ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಲ್ಡ್ ಕರ್ನಾಟಕ ಕಿರುಚಿತ್ರ ನೋಡಿದ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಜನವರಿ 28 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 'ವೈಲ್ಡ್ ಕರ್ನಾಟಕ' ಕಿರುಚಿತ್ರವನ್ನು ವೀಕ್ಷಿಸಿದರು. ಕರ್ನಾಟಕದ ವನ್ಯಜೀವಿ ಸಂಪತ್ತನ್ನು ವಿಶ್ವಕ್ಕೆ ಪರಿಚಯಿಸಲು ಯುವಕರ ತಂಡ ಈ ಕಿರುಚಿತ್ರವನ್ನು ರೂಪಿಸಿದೆ.

ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ಯಡಿಯೂರಪ್ಪ 'ವೈಲ್ಡ್ ಕರ್ನಾಟಕ' ಕಿರುಚಿತ್ರ ವೀಕ್ಷಿಸಿದರು. ಅರಣ್ಯ ಸಚಿವ ಸಿ. ಸಿ. ಪಾಟೀಲ್, ಅರಣ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅರಣ್ಯ ಇಲಾಖೆ ವಾಹನದ ಮೇಲೆ ಒಂಟಿ ಸಲಗದ ದಾಳಿ: ಎದೆ ನಡುಗಿಸುವ ವಿಡಿಯೋಅರಣ್ಯ ಇಲಾಖೆ ವಾಹನದ ಮೇಲೆ ಒಂಟಿ ಸಲಗದ ದಾಳಿ: ಎದೆ ನಡುಗಿಸುವ ವಿಡಿಯೋ

ರಾಜ್ಯದ ವನ್ಯಜೀವಿ ಸಂಪತ್ತನ್ನು ವಿಶ್ವಕ್ಕೆ ಪರಿಚಯಿಸಲು ಯುವಕರ ತಂಡ ಈ ಕಿರುಚಿತ್ರವನ್ನು ರೂಪಿಸಿದೆ. ಭಾರತದ ಪ್ರಥಮ 4ಕೆ ಬ್ಲ್ಯೂ ಚಿಪ್‌ ಕಿರುಚಿತ್ರ ಎಂಬ ಹೆಗ್ಗಳಿಗೆ ವೈಲ್ಡ್‌ ಕರ್ನಾಟಕಕ್ಕಿದೆ.

 ಚಿತ್ರದುರ್ಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಾಪತ್ತೆ; ಚಿರತೆಗೆ ಬಲಿಯಾಗಿರುವ ಶಂಕೆ ಚಿತ್ರದುರ್ಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಾಪತ್ತೆ; ಚಿರತೆಗೆ ಬಲಿಯಾಗಿರುವ ಶಂಕೆ

Yediyurappa

ಅತ್ಯಾಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು, ರಾಜ್ಯದ ಮೂಲೆ ಮೂಲೆ ತಿರುಗಾಡಿ ಅಪರೂಪದ ದೃಶ್ಯಾವಳಿಗಳನ್ನು ಸೆರೆ ಹಿಡಿದು ಈ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗಿದೆ.

 ಕಾಡು ಪ್ರಾಣಿ ನಾಡಿಗೆ ಬರುವುದ ತಡೆಯುವುದೇ ಈ ಆಸ್ಟ್ರೇಲಿಯಾ ತಂತ್ರಜ್ಞಾನ? ಕಾಡು ಪ್ರಾಣಿ ನಾಡಿಗೆ ಬರುವುದ ತಡೆಯುವುದೇ ಈ ಆಸ್ಟ್ರೇಲಿಯಾ ತಂತ್ರಜ್ಞಾನ?

ಅಮೋಘವರ್ಷ, ಕಲ್ಯಾಣ ವರ್ಮ, ಶರತ್ ಚಂಪಾಟಿ 'ವೈಲ್ಡ್ ಕರ್ನಾಟಕ' ಕಿರುಚಿತ್ರದ ರೂವಾರಿಗಳು. ಕಿರುಚಿತ್ರದ ಟೀಸರ್‌ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಿರುಚಿತ್ರದ ಚಿತ್ರೀಕರಣಕ್ಕಾಗಿ ಸುಮಾರು ಸುಮಾರು 2 ಕೋಟಿ ವೆಚ್ಚದ ದ್ರೋಣ್ ಬಳಕೆ ಮಾಡಲಾಗಿದೆ.

ಛಾಯಾಗ್ರಹಣವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಬೆಂಗಳೂರು ಮೂಲದ ಅಮೋಘವರ್ಷ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್. ಸಂಪೂರ್ಣವಾಗಿ ಛಾಯಾಗ್ರಹಣದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.

English summary
Karnataka chief minister B. S. Yediyurappa watched documentary film Wild Karnataka on January 28, 2020. Documentary which showcases the biodiversity of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X