ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಮೇಲೆ ಯಡಿಯೂರಪ್ಪ ಅಸಮಾಧಾನ: ಮೋದಿಗೆ ಪತ್ರ

|
Google Oneindia Kannada News

Recommended Video

CM Yediyurappa writes unhappy letter to Modi | CM Yediyurappa | Modi | Oneindia Kannada

ಬೆಂಗಳೂರು, ಫೆಬ್ರವರಿ 20: ಸಿಎಂ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದು ಮೋದಿಗೆ ಪತ್ರ ಬರೆದಿದ್ದಾರೆ.

ರಾಜ್ಯಕ್ಕೆ ಅನುದಾನ ಕಡಿತಗೊಳಿಸಿರುವ ಬಗ್ಗೆ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ. ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರೆ ಬರೆದಿರುವ ಬಗ್ಗೆ ಹಣಕಾಸು ಇಲಖೆ ಸ್ಪಷ್ಟಪಡಿಸಿದ್ದು, 'ಮನವಿ ಮಾಡಿಕೊಳ್ಳಲಾಗಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಜೆಟ್ ಬಳಿಕ ವಾಹನ ಸವಾರರಿಗೆ ಶಾಕ್ ನೀಡಲಿದೆ ರಾಜ್ಯ ಸರ್ಕಾರಬಜೆಟ್ ಬಳಿಕ ವಾಹನ ಸವಾರರಿಗೆ ಶಾಕ್ ನೀಡಲಿದೆ ರಾಜ್ಯ ಸರ್ಕಾರ

2019- 20ರ ಸಾಲಿನಲ್ಲಿ ಕೇಂದ್ರ ನೀಡಲೇಬೇಕಾಗಿದ್ದ ಮೊತ್ತದಲ್ಲಿ 17 ಸಾವಿರ ಕೋಟಿ ಕೊರತೆ ಯಾಗಲಿದೆ. ಅನುದಾನ ಹಂಚಿಕೆ ಲೆಕ್ಕದಲ್ಲಿ 8,813 ಕೋಟಿ ಕೈ ತಪ್ಪುವುದು ಖಚಿತ ಎನ್ನಲಾಗಿದೆ. ಜಿಎಸ್‌ಟಿ ಪಾಲು ನಾಲ್ಕು ಸಾವಿರ ಕೋಟಿ ಸಹ ಕೈತಪ್ಪಲಿದೆ. ಜೊತೆಗೆ ಜಿಎಸ್‌ಟಿ ಪರಿಹಾರ ಐದು ಸಾವಿರ ಕೋಟಿಯಲ್ಲಿ ಮೂರು ಸಾವಿರ ಕೋಟಿ ಸಹ ಬರುವುದು ಅನುಮಾನ.

Yediyurappa Unhappy With Central Government Over Grant Cut

15ನೇ ಹಣಕಾಸು ಆಯೋಗದ ಲೆಕ್ಕಾಚಾರದಲ್ಲಿ ಅನುದಾನ ಹಂಚಿಕೆಯ ಮಾನದಂಡಗಳನ್ನು ಬದಲಾವಣೆ ಮಾಡಿದ್ದರಿಂದಾಗಿ ರಾಜ್ಯಕ್ಕೆ ದೊಡ್ಡ ಪ್ರಮಾಣದ ನಷ್ಟ ಆಗಲಿದೆ. ಕೇಂದ್ರ ಬಜೆಟ್‌ನ ಅಂದಾಜಿನಂತೆ 5,102 ಕೋಟಿ ರೂ ಕೊರತೆ ಯಾಗಲಿದೆ.

ಕೇಂದ್ರ ಆರ್ಥಿಕ ಇಲಾಖೆ ದಾಖಲೆಗಳ ಅನುಸಾರ ಒಟ್ಟು 11,215 ಕೋಟಿಯಷ್ಟು ನಷ್ಟವಾಗಲಿದೆ. ಇದರ ಜತೆಗೆ ಜಿಎಸ್‌ಟಿ ಪರಿಹಾರ ಮೊತ್ತದಲ್ಲಿ ಎಷ್ಟು ಕಡಿತವಾಗಲಿದೆ ಎಂಬುದು ಗೊತ್ತಿಲ್ಲ. ಬಜೆಟ್‌ ಮಂಡನೆ ಹೊತ್ತಿಗೆ ಈ ಲೆಕ್ಕಾಚಾರ ಪಕ್ಕಾ ಆಗಲಿದೆ.

ಯಡಿಯೂರಪ್ಪ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್, ಬಜೆಟ್ ಚರ್ಚೆಯಡಿಯೂರಪ್ಪ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್, ಬಜೆಟ್ ಚರ್ಚೆ

ರಾಜ್ಯ ಬಜೆಟ್ ಸನಿಹದಲ್ಲೇ ಇದ್ದು, ರಾಜ್ಯಕ್ಕೆ ಕಡಿತ ಮಾಡಿರುವ ಅನುದಾನದ ಮಾಹಿತಿ ನೀಡುವಂತೆ ಹಾಗೂ ಕಡಿತ ಮಾಡಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಪತ್ರದಲ್ಲಿ ಕೋರಲಾಗಿದೆ.

English summary
Central Goverment cut grant amount for Karnataka. CM Yediyurappa unhappy with central government over grant cut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X