ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ ಪುತ್ರ ವಿಜಯೇಂದ್ರಗೆ ಮಹತ್ವದ ಈ ಸ್ಥಾನ ಬಹುತೇಕ ಖಚಿತ

|
Google Oneindia Kannada News

ರಾಜ್ಯ ಬಿಜೆಪಿಯಲ್ಲಿ ಹೆಚ್ಚಿನವರಿಗೆ ಹಂಗಾಮಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಸಿಟ್ಟು ಇರಲಿರಲಿಲ್ಲ. ಅವರ ಅಸಮಾಧಾನ ಇರುವುದು ಎಲ್ಲದಕ್ಕೂ ಮೂಗು ತೂರಿಸುತ್ತಿದ್ದರು ಎಂದು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಮೇಲೆ.

ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ಬಿಎಸ್ವೈ ಮತ್ತವರ ಪುತ್ರರ ವಿರುದ್ದ ಕಿಡಿಕಾರದ ದಿನಗಳೇ ಇಲ್ಲ. ಒಂದು ಹಂತಕ್ಕೆ ಈಶ್ವರಪ್ಪನವರು ಕೂಡಾ ರಾಜ್ಯಪಾಲರಿಗೆ ದೂರು ನೀಡಿದ್ದು ವಿಜಯೇಂದ್ರ ಅವರ ಹಸ್ತಕ್ಷೇಪಕ್ಕಾಗಿಯೇ.

ಬಿಎಸ್ವೈ ರಾಜೀನಾಮೆ: ಸಾರ್ವಜನಿಕ ವಲಯದಲ್ಲಿ ವಿಲನ್ ಆದ ಬಿಜೆಪಿ ವರಿಷ್ಠರುಬಿಎಸ್ವೈ ರಾಜೀನಾಮೆ: ಸಾರ್ವಜನಿಕ ವಲಯದಲ್ಲಿ ವಿಲನ್ ಆದ ಬಿಜೆಪಿ ವರಿಷ್ಠರು

ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಲಿಂಗಾಯತ/ವೀರಶೈವ ಸಮುದಾಯವು ಬಿಜೆಪಿ ವರಿಷ್ಠರ ವಿರುದ್ದ ಕಿಡಿಕಾರುತ್ತಿದೆ. ಹಾಗಾಗಿ, ಅವರನ್ನು ಸಮಾಧಾನ ಪಡಿಸಲು ಮತ್ತು ಸಮುದಾಯದ ಬೆಂಬಲ ಕೈತಪ್ಪಿ ಹೋಗದಂತೇ ನೋಡಿಕೊಳ್ಳುವುದು ಬಿಜೆಪಿಗೆ ಸವಾಲಿನ ಸಂಗಾತಿಯಾಗಿದೆ.

 ಬಿ.ಎಲ್.ಸಂತೋಷ್ - ಎಚ್.ಡಿ.ರೇವಣ್ಣ 3 ತಾಸು ಕ್ಲೋಸ್ ಡೋರ್ ಮೀಟಿಂಗ್? ಬಿ.ಎಲ್.ಸಂತೋಷ್ - ಎಚ್.ಡಿ.ರೇವಣ್ಣ 3 ತಾಸು ಕ್ಲೋಸ್ ಡೋರ್ ಮೀಟಿಂಗ್?

ಹಾಗಾಗಿ, ಮುಖ್ಯಮಂತ್ರಿ ಯಾವ ಸಮುದಾಯದವರು ಆಗಲಿದ್ದಾರೆ ಎನ್ನುವುದು ಖಚಿತವಾದ ನಂತರ, ವಿಜಯೇಂದ್ರ ಅವರ ಸ್ಥಾನಮಾನ ಏನೆಂದು ಗೊತ್ತಾಗಲಿದೆ. ಯಾರೇ ಆದರೂ, ಎರಡರಲ್ಲಿ ಒಂದು ಮಹತ್ವದ ಹುದ್ದೆ ವಿಜಯೇಂದ್ರಗೆ ಖಚಿತ ಎಂದು ಹೇಳಲಾಗುತ್ತಿದೆ.

 ಮಾಜಿ ಆಗಿರುವ ಸಚಿವರುಗಳಲ್ಲಿ ಕೆಲವರಿಗಂತೂ ಅಧಿಕಾರ ತಪ್ಪುವುದು ನಿಶ್ಚಿತ

ಮಾಜಿ ಆಗಿರುವ ಸಚಿವರುಗಳಲ್ಲಿ ಕೆಲವರಿಗಂತೂ ಅಧಿಕಾರ ತಪ್ಪುವುದು ನಿಶ್ಚಿತ

ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರ ಮಧ್ಯ ವಯಸ್ಸಿನ ಮುಖಂಡರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಹಾಗಾಗಿ, ಯಡಿಯೂರಪ್ಪ ರಾಜೀನಾಮೆಯ ನಂತರ ಮಾಜಿ ಆಗಿರುವ ಸಚಿವರುಗಳಲ್ಲಿ ಕೆಲವರಿಗಂತೂ ಅಧಿಕಾರ ತಪ್ಪುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

 ಹೆಚ್ಚಿನ ಜವಾಬ್ದಾರಿಯನ್ನು ನೀಡಲು ಬಿಜೆಪಿ ಹೈಕಮಾಂಡ್ ನಿರ್ಧಾರ

ಹೆಚ್ಚಿನ ಜವಾಬ್ದಾರಿಯನ್ನು ನೀಡಲು ಬಿಜೆಪಿ ಹೈಕಮಾಂಡ್ ನಿರ್ಧಾರ

ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವುದು ಅಂತಿಮವಾದ ನಂತರ ವಿಜಯೇಂದ್ರ ಅವರ ಸ್ಥಾನಮಾನವೂ ಅಂತಿಮವಾಗಲಿದೆ. ರಾಜ್ಯ ಉಪಾಧ್ಯಕ್ಷರೂ ಆಗಿರುವ ವಿಜಯೇಂದ್ರ ಅವರು ಉತ್ತಮ ಸಂಘಟನಾಕಾರರೂ ಆಗಿರುವುದರಿಂದ, ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.

 ವಿಜಯೇಂದ್ರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವುದು ಖಚಿತ

ವಿಜಯೇಂದ್ರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವುದು ಖಚಿತ

ಒಂದು ವೇಳೆ ಲಿಂಗಾಯತ ಸಮುದಾಯದ ನಾಯಕ ಮುಖ್ಯಮಂತ್ರಿ ಆಗದೇ ಇದ್ದಲ್ಲಿ, ವಿಜಯೇಂದ್ರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ. ಸಂಭಾವ್ಯ ಉಪ ಮುಖ್ಯಮಂತ್ರಿಗಳಲ್ಲಿ ವಿಜಯೇಂದ್ರ ಹೆಸರೂ ಮಂಚೂಣಿಯಲ್ಲಿ ಕೇಳಿ ಬರುತ್ತಿದೆ. ಆದರೆ..

 ಹೊಸ ಮಂತ್ರಿ ಮಂಡಲದಲ್ಲಿ ವಿಜಯೇಂದ್ರಗೆ ಆಯಕಟ್ಟಿನ ಸಚಿವ ಸ್ಥಾನ

ಹೊಸ ಮಂತ್ರಿ ಮಂಡಲದಲ್ಲಿ ವಿಜಯೇಂದ್ರಗೆ ಆಯಕಟ್ಟಿನ ಸಚಿವ ಸ್ಥಾನ

ಇನ್ನೊಂದು ಸೂತ್ರದ ಪ್ರಕಾರ, ಲಿಂಗಾಯತ ಸಮುದಾಯದವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದ್ದೇ ಆದಲ್ಲಿ, ಹೊಸ ಮಂತ್ರಿ ಮಂಡಲದಲ್ಲಿ ವಿಜಯೇಂದ್ರಗೆ ಆಯಕಟ್ಟಿನ ಸಚಿವ ಸ್ಥಾನ ಸಿಗುವುದು ಬಹುತೇಕ ಅಂತಿಮವಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ, ನೂತನ ಸರಕಾರದಲ್ಲಿ ವಿಜಯೇಂದ್ರ ಮಹತ್ವದ ಪಾತ್ರ ವಹಿಸುವುದು ದಟ್ಟವಾಗಿದೆ.

English summary
BS Yediyurappa Resigned to Karnataka CM Post; Yediyurappa son and by election specialist BY Vijayendra to get DCM Post. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X