇಸ್ ಬುಕ್ ಪೇಜ್

English summary
Bengaluru: 'Oppanna Pratistana' conducting a Yugadi special competition based on Havyaka language. Small stories, poem and Photo and photos invited. The last date of registration March 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X