ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶಾಸಕರಿಂದಲ್ಲ, ಜನರಿಂದ ಬಿ. ವೈ. ವಿಜಯೇಂದ್ರ ಆಯ್ಕೆಯಾಗಬೇಕು'

|
Google Oneindia Kannada News

ಬೆಂಗಳೂರು, ಮೇ 26: ಬಿಜೆಪಿ ಕೋರ್ ಕಮಿಟಿ ಶಿಫಾರಸು ಮಾಡಿದ್ದರೂ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ದಕ್ಕಲಿಲ್ಲ. ಈ ವಿಚಾರ, ರಾಜ್ಯ ರಾಜಕೀಯದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದೆ.

ಬಿಜೆಪಿಯ ಹಲವು ಸಚಿವರು ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. "ವಿಜಯೇಂದ್ರ ಅವರಿಗೆ ಟಿಕೆಟ್ ನೀಡದೇ ಇರುವುದು ಬಿಜೆಪಿಗೆ ತಿರುಗುಬಾಣವಾಗುವ ಸಾಧ್ಯತೆಯಿದೆ"ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೂಡಾ ಅಭಿಪ್ರಾಯ ಪಟ್ಟಿದ್ದರು.

ಪರಿಶಿಷ್ಟ ಜನಾಂಗಕ್ಕೆ ಶೇ 7.5 ಮೀಸಲಾತಿಗೆ ಸರ್ಕಾರ ಬದ್ಧ: ಶ್ರೀರಾಮುಲು ಪರಿಶಿಷ್ಟ ಜನಾಂಗಕ್ಕೆ ಶೇ 7.5 ಮೀಸಲಾತಿಗೆ ಸರ್ಕಾರ ಬದ್ಧ: ಶ್ರೀರಾಮುಲು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಬಿ. ಶ್ರೀರಾಮುಲು, "ಯಡಿಯೂರಪ್ಪನವರು ಈ ರಾಜ್ಯಕ್ಕೆ ಮತ್ತು ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ. ಅವರ ಶಕ್ತಿಯನ್ನು ಕುಗ್ಗಿಸುವ ಕೆಲಸವನ್ನು ಯಾರೂ ಮಾಡುತ್ತಿಲ್ಲ"ಎಂದು ಹೇಳಿದ್ದಾರೆ.

ವಿಜಯೇಂದ್ರಗೆ ಇರುವ ಜನಪ್ರಿಯತೆಯೇ ಅವರಿಗೆ ಟಿಕೆಟ್ ಸಿಗದೇ ಇರಲು ಕಾರಣ ಎನ್ನುವ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಸಾಮಾನ್ಯವಾಗಿ ಜಾತಿ ಸಮೀಕರಣದ ಆಧಾರದ ಮೇಲೆ ಟಿಕೆಟ್ ನೀಡುವ ಬಿಜೆಪಿಯ ಹೈಕಮಾಂಡ್ ಈ ಬಾರಿ ಕೆಲವರ ಮಾತಿಗೆ ಮಣೆ ಹಾಕಿದ್ದರಿಂದ ವಿಜಯೇಂದ್ರಗೆ ಟಿಕೆಟ್ ಸಿಗಲಿಲ್ಲ ಎನ್ನುವ ಮಾತೂ ಕೇಳಿ ಬರುತ್ತಿದೆ.

ವಿಜಯೇಂದ್ರಗೆ ಟಿಕೆಟ್ ನಕಾರ; ಬಿಜೆಪಿಗೆ ತಿರುಗುಬಾಣ ಎಂದ ಕುಮಾರಸ್ವಾಮಿವಿಜಯೇಂದ್ರಗೆ ಟಿಕೆಟ್ ನಕಾರ; ಬಿಜೆಪಿಗೆ ತಿರುಗುಬಾಣ ಎಂದ ಕುಮಾರಸ್ವಾಮಿ

 ಪರಿಷತ್ ಟಿಕೆಟ್ ಸಿಗದ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು

ಪರಿಷತ್ ಟಿಕೆಟ್ ಸಿಗದ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು

ವಿಜಯೇಂದ್ರಗೆ ಪರಿಷತ್ ಟಿಕೆಟ್ ಸಿಗದ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, "ವಿಧಾನಸಭೆಗೆ ಚುನಾವಣೆ ಹತ್ತಿರ ಇರುವುದರಿಂದ ಅಲ್ಲಿ ಟಿಕೆಟ್ ನೀಡಬೇಕೆನ್ನುವ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಹೊಂದಿದೆ. ವಿಜಯೇಂದ್ರ ಅವರು ಅಸೆಂಬ್ಲಿಗೆ ಸ್ಪರ್ಧಿಸುವುದರಿಂದ ಎಲ್ಲಾ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿ ಪರಿಷತ್ ಚುನಾವಣೆಗೆ ಅವರ ಹೆಸರನ್ನು ಪರಿಗಣಿಸಿಲ್ಲ"ಎಂದು ಅಭಿಪ್ರಾಯ ಪಟ್ಟಿದ್ದಾರೆ.

 ಪಕ್ಷಕ್ಕಾಗಿ ದುಡಿಯುವವರನ್ನು ಗುರುತಿಸುವ ಕೆಲಸವನ್ನು ನಮ್ಮ ಪಕ್ಷ ಮಾಡಲಿದೆ

ಪಕ್ಷಕ್ಕಾಗಿ ದುಡಿಯುವವರನ್ನು ಗುರುತಿಸುವ ಕೆಲಸವನ್ನು ನಮ್ಮ ಪಕ್ಷ ಮಾಡಲಿದೆ

"ಸಾಮಾಜಿಕ ನ್ಯಾಯ ಕೊಡುವ ಕೆಲಸವನ್ನು ಹಿಂದಿನಿಂದಲೂ ನಮ್ಮ ಪಕ್ಷ ಮಾಡಿಕೊಂಡು ಬಂದಿದೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಯಡಿಯೂರಪ್ಪನವರು ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ, ಎಂತಹ ಸಮಯದಲ್ಲೂ ಅವರ ಶಕ್ತಿ ಕುಂದಿಸುವ ಕೆಲಸವನ್ನು ವರಿಷ್ಠರು ಮಾಡುವುದಿಲ್ಲ. ವಿಜಯೇಂದ್ರ ಸೇರಿದಂತೆ ಪಕ್ಷಕ್ಕಾಗಿ ದುಡಿಯುವವರನ್ನು ಗುರುತಿಸುವ ಕೆಲಸವನ್ನು ನಮ್ಮ ಪಕ್ಷ ಮಾಡಲಿದೆ"ಎಂದು ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.

 ಅವರು ಜನರಿಂದ ಆಯ್ಕೆಯಾಗಿ ಬರಬೇಕು

ಅವರು ಜನರಿಂದ ಆಯ್ಕೆಯಾಗಿ ಬರಬೇಕು

"ವಿಜಯೇಂದ್ರ ಅವರು ಬರೀ ವಿಧಾನ ಪರಿಷತ್ ಸದಸ್ಯರಾಗಲಿ ಎಂದು ನಾವ್ಯಾರು ಆಸೆ ಪಟ್ಟವರಲ್ಲ. ಅವರು ಜನರಿಂದ ಆಯ್ಕೆಯಾಗಿ ಬರಬೇಕೇ ವಿನಃ ಶಾಸಕರಿಂದ ಆಯ್ಕೆಯಾಗುವುದಲ್ಲ. ಯಡಿಯೂರಪ್ಪನವರು ಹೋರಾಟದ ಬದುಕನ್ನು ಕಂಡವರು, ಅವರ ಮಗನಾಗಿ ವಿಜಯೇಂದ್ರ ಜನರಿಂದಲೇ ಆಯ್ಕೆಯಾಗಿ ಬರಬೇಕು ಎನ್ನುವುದು ನಮ್ಮೆಲ್ಲರ ಅಭಿಪ್ರಾಯ. ವಿಶೇಷವಾಗಿ ಯಡಿಯೂರಪ್ಪನವರ ಮೇಲೆ ನಮಗೆಲ್ಲರಿಗೂ ಉನ್ನತವಾದ ಗೌರವವಿದೆ" ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

 ಯಡಿಯೂರಪ್ಪನವರ ಕುಟುಂಬವನ್ನು ಸೈಡ್ಲೈನ್ ಮಾಡುವ ಪ್ರಶ್ನೆಯೇ ಇಲ್ಲ

ಯಡಿಯೂರಪ್ಪನವರ ಕುಟುಂಬವನ್ನು ಸೈಡ್ಲೈನ್ ಮಾಡುವ ಪ್ರಶ್ನೆಯೇ ಇಲ್ಲ

"ಯಡಿಯೂರಪ್ಪನವರ ಕುಟುಂಬವನ್ನು ಸೈಡ್ಲೈನ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಿಜಯೇಂದ್ರ ಅವರು ಭವಿಷ್ಯದಲ್ಲಿ ದೊಡ್ಡ ನಾಯಕರಾಗುತ್ತಾರೆ, ಖಂಡಿತವಾಗಿ ಮುಂದಿನ ಚುನಾವಣೆಯಲ್ಲಿ ಜನರಿಂದಲೇ ಆಯ್ಕೆಯಾಗಿ ದೊಡ್ಡಶಕ್ತಿಯಾಗಿ ಅವರು ಹೊರಹೊಮ್ಮಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತೇವೆ"ಎಂದು ಶ್ರೀರಾಮುಲು ಆಶಿಸಿದ್ದಾರೆ.

Recommended Video

DK Shivakumar ಗೆ ಮತ್ತೊಮ್ಮೆ ED ಸಂಕಟ | #Politics | Oneindia Kannada

English summary
Yediyurappa's Son B. Y. Vijayendra should win general election said minister B. Sriramulu. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X