ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ ರಾಜೀನಾಮೆ: ಸಾರ್ವಜನಿಕ ವಲಯದಲ್ಲಿ ವಿಲನ್ ಆದ ಬಿಜೆಪಿ ವರಿಷ್ಠರು

|
Google Oneindia Kannada News

ಜೀವನದ ಇಳಿಸಂಜೆ ಹೊತ್ತಿನಲ್ಲಿ ಮಹೋನ್ನತ ಪದವಿಯಿಂದ ಕೆಳಗಿಳಿದ ಯಡಿಯೂರಪ್ಪನವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಮಾತುಗಳೇನೂ ಕೇಳಿ ಬರುತ್ತಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ಇಂದು ಏನು ಇದೆಯೋ ಅದಕ್ಕೆ ಮೂಲ ಕಾರಣಕರ್ತರಾದ ಯಡಿಯೂರಪ್ಪನವರ ವಯಸ್ಸು, ಅನುಭವಕ್ಕೆ ಬಿಜೆಪಿ ವರಿಷ್ಠರು ಬೆಲೆ ಕೊಡಲಿಲ್ಲ ಎಂದೇ ಸಾರ್ವಜನಿಕ ವಲಯದಲ್ಲಿ ಬಿಂಬಿತವಾಗುತ್ತಿದೆ.

ಬಿಎಸ್ವೈ ರಾಜೀನಾಮೆ: ಬಿಜೆಪಿಗಿಂತ ಕಾಂಗ್ರೆಸ್ ಮುಖಂಡರಿಗೆ ಕಾಡಿದ ತೀವ್ರ ನೋವು!ಬಿಎಸ್ವೈ ರಾಜೀನಾಮೆ: ಬಿಜೆಪಿಗಿಂತ ಕಾಂಗ್ರೆಸ್ ಮುಖಂಡರಿಗೆ ಕಾಡಿದ ತೀವ್ರ ನೋವು!

ತ್ಯಜಿಸಿರುವುದು ಅಧಿಕಾರ ಮಾತ್ರ, ಜನಸೇವೆಗಾಗಿ ಬದುಕುವೆ ಎಂದು ಯಡಿಯೂರಪ್ಪ ಕಣ್ಣೀರು ಹಾಕುತ್ತಾ ರಾಜೀನಾಮೆ ಘೋಷಣೆ ಮಾಡಿದ್ದು ಅವರ ಸೈದ್ದಾಂತಿಕ ವಿರೋಧಿಗಳಿಗೂ ಬೇಸರ ತಂದಿತ್ತು.

 ವಿದಾಯ ಭಾಷಣದಲ್ಲೂ ಅಪ್ಪ, ಮಗನನ್ನು ಕುಟುಕಿದ ಯಡಿಯೂರಪ್ಪ ವಿದಾಯ ಭಾಷಣದಲ್ಲೂ ಅಪ್ಪ, ಮಗನನ್ನು ಕುಟುಕಿದ ಯಡಿಯೂರಪ್ಪ

ಯಡಿಯೂರಪ್ಪನವರನ್ನು ವರಿಷ್ಠರನ್ನು ಸರಿಯಾಗಿ ಗೌರವಿಸದೇ ಇರದೇ ಇರುವುದಕ್ಕೆ ಹಲವು ನಿದರ್ಶನಗಳು ಹಿಂದೆ ಕೂಡಾ ನಡೆದಿದೆ. ಆದರೂ, ಮತ್ತೆ ಸರಕಾರವನ್ನು ಅಧಿಕಾರಕ್ಕೆ ತರುವುದು ನನ್ನ ಉದ್ದೇಶ ಎಂದು ಬಿಎಸೈ ದೊಡ್ಡತನ ತೋರಿದರೆ, ಅವರಿಗೆ ಗೌರವ ನೀಡದವರು ಸಣ್ಣವರಾಗಿಬಿಟ್ಟಿದ್ದಾರೆ.

 ಕನಿಷ್ಠ ಆರೇಳು ತಿಂಗಳಾದರೂ ಯಡಿಯೂರಪ್ಪನವರನ್ನು ಮುಂದುವರಿಸಬೇಕಿತ್ತು

ಕನಿಷ್ಠ ಆರೇಳು ತಿಂಗಳಾದರೂ ಯಡಿಯೂರಪ್ಪನವರನ್ನು ಮುಂದುವರಿಸಬೇಕಿತ್ತು

ಕೊರೊನಾ, ಪ್ರವಾಹದಂತ ಸಂದರ್ಭದಲ್ಲಿ ಕನಿಷ್ಠ ಆರೇಳು ತಿಂಗಳಾದರೂ ಯಡಿಯೂರಪ್ಪನವರನ್ನು ಮುಂದುವರಿಸಬೇಕಿತ್ತು ಎನ್ನುವುದು ಒಟ್ಟಾರೆಯಾಗಿ ಕೇಳಿ ಬರುತ್ತಿದ್ದ ಮಾತು. ತಮ್ಮ ವಿದಾಯ ಭಾಷಣದಲ್ಲಿ ಮೊದಲು ಎರಡು ತಿಂಗಳು ಸಂಪುಟ ರಚನೆಗೆ ವರಿಷ್ಠರು ಅವಕಾಶ ನೀಡಿರಲಿಲ್ಲ ಎಂದು ಯಡಿಯೂರಪ್ಪ ಅಸಮಾಧಾನ ಹೊರಹಾಕಿದ್ದರು.

 ಹಿಂದಿ ಹೇರಿಕೆ, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿರುವ ಹಣ,ಲಸಿಕೆ ವಿತರಣೆ

ಹಿಂದಿ ಹೇರಿಕೆ, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿರುವ ಹಣ,ಲಸಿಕೆ ವಿತರಣೆ

ಹಿಂದಿ ಹೇರಿಕೆ, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿರುವ ಹಣ,ಲಸಿಕೆ ವಿತರಣೆ ಮುಂತಾದ ವಿಚಾರಗಳಲ್ಲಿ ನಿರಂತರವಾಗಿ ನಿರ್ಲ್ಯಕ್ಷಕ್ಕೆ ಒಳಗಾಗುತ್ತಿರುವ ವಿಚಾರದಲ್ಲೂ ಬಿಜೆಪಿ ಕೇಂದ್ರದ ನಾಯಕರು ಹಲವು ಬಾರಿ ಟೀಕೆಗೆ ಒಳಗಾಗಿದ್ದರು. ತಮ್ಮಾಪ್ತರ ಬಳಿಯೂ ಕೇಂದ್ರದ ತಾರತಮ್ಯದ ಬಗ್ಗೆ ಯಡಿಯೂರಪ್ಪ ಬೇಸರ ವ್ಯಕ್ತ ಪಡಿಸಿದ್ದೂ ಗೊತ್ತಿರುವ ವಿಚಾರ.

 ರಾಜಭವನಕ್ಕೆ ಹೋದಾಗ, ಸರಿಯದ ಮರ್ಯಾದೆಯೂ ಅವರಿಗೆ ಸಿಗಲಿಲ್ಲ?

ರಾಜಭವನಕ್ಕೆ ಹೋದಾಗ, ಸರಿಯದ ಮರ್ಯಾದೆಯೂ ಅವರಿಗೆ ಸಿಗಲಿಲ್ಲ?

ಕಳೆದ ಎರಡು ವರ್ಷದ ಆಡಳಿತದಲ್ಲಿ ಪ್ರತೀದಿನ ನನಗೆ ಅಗ್ನಿಪರೀಕ್ಷೆಯಾಗಿತ್ತು ಎಂದು ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಹೇಳಿದ್ದರು. ರಾಜೀನಾಮೆ ನೀಡಲು ರಾಜಭವನಕ್ಕೆ ಹೋದಾಗ, ಸರಿಯದ ಮರ್ಯಾದೆಯೂ ಅವರಿಗೆ ಸಿಗಲಿಲ್ಲ ಎಂದು ಹೇಳಲಾಗುತ್ತಿದೆ. ರಾಜೀನಾಮೆ ನೀಡಿದ ಕ್ಷಣಾರ್ಧದಲ್ಲಿ ಅದನ್ನು ರಾಜ್ಯಪಾಲರು ಆಂಗೀಕರಿಸಿದ್ದು, ಬಿಎಸ್ವೈ ರಾಜೀನಾಮೆಗೆ ಎಷ್ಟು ಒತ್ತಡವಿತ್ತು ಎನ್ನುವುದು ತಿಳಿಯುತ್ತದೆ.

Recommended Video

BSY ನೋವಿನಿಂದ ಕಣ್ಣೀರು ಹಾಕಿದ್ದಕ್ಕೆ ಬಿಜೆಪಿಗಿಂತ ಹೆಚ್ಚು ಮರುಗಿದ ಕಾಂಗ್ರೆಸ್ | Oneindia Kannada
 ಬಿಎಸ್ವೈ ರಾಜೀನಾಮೆ: ಸಾರ್ವಜನಿಕ ವಲಯದಲ್ಲಿ ವಿಲನ್ ಆದ ಬಿಜೆಪಿ ವರಿಷ್ಠರು

ಬಿಎಸ್ವೈ ರಾಜೀನಾಮೆ: ಸಾರ್ವಜನಿಕ ವಲಯದಲ್ಲಿ ವಿಲನ್ ಆದ ಬಿಜೆಪಿ ವರಿಷ್ಠರು

ಬಿಜೆಪಿಯ ವಯಸ್ಸಿನ ಸಿದ್ದಾಂತಕ್ಕೆ ವಿರುದ್ದವಾಗಿ ಯಡಿಯೂರಪ್ಪ ಸಿಎಂ ಹುದ್ದೆಯಲ್ಲಿದ್ದರೂ ಕೂಡಾ, ಇಂತಹ ಜನನಾಯಕನನ್ನು ಮೋದಿ, ಅಮಿತ್ ಶಾ, ನಡ್ಡಾ ನಡೆಸಿಕೊಂಡ ರೀತಿಯ ಬಗ್ಗೆ ಜನರಲ್ಲಿ ಅಸಮಾಧಾನವಿರುವುದು ಸಾಮಾಜಿಕ ತಾಣಗಳಲ್ಲಿ ತೋರಿಬರುತ್ತಿದೆ. ಒಟ್ಟಿನಲ್ಲಿ, ಬಿಎಸ್ವೈ ಬಗ್ಗೆ ಏನೇ ಅಪಸ್ವರ ಇದ್ದರೂ, ಅವರು ನಿರ್ಗಮಿಸಿದ ರೀತಿಗೆ ಜನರಲ್ಲಿ ಬೇಸರ ಇರುವುದಂತೂ ಹೌದು.

English summary
CM Yediyurappa Resigned; People Seeing BJP High Command leaders of Narendra Modi, Amit Shah and JP Nadda as Villain for not giving proper respect to BS yediyurappa. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X