ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಪೂರ್ವಭಾವಿ ಸಭೆಗಳು ಮುಕ್ತಾಯ: ಸಿಎಂ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಫೆ. 19: ಬರುವ ಮಾರ್ಚ್ 8ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಬಜೆಟ್ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಗಳು ಮುಗಿದಿವೆ ಎಂದು ಅವರು ಹೇಳಿದ್ದಾರೆ.

ಗೃಹ ಇಲಾಖೆ ಸೇರಿದಂತೆ ಇನ್ನೆರಡು ಇಲಾಖೆಗಳು ಬಾಕಿ ಇವೆ. ಇನ್ನು ಅರ್ಧ ದಿನ ಸಭೆ ಮಾಡಿದರೆ ಬಜೆಟ್ ಪೂರ್ವ ತಯಾರಿ ಮುಗಿಯುತ್ತದೆ. ಇದಾದ ನಂತರ ಬಜೆಟ್ ತಯಾರಿ ಸಿದ್ದತೆಗಳು ಶುರುವಾಗುತ್ತವೆ. ಯಾವ ಕ್ಷೇತ್ರಕ್ಕೆ ಏನೇನು ಕೊಡಬಹುದು? ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಖರ್ಚಾಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಬಹಳ ಉಪಯುಕ್ತವಾದ ಸಭೆಗಳು ಆಗಿವೆ. ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

Yediyurappa said that budget preparatory meetings of all departments completed

Recommended Video

ಮಂಗಳನ ಅಂಗಳದಲ್ಲಿ ಪರ್ಸೀವರೆನ್ಸ್ ರೋವರ್ ಇಳಿಸಿದ ಕರ್ನಾಟಕ ಮೂಲದ ವಿಜ್ಞಾನಿ | Karnataka | Oneindia Kannada

ಬಜೆಟ್ ಸಿದ್ದತೆ ಕೂಡ ಒಂದು ರೂಪಕ್ಕೆ ಬರುತ್ತಿದೆ. ವಿವಿಧ ಸಮುದಾಯಗಳಿಂದ ಮೀಸಲಾತಿಗೆ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಟ್ಟಿರುವ ಯಡಿಯೂರಪ್ಪ ಅವರು, ಮೀಸಲಾತಿ ಕೊಡುವ ಕುರಿತು ಸಂಪುಟ ಸಭೆಯಲ್ಲಿ ನಿರ್ಧಾರ ತಿಳಿಸಿದ್ದೇನೆ. ಪ್ರತಿಯೊಬ್ಬ ಸಚಿವರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಕೊಡಲು ಮುಂದೆ ಯಾವ ರೀತಿ ತೀರ್ಮಾನ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.

English summary
CM Yediyurappa said that the budget preparatory meetings of all departments have been completed and the state budget will be presented on March 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X