ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ ಹೇರಿಕೆ ವಿರುದ್ಧ ಮೌನ ಮುರಿದ ಯಡಿಯೂರಪ್ಪ

|
Google Oneindia Kannada News

Recommended Video

ನಮ್ಮ ಬಾಷೆಯ ತಂಟೆಗೆ ಬಂದ್ರೆ ಸಹಿಸುವುದಿಲ್ಲ..? | Amit Shah | Oneindia Kannada

ಬೆಂಗಳೂರು, ಸೆಪ್ಟೆಂಬರ್ 16: 'ಒಂದು ದೇಶ, ಒಂದು ಭಾಷೆ' ಎನ್ನುವ ಮೂಲಕ ದಕ್ಷಿಣ ಭಾರತ ರಾಜ್ಯಗಳಲ್ಲಿ ಅಮಿತ್ ಶಾ ಭಾಷೆ ಹೋರಾಟದ ಕಿಚ್ಚು ಹುಟ್ಟುವಂತೆ ಮಾಡಿದ್ದಾರೆ. ತಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರ ಹೇಳಿಕೆಯಿಂದ ಇಕ್ಕಟ್ಟಿಗೆ ಸಿಲುಕಿದ್ದ ರಾಜ್ಯ ಬಿಜೆಪಿ ಇಂದು ತನ್ನ ನಿಲವು ಸ್ಪಷ್ಟಪಡಿಸಿದೆ.

ಸಿಎಂ ಯಡಿಯೂರಪ್ಪ ಅವರು, ಹಿಂದಿ ಹೇರಿಕೆಯ ಬಗ್ಗೆ ತೋರಿದ್ದ ಮೌನವನ್ನು ಕೊನೆಗೂ ಮುರಿದಿದ್ದು, ತಮಗೆ 'ಕನ್ನಡವೇ ಮುಖ್ಯ' ಎಂದು ಹೇಳುವ ಮೂಲಕ ಹಿಂದಿ ಹೇರಿಕೆಯ ಪ್ರಯತ್ನದ ವಿರುದ್ಧ ನಿಂತಿದ್ದಾರೆ.

ಹಿಂದಿ ಹೇರಿಕೆ: ಬೆಂಕಿಗೆ ತುಪ್ಪ ಸುರಿದ 'ನಮ್ಮ ಕನ್ನಡ'ದ ಕೇಂದ್ರ ಸಚಿವಹಿಂದಿ ಹೇರಿಕೆ: ಬೆಂಕಿಗೆ ತುಪ್ಪ ಸುರಿದ 'ನಮ್ಮ ಕನ್ನಡ'ದ ಕೇಂದ್ರ ಸಚಿವ

ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪ, 'ದೇಶದ ಎಲ್ಲ ಅಧಿಕೃತ ಭಾಷೆಗಳೂ ಸಮಾನವೇ, ಕರ್ನಾಟಕಕ್ಕೆ ಕನ್ನಡವೇ ಪ್ರಧಾನ ಭಾಷೆ' ಎಂದಿರುವ ಅವರು, 'ಇದರ ಬಗ್ಗೆ ಯಾವುದೇ ರಾಜಿ ಇಲ್ಲ' ಎಂದು ಹೇಳಿದ್ದಾರೆ.

Yediyurappa Tweet About Hindi Imposition

'ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ‌ ಯಾವುದೇ ತಾರತಮ್ಯ ಸಲ್ಲದು‌. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ' ಎಂದು ಯಡಿಯೂರಪ್ಪ ಹೇಳಿದ್ದಾರೆ.

ಹಿಂದಿ ಹೇರಿಕೆ: ವೈರಲ್ ಆದ ದೇವೇಗೌಡರ ಹಿಂದಿ ಭಾಷಣದ ವಿಡಿಯೋಹಿಂದಿ ಹೇರಿಕೆ: ವೈರಲ್ ಆದ ದೇವೇಗೌಡರ ಹಿಂದಿ ಭಾಷಣದ ವಿಡಿಯೋ

ಸೆಪ್ಟೆಂಬರ್ 05 ರಂದು ಹಿಂದಿ ದಿವಸ ಆಚರಣೆ ಮತ್ತು ಅಂದು ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು 'ಒಂದು ದೇಶ, ಒಂದು ಭಾಷೆ' ಸೂತ್ರದ ಬಗ್ಗೆ ಮಾತನಾಡಿರುವುದು ದಕ್ಷಿಣದ ರಾಜ್ಯಗಳಲ್ಲಿ ಭಾರಿ ಪ್ರತಿರೋಧ ಎಬ್ಬಿಸಿದೆ.

English summary
CM Yediyurappa tweet today about hindi imposition. He said 'We will never compromise its importance and are committed to promote Kannada and our state's culture'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X