ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದಾಯ ಭಾಷಣದಲ್ಲೂ ಅಪ್ಪ, ಮಗನನ್ನು ಕುಟುಕಿದ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಜುಲೈ 26: ನಿನ್ನೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು, ಇಂದು ಹಂಗಾಮಿ ಮುಖ್ಯಮಂತ್ರಿಯಾಗಿದ್ದಾರೆ. ದೆಹಲಿ-ಬೆಂಗಳೂರು ರಾಜಕೀಯ ಚದುರಂಗದಾಟದಲ್ಲಿ ಬಿಎಸ್ವೈ ಚೆಕ್ ಮೇಟ್ ಆಗಿದ್ದಾರೆ.

ತಮ್ಮ ವಿದಾಯ ಭಾಷಣದಲ್ಲಿ ಯಡಿಯೂರಪ್ಪನವರು, ಅಪ್ಪ (ದೇವೇಗೌಡ್ರು) ಮತ್ತು ಮಗ (ಎಚ್.ಡಿ.ಕುಮಾರಸ್ವಾಮಿ) ಹೆಸರನ್ನು ಪ್ರಸ್ತಾವಿಸಿದ್ದಾರೆ. ಅಂದು ಕುಮಾರಸ್ವಾಮಿಯವರು ಕೊಟ್ಟ ಮಾತಿಗೆ ತಪ್ಪಿದ ವೃತ್ತಾಂತವನ್ನು ಒತ್ತಿ ಹೇಳಿದ್ದಾರೆ.

 ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ: ಹಾಲು ಕುಡಿದವರು ಯಾರ್ಯಾರು? ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ: ಹಾಲು ಕುಡಿದವರು ಯಾರ್ಯಾರು?

ಅಪ್ಪ ಮಗನ ಬಗ್ಗೆ ಯಡಿಯೂರಪ್ಪನವರು ಪ್ರಸ್ತಾವಿಸುವುದು ಇದೇನು ಹೊಸತಲ್ಲ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊಮ್ಮಿ, ಸಿಎಂ ಆಗಿದ್ದ ಯಡಿಯೂರಪ್ಪನವರು ಸಂಖ್ಯಾ ಬಲದ ಮುಂದೆ ಶರಣಾಗಿ ರಾಜೀನಾಮೆ ನೀಡಬೇಕಾಗಿ ಬಂತು.

ಆ ವೇಳೆಯೂ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣೀಕರ್ತರಾಗಿದ್ದ, ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಉಲ್ಲೇಖಿಸಿ ಗೌಡ್ರು ಮತ್ತು ಎಚ್ಡಿಕೆ ವಿರುದ್ದ ಬಿಎಸ್ವೈ ಕಿಡಿಕಾರಿದ್ದರು.

 ಅದೇನು ಗ್ರಹಗತಿಯೋ? ಮತ್ತೆ ಯಡಿಯೂರಪ್ಪನವರಿಗೆ ಆಷಾಢ ಸಂಕಷ್ಟ ಅದೇನು ಗ್ರಹಗತಿಯೋ? ಮತ್ತೆ ಯಡಿಯೂರಪ್ಪನವರಿಗೆ ಆಷಾಢ ಸಂಕಷ್ಟ

 ನಾಡಿನ ಜನರ ನಂಬಿಕೆಗೆ ದ್ರೋಹ ಬಗೆದ ಕುಮಾರಸ್ವಾಮಿ)ಯನ್ನು ಸಿಎಂ ಮಾಡಲು ಹೊರಟಿದ್ದೀರಾ

ನಾಡಿನ ಜನರ ನಂಬಿಕೆಗೆ ದ್ರೋಹ ಬಗೆದ ಕುಮಾರಸ್ವಾಮಿ)ಯನ್ನು ಸಿಎಂ ಮಾಡಲು ಹೊರಟಿದ್ದೀರಾ

ಮೇ 25, 1018ರಲ್ಲಿ ಸದನದಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, "ಸ್ವಾಮಿ, ಶಿವಕುಮಾರ್ ಅವರೇ ನಾಳೆ ನೀವು ಪಶ್ಚಾತ್ತಾಪ ಪಡಲಿದ್ದೀರಿ. ಅಕ್ಷಮ್ಯ ಅಪರಾಧವನ್ನು ಮಾಡಿ, ಎಲ್ಲರನ್ನೂ ರಕ್ಷಣೆ ಮಾಡಿದ್ದೀರಾ. ನಾಡಿನ ಜನರ ನಂಬಿಕೆಗೆ ದ್ರೋಹ ಬಗೆದ ಒಬ್ಬ ವ್ಯಕ್ತಿಯನ್ನು (ಎಚ್.ಡಿ.ಕುಮಾರಸ್ವಾಮಿ) ಸಿಎಂ ಮಾಡಲು ಹೊರಟಿದ್ದೀರಾ. ಇದು ನ್ಯಾಯವೇ"ಎಂದು ಬಿಎಸ್ವೈ ಪ್ರಶ್ನಿಸಿದ್ದರು.

 ನಿಮ್ಮನ್ನು ಮತ್ತು ನಿಮ್ಮ ಪಕ್ಷವನ್ನು ಇಲ್ಲದಂತೆ ಅಪ್ಪ ಮಕ್ಕಳು ಸೇರಿ ಮಾಡುತ್ತಾರೆ

ನಿಮ್ಮನ್ನು ಮತ್ತು ನಿಮ್ಮ ಪಕ್ಷವನ್ನು ಇಲ್ಲದಂತೆ ಅಪ್ಪ ಮಕ್ಕಳು ಸೇರಿ ಮಾಡುತ್ತಾರೆ

"ಕಾಲವೇ ನಿಮ್ಮ ನಿರ್ಧಾರಕ್ಕೆ ಉತ್ತರ ಕೊಡಲಿದೆ, ನೀವು ಖಳನಾಯಕರಾಗಿದ್ದೀರಿ. ನಿಮ್ಮನ್ನು ಮತ್ತು ನಿಮ್ಮ ಪಕ್ಷವನ್ನು ಇಲ್ಲದಂತೆ ಅಪ್ಪ ಮಕ್ಕಳು ಸೇರಿ ಮಾಡಿಲ್ಲದಿದ್ದರೆ ನನ್ನನ್ನು ಯಡಿಯೂರಪ್ಪ ಅಂತ ಕರೆಯಬೇಡಿ"ಎಂದು ಯಡಿಯೂರಪ್ಪ ಅಂದು ಸದನದಲ್ಲಿ ಹೇಳಿದ್ದರು.

 ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ

ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ

ಇಂದು (ಜುಲೈ 26) ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ ತಾವು ಬಿಜೆಪಿಯಲ್ಲಿ ಬೆಳೆದು ಬಂದಿದ್ದು, ಪಕ್ಷವನ್ನು ಕಟ್ಟಲು ಪಟ್ಟ ಶ್ರಮದ ಬಗ್ಗೆ ವಿವರಣೆಯನ್ನು ನೀಡುತ್ತಿದ್ದರು. ಕೆಲವೊಂದು ಕಡೆ ಭಾವೋದ್ವೇಗಕ್ಕೆ ಒಳಗಾಗಿ ಭಾಷಣ ಮಾಡಿದರು. ಆ ವೇಳೆ ಮತ್ತೆ ಅಪ್ಪ ಮಕ್ಕಳ ಹೆಸರನ್ನು ಪ್ರಸ್ತಾವಿಸಿದರು.

Recommended Video

BSY ನೋವಿನಿಂದ ಕಣ್ಣೀರು ಹಾಕಿದ್ದಕ್ಕೆ ಬಿಜೆಪಿಗಿಂತ ಹೆಚ್ಚು ಮರುಗಿದ ಕಾಂಗ್ರೆಸ್ | Oneindia Kannada
 ಬದಲಾದ ರಾಜಕೀಯದಲ್ಲಿ ಜೆಡಿಎಸ್ ಜೊತೆ ಸೇರಿ ಸರಕಾರವನ್ನು ರಚಿಸಿದೆವು

ಬದಲಾದ ರಾಜಕೀಯದಲ್ಲಿ ಜೆಡಿಎಸ್ ಜೊತೆ ಸೇರಿ ಸರಕಾರವನ್ನು ರಚಿಸಿದೆವು

"ಬದಲಾದ ರಾಜಕೀಯದಲ್ಲಿ ಜೆಡಿಎಸ್ ಜೊತೆ ಸೇರಿ ಸರಕಾರವನ್ನು ರಚಿಸಿದೆವು. ಕುಮಾರಸ್ವಾಮಿ ಮುಖ್ಯಮಂತ್ರಿ, ನಾನು ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದೆವು. ಒಂದೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರಿಸಬೇಕಿತ್ತು. ಆಗ ಅಪ್ಪ ಮಗ ಸೇರಿ ಷರತ್ತುಗಳನ್ನು ಹಾಕಿದರು, ನಾನು ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿದೆ"ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ಹೇಳಿದರು.

English summary
BS Yediyurappa talks about HD Kumaraswamy and HD Devegowda in his last speech as CM at 2 years of Sadhana Samavesha Program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X