ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೆರಡು ತಿಂಗಳು ಮಾತ್ರ ಯಡಿಯೂರಪ್ಪ ಸಿಎಂ, ನಂತರ ರಾಜ್ಯಪಾಲ?

|
Google Oneindia Kannada News

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಇನ್ನೆರಡು ತಿಂಗಳು ಮಾತ್ರನಾ?

ಈ ರೀತಿಯ ಪ್ರಶ್ನೆ, ಕೆಲವು ತಿಂಗಳ ಹಿಂದೆ ಬಿಜೆಪಿ ಪಡಶಾಲೆಯಲ್ಲಿ ಹರಿದಾಡುತ್ತಿದ್ದದ್ದಂತೂ ನಿಜ. ಆದರೆ, ಇದು ಮಹಾರಾಷ್ಟ್ರ ಮತ್ತು ಹರಿಯಾಣ ಅಸೆಂಬ್ಲಿ ಚುನಾವಣಾ ಫಲಿತಾಂಶ ಬರುವ ಮುಂಚಿನ ಸುದ್ದಿಯಾಗಿತ್ತು.

ಎರಡು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಕೊಂಚ ಹಿನ್ನಡೆ ಅನುಭಸಿದ್ದಕ್ಕೆ ಕಾರಣ, ಸ್ಥಳೀಯ ಸಮಸ್ಯೆ ಮತ್ತು ಮುಖಂಡರಿಗೆ ಆದ್ಯತೆ ನೀಡದೇ ಇದ್ದದ್ದು ಎಂದು ವ್ಯಾಖ್ಯಾನಿಸಲಾಗಿತ್ತು.

ಆಡಿಯೋ ಮೂಡಿಸಿದ ಭಯ: ಸಿಎಂ ಭೇಟಿ ವೇಳೆ ಮೊಬೈಲ್ ನಿಷೇಧಆಡಿಯೋ ಮೂಡಿಸಿದ ಭಯ: ಸಿಎಂ ಭೇಟಿ ವೇಳೆ ಮೊಬೈಲ್ ನಿಷೇಧ

ಹೀಗಾಗಿ, ರಾಜ್ಯದ ವಿಚಾರಕ್ಕೆ ಬಂದಾಗ, ಯಡಿಯೂರಪ್ಪ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದಾರೆಂದೇ ಹೇಳಲಾಗುತ್ತಿತ್ತು. ಆದರೆ, ಜೆಡಿಎಸ್ ಶಾಸಕರೊಬ್ಬರು, "ಇನ್ನೆರಡು ತಿಂಗಳು ಮಾತ್ರ ಬಿಎಸ್ವೈ ಸಿಎಂ" ಎನ್ನುವ ಸ್ಪೋಟಕ ಹೇಳಿಕೆಯನ್ನು ನೀಡಿರುವುದು, ಮತ್ತೆ ಆ ವಿಚಾರ ಮುನ್ನಲೆಗೆ ಬಂದಿದೆ. ಶಾಸಕರು ಹೇಳಿದ ಮಾತು, ಮುಂದೆ..

ಬಿಜೆಪಿ ವರಿಷ್ಠರು

ಬಿಜೆಪಿ ವರಿಷ್ಠರು

ಯಡಿಯೂರಪ್ಪನವರು ರಾಜ್ಯದಲ್ಲಿ ಪಕ್ಷವನ್ನು ಬೆಳೆಸಿದ ರೀತಿ ಮತ್ತು ಅವರಿಗಿರುವ ಅನುಭವದ ಲಾಭವನ್ನು ಬಿಜೆಪಿ ವರಿಷ್ಠರು ಪಡೆಯುತ್ತಿಲ್ಲ ಎನ್ನುವ ಮಾತು ಹಿಂದಿನಿಂದಲೂ ಚಾಲ್ತಿಯಲ್ಲಿತ್ತು. ಅದಕ್ಕೆ ಪೂರಕ ಎನ್ನುವಂತೆ, ಬಿಎಸ್ವೈ ಅಧಿಕಾರ ಸ್ವೀಕರಿಸಿದ ನಂತರ, ಹಲವು ವಿದ್ಯಮಾನಗಳು /ಆಯ್ಕೆಗಳು ಅವರ ಅನುಮತಿ ಪಡೆಯದೇ ಮಾಡಲಾಗಿತ್ತು ಎನ್ನುವ ಮಾತಿತ್ತು. ಉದಾಹರಣೆಗೆ ಅವರೇ ಹೇಳಿದಂತೆ, ಮೂರು ಡಿಸಿಎಂ ಆಯ್ಕೆ.

ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು

ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು

ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಬುಧವಾರ (ನ 6), ರಾಜ್ಯ ರಾಜಕೀಯ ಮತ್ತು ಬಿಜೆಪಿ ಬಗ್ಗೆ ಕೆಲವು ವಿಚಾರವನ್ನು ಪ್ರಸ್ತಾವಿಸಿದ್ದಾರೆ. ಅದು ಹೀಗಿದೆ, " ಸುಮಾರು ದಿನಗಳಿಂದ ನೋಡುತ್ತಿದ್ದೇವೆ. ಯಡಿಯೂರಪ್ಪನವರಿಗೆ ಅಲ್ಲಿ (ಬಿಜೆಪಿ) ಕ್ಷೇಮವಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ಬಿಜೆಪಿ ವರಿಷ್ಠರು ಅವರನ್ನು ಸಿಎಂ ಆಗಿ ಮುಂದುವರಿಸಿದ್ದಾರೆ".

ಕೇರಳದ ರಾಜ್ಯಪಾಲರನ್ನಾಗಿ ಬಿಎಸ್ವೈ

ಕೇರಳದ ರಾಜ್ಯಪಾಲರನ್ನಾಗಿ ಬಿಎಸ್ವೈ

"ಸುಮ್ಮನೆ ಒಂದು ತಿಂಗಳು, ಎರಡು ತಿಂಗಳಷ್ಟೇ ಯಡಿಯೂರಪ್ಪ ಸಿಎಂ ಆಗಿರುತ್ತಾರೆ. ಡಿಸೆಂಬರ್ ತನಕ ಅವರ ಅವಧಿ ಮುಂದುವರಿಯುತ್ತದೆ. ಅದಾದ ನಂತರ, ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸುತ್ತಾರೆ" ಎನ್ನುವ ಮಾತನ್ನು ಕಂದಕೂರ ಹೇಳಿದ್ದಾರೆ.

ಯಡಿಯೂರಪ್ಪನವರಿಗೆ ಈ ವಿಚಾರವನ್ನು ತಿಳಿಸಲಾಗಿದೆ

ಯಡಿಯೂರಪ್ಪನವರಿಗೆ ಈ ವಿಚಾರವನ್ನು ತಿಳಿಸಲಾಗಿದೆ

"ಈಗಾಗಲೇ ಯಡಿಯೂರಪ್ಪನವರಿಗೆ ಈ ವಿಚಾರವನ್ನು ತಿಳಿಸಲಾಗಿದೆ. ನಿಮ್ಮನ್ನು ಗೌರವಯುತವಾಗಿ ಬೀಳ್ಕೊಡುತ್ತೇವೆ. ನಿಮ್ಮನ್ನು ರಾಜ್ಯಪಾಲರನ್ನಾಗಿ ನೇಮಿಸುತ್ತೇವೆ. ನಿಮ್ಮ ಮಗನನ್ನು (ವಿಜಯೇಂದ್ರ) ಎಂಎಲ್ಸಿ ಮಾಡಿ, ಸಚಿವರನ್ನಾಗಿ ಮಾಡುತ್ತೇವೆ ಎಂದು ವರಿಷ್ಠರು ಯಡಿಯೂರಪ್ಪನವರಿಗೆ ತಿಳಿಸಿದ್ದಾರೆ" ಎನ್ನುವ ಮಾತನ್ನು ಕುಂದಕೂರ ಹೇಳಿದ್ದಾರೆ.

ಬಿಜೆಪಿಯವರೇ ಮಾಡಿಸಿದ್ದು ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರ ಹೇಳಿಕೆ

ಬಿಜೆಪಿಯವರೇ ಮಾಡಿಸಿದ್ದು ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರ ಹೇಳಿಕೆ

ಜೆಡಿಎಸ್ ಶಾಸಕರ ಈ ಹೇಳಿಕೆಗೆ ಬಿಜೆಪಿಯ ಯಾವ ಮುಖಂಡರೂ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಆಡಿಯೋ ಲೀಕ್ ವಿಚಾರ, ಬಿಜೆಪಿಯವರೇ ಮಾಡಿಸಿದ್ದು ಎಂದು ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ಮುಖಂಡರು ಹೇಳಿಕೆಯನ್ನು ನೀಡುತ್ತಿದ್ದಾರೆ.

English summary
Yediyurappa Will Continue As Chief Minister Only Till December, After That He Will Be Appointed As Kerala Governor, JDS MLA Naganagouda Kandkur Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X