ಕಾಂಗ್ರೆಸ್ ಈ ದೇಶದ ದೊಡ್ಡ ಸಮಸ್ಯೆ : ಯೋಗಿ ಆದಿತ್ಯನಾಥ್

Posted By: Gururaj
Subscribe to Oneindia Kannada

ಬೆಂಗಳೂರು, ಜನವರಿ 07 : 'ದೇಶ ಮತ್ತು ರಾಜ್ಯದ ಸರ್ಕಾರ ಒಂದೇ ಆಗಬೇಕು. ಆಗ ರಾಜ್ಯ ಅಭಿವೃದ್ಧಿಯಾಗುತ್ತದೆ. ಕರ್ನಾಟಕದ ಅಭಿವೃದ್ಧಿಗಾಗಿ ಕಾಂಗ್ರೆಸ್ ತೊಲಗಿಸಿ, ಬಿಜೆಪಿ ಅಧಿಕಾರಕ್ಕೆ ತನ್ನಿ' ಎಂದು ಯೋಗಿ ಆದಿತ್ಯನಾಥ್ ಕರೆ ನೀಡಿದರು.

ಬೆಂಗಳೂರಿನ ಎಂ.ಸಿ.ಲೇಔಟ್‌ನ ಬಿಜಿಎಸ್ ಆಟದ ಮೈದಾನದಲ್ಲಿ ಭಾನುವಾರ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಸಮಾವೇಶ ನಡೆಯಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ಬಿಜೆಪಿ ಸಮಾವೇಶಕ್ಕೆ ಯೋಗಿ ಆದಿತ್ಯನಾಥ್ ಚಾಲನೆ

'ಕೇಂದ್ರ ಸರ್ಕಾರ ಯುವಕರಿಗೆ, ರೈತರಿಗೆ ಜಾರಿಗೆ ತಂದಂತಹ ಯೋಜನೆಗಳು ಕರ್ನಾಟಕದ ಜನರಿಗೆ ತಲುಪುತ್ತಿಲ್ಲ. ತಲುಪಲು ರಾಜ್ಯ ಸರ್ಕಾರ ಬಿಡುತ್ತಿಲ್ಲ. ಕಾಂಗ್ರೆಸ್ ಸದ್ಯ ದೇಶದ ದೊಡ್ಡ ಸಮಸ್ಯೆ, ಆದ್ದರಿಂದ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಿ, ಬಿಜೆಪಿಯನ್ನು ಅಧಿಕಾರಿಕ್ಕೆ ತನ್ನಿ' ಎಂದರು.

ವಿಜಯನಗರದ ಪರಿವರ್ತನಾ ಯಾತ್ರೆಯಲ್ಲಿ ಮೋದಿ ಮೋಡಿ

'ಹಿಂದುತ್ವ ಭಾರತದ ಜೀವನ ಪರಂಪರೆ. ನಾನು ಹಿಂದೂ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದನ್ನು ಇಂದಿನ ಪತ್ರಿಕೆಯಲ್ಲಿ ಓದಿದ್ದೇನೆ. ಅವರು ಹಿಂದುವಾದರೆ ಗೋ ಹತ್ಯೆ ನಿಷೇಧದ ಸಂದರ್ಭದಲ್ಲಿ ಏಕೆ ಬೆಂಬಲ ನೀಡಲಿಲ್ಲ?' ಎಂದು ಆದಿತ್ಯನಾಥ್ ಪ್ರಶ್ನಿಸಿದರು.

ಕನ್ನಡದಲ್ಲಿ ಭಾಷಣ ಆರಂಭ

ಕನ್ನಡದಲ್ಲಿ ಭಾಷಣ ಆರಂಭ

ಯೋಗಿ ಆದಿತ್ಯನಾಥ್ 'ಬೆಂಗಳೂರಿನ ನನ್ನ ಸಹೋದರ ಸಹೋದರಿಯರೇ, ನಿಮಗೆಲ್ಲಾ ನನ್ನ ನಮಸ್ಕಾರಗಳು' ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.

ಹಿಂದುತ್ವ ನೆನಪಾಗುತ್ತಿದೆ

ಹಿಂದುತ್ವ ನೆನಪಾಗುತ್ತಿದೆ

‘ನಾನು ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ಸಂದರ್ಶನ ನೋಡಿದೆ. ಅದರಲ್ಲಿ ನಾನೂ ಹಿಂದೂ ಎಂದು ಹೇಳಿದ್ದಾರೆ. ಇಲ್ಲಿ ನಿಮ್ಮಲ್ಲೆರ ಶಕ್ತಿ ನೋಡಿ ಅವರಿಗೆ ಹಿಂದುತ್ವ ನೆನಪಾಗುತ್ತಿದೆ. ರಾಹುಲ್ ಗಾಂಧಿ ಅವರಿಗೆ ಗುಜರಾತ್‌ನಲ್ಲಿ ಮಂದಿರಗಳು ನೆನಪಿಗೆ ಬಂದಿದ್ದವು' ಎಂದು ಲೇವಡಿ ಮಾಡಿದರು.

ಜಾತಿ ಆಧಾರಿತವಾಗಿ ಒಡೆಯುತ್ತಿದೆ

ಜಾತಿ ಆಧಾರಿತವಾಗಿ ಒಡೆಯುತ್ತಿದೆ

'ಚುನಾವಣೆ ಬಂದಾಗ ಜಾತಿ, ಮತ, ಪಂಥದ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತದೆ. ಗುಜರಾತ್, ಹಿಮಾಲಚಲ ಪ್ರದೇಶದಲ್ಲಿ ಪಕ್ಷ ಸೋಲುಕಂಡಿದೆ. ಕರ್ನಾಟಕದಲ್ಲಿಯೂ ಅದು ಆಗಬೇಕು'.

ಕಾಂಗ್ರೆಸ್ ದೇಶದ ದೊಡ್ಡ ಸಮಸ್ಯೆ

ಕಾಂಗ್ರೆಸ್ ದೇಶದ ದೊಡ್ಡ ಸಮಸ್ಯೆ

'ತಮ್ಮ ಭ್ರಷ್ಟ ಕೆಲಸಗಳಿಂದ, ಆಡಳಿತದಿಂದ ಕಾಂಗ್ರೆಸ್ ದೇಶದ ದೊಡ್ಡ ಸಮಸ್ಯೆಯಾಗಿದೆ. ಕಾಂಗ್ರೆಸ್ ಆಡಳಿತದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವುದು ಬಿಟ್ಟು, ಹಿಂದೆ ತೆಗೆದುಕೊಂಡು ಹೋಗುತ್ತಿದ್ದಾರೆ' ಎಂದು ಆದಿತ್ಯನಾಥ್ ದೂರಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಅವಶ್ಯಕತೆ ಇದೆ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಅವಶ್ಯಕತೆ ಇದೆ

‘ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿ ಮಾಡಲು ಸಂಕಲ್ಪ ಮಾಡಿದ್ದಾರೆ. ಕರ್ನಾಟಕಕ್ಕೂ ಅಭಿವೃದ್ಧಿ ಯೋಜನೆಗಳು ಬರಬೇಕಾದರೆ ಇಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಅವಶ್ಯಕತೆ ಇದೆ' ಎಂದು ಆದಿತ್ಯನಾಥ್ ಹೇಳಿದರು.

ಅಟಲ್ ಜಿ ಕೊಡುಗೆ

ಅಟಲ್ ಜಿ ಕೊಡುಗೆ

‘ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಗಳಾಗಿದ್ದಾಗ ಬೆಂಗಳೂರಿಗೆ ವಿಮಾನ ನಿಲ್ದಾಣವನ್ನು ಕೊಡುಗೆಯಾಗಿ ನೀಡಿದರು. ಮೋದಿ ಅವರು ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಕೊಡುಗೆಯಾಗಿ ನೀಡಿದರು. ಆದರೆ, ಅದನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿಲ್ಲ' ಎಂದು ದೂರಿದರು.

ದೇಶ, ರಾಜ್ಯ ಸರ್ಕಾರ ಒಂದಾಗಬೇಕು

ದೇಶ, ರಾಜ್ಯ ಸರ್ಕಾರ ಒಂದಾಗಬೇಕು

‘ಐಟಿ ಸಿಟಿ ಬೆಂಗಳೂರಿನಲ್ಲಿ ಡಿಜಿಟಲ್ ಇಂಡಿಯಾದ ಕನಸನ್ನು ನನಸು ಮಾಡಬೇಕು. ಬೆಂಗಳೂರು ವಿಕಾಸದ ಹಾದಿಯಲ್ಲಿ ಸಾಗಬೇಕು ಅದಕ್ಕಾಗಿ ನಾವೆಲ್ಲರೂ ನಿಮ್ಮ ಮುಂದೆ ಬಂದಿದ್ದೇವೆ. ಪಕ್ಷವನ್ನು ಬೆಂಬಲಿಸಿ' ಎಂದು ಕರೆ ನೀಡಿದರು.

ಕಾಂಗ್ರೆಸ್ ಎಟಿಎಂ ಆಗಿದೆ

ಕಾಂಗ್ರೆಸ್ ಎಟಿಎಂ ಆಗಿದೆ

‘ದೇಶದಲ್ಲಿ ಎಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ. ಆದ್ದರಿಂದ, ಕರ್ನಾಟಕ ಕಾಂಗ್ರೆಸ್ ಪಕ್ಷದ ಪಾಲಿಗೆ ಎಟಿಎಂ ಆಗಿದೆ. ರಾಜ್ಯದ ಜನರ ಹಣ ಪಕ್ಷದ ಖಜಾನೆ ಸೇರುತ್ತಿದೆ' ಎಂದು ಆದಿತ್ಯನಾಥ್ ಆರೋಪಿಸಿದರು.

ಜನರು ಕಾಂಗ್ರೆಸ್‌ ಅನ್ನು ಹೊಡೆದೊಡಿಸುತ್ತಿದ್ದಾರೆ

ಜನರು ಕಾಂಗ್ರೆಸ್‌ ಅನ್ನು ಹೊಡೆದೊಡಿಸುತ್ತಿದ್ದಾರೆ

‘ದೇಶದಲ್ಲಿ ಜನರು ಕಾಂಗ್ರೆಸ್‌ ಪಕ್ಷವನ್ನು ಹೊಡೆದೊಡಿಸುತ್ತಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಜನರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಗುಜರಾತ್‌ನಲ್ಲಿ 6ನೇ ಬಾರಿ ಸರ್ಕಾರ ಮಾಡಿದ್ದೇವೆ' ಎಂದರು.

ಕರ್ನಾಟಕದಲ್ಲಿ ಅಭಿವೃದ್ಧಿ ಬೇಡವೆ?

ಕರ್ನಾಟಕದಲ್ಲಿ ಅಭಿವೃದ್ಧಿ ಬೇಡವೆ?

‘ಗುಜರಾತ್‌ನಲ್ಲಿ 6ನೇ ಬಾರಿ ಸರ್ಕಾರ ಮಾಡಿದ್ದೇವೆ ಎಂದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ. ಗುಜರಾತ್ ಅಭಿವೃದ್ಧಿ ನಮಗೆ ಮಾದರಿ. ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಬೇಕು'

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttar Pradesh Chief minister Yogi Adityanath addressed Nava Karnataka Parivarthana Yatra in Bengaluru on Jaunuary 7, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ