ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ ರಾಜೀನಾಮೆ: ಬಿಜೆಪಿಗಿಂತ ಕಾಂಗ್ರೆಸ್ ಮುಖಂಡರಿಗೆ ಕಾಡಿದ ತೀವ್ರ ನೋವು!

|
Google Oneindia Kannada News

ರಾಜ್ಯದ ಮಾಸ್ ನಾಯಕರಲ್ಲಿ ಒಬ್ಬರಾದ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲಿಗೆ, ಒಂದು ವಾರದ ಊಹಾಪೋಹಕ್ಕೆ ತೆರೆಬಿದ್ದಿದೆ. ಮುಂದಿನ ಸಿಎಂ ರೇಸಿಗೆ ಅನಧಿಕೃತ ಹೆಸರುಗಳ ಪ್ರವಾಹವೇ ಹರಿದು ಬರುತ್ತಿದೆ.

Recommended Video

BSY ನೋವಿನಿಂದ ಕಣ್ಣೀರು ಹಾಕಿದ್ದಕ್ಕೆ ಬಿಜೆಪಿಗಿಂತ ಹೆಚ್ಚು ಮರುಗಿದ ಕಾಂಗ್ರೆಸ್ | Oneindia Kannada

ವಿದಾಯ ಭಾಷಣದಲ್ಲಿ ರಾಜ್ಯಪಾಲರ ಬಳೀ ಹೋಗಿ ರಾಜೀನಾಮೆ ಸಲ್ಲಿಸಲಿದ್ದೇನೆ ಎಂದು ಯಡಿಯೂರಪ್ಪ ಕಣ್ಣೀರಿಟ್ಟಿದ್ದು, ಹಲವರ ಮನ ಕಲಕಿದಂತೂ ನಿಜ. ಇದರಲ್ಲಿ ಕಾಂಗ್ರೆಸ್ಸಿನವರೂ, ವಿವಿಧ ಪಕ್ಷದ ಕಾರ್ಯಕರ್ತರೂ ಇದ್ದಾರೆ.

ಯಡಿಯೂರಪ್ಪ ರಾಜೀನಾಮೆ ಹಿಂದಿನ ಕಾರಣ ಹೇಳಿದ ಡಿ.ಕೆ. ಶಿವಕುಮಾರ್!ಯಡಿಯೂರಪ್ಪ ರಾಜೀನಾಮೆ ಹಿಂದಿನ ಕಾರಣ ಹೇಳಿದ ಡಿ.ಕೆ. ಶಿವಕುಮಾರ್!

ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ಸಿನ ಮುಖಂಡರು ನೀಡುತ್ತಿರುವ ಹೇಳಿಕೆ/ಟ್ವೀಟ್ ಗಳನ್ನು ನೋಡಿದರೆ, ಬಿಜೆಪಿಗಿಂತಲೂ ಅವರಿಗೇ ಹೆಚ್ಚಿನ ನೋವು ಆದಂತೆ ಕಾಣಿಸುತ್ತದೆ. ಇರಬಹುದು, ಯಾಕೆಂದರೆ ರಾಜಕೀಯವೇ ಬೇರೆ, ವೈಯಕ್ತಿಕ ಸಂಬಂಧಗಳೇ ಬೇರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೂಡಾ ಯಡಿಯೂರಪ್ಪನವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಬೇಸರದ ಟ್ವೀಟ್ ಅನ್ನು ಮಾಡಿದ್ದಾರೆ. ಹಲವು ಪೀಠಾಧಿಪತಿಗಳಂತೂ ಬಿಜೆಪಿ ಹೈಕಮಾಂಡ್ ವಿರುದ್ದ ಬೆಂಕಿಯುಂಡೆ ಉಗುಳುತ್ತಿದ್ದಾರೆ. ಕಾಂಗ್ರೆಸ್ಸಿನ ಕೆಲವು ಮುಖಂಡರ ರಿಯಾಕ್ಷನ್ ಹೀಗಿದೆ:

ಬೆಂಗಳೂರಿಗೆ BL ಸಂತೋಷ್: ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಬೆಂಗಳೂರಿಗೆ BL ಸಂತೋಷ್: ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

 ಈ ಪಟ್ಟಿಗೆ ಹೊಸ ಹೆಸರು ಯಡಿಯೂರಪ್ಪ ಎಂದು ರಣದೀಪ್ ಸುರ್ಜೇವಾಲಾ ಟ್ವೀಟ್

ಈ ಪಟ್ಟಿಗೆ ಹೊಸ ಹೆಸರು ಯಡಿಯೂರಪ್ಪ ಎಂದು ರಣದೀಪ್ ಸುರ್ಜೇವಾಲಾ ಟ್ವೀಟ್

ಪ್ರಧಾನಿ ಮೋದಿಯವರ ತಮ್ಮದೇ ಪಕ್ಷದ ನಾಯಕರನ್ನು ಅವಮಾನಿಸುವ ಪರ್ವ ಮುಂದುವರಿದಿದೆ. ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಸುಮಿತ್ರಾ ಮಹಾಜನ್, ಸುಷ್ಮಾ ಸ್ವರಾಜ್, ಉಮಾಭಾರತಿ ಹೀಗೆ ಪಟ್ಟಿ ಬೆಳೆಯತ್ತಲೇ ಇದೆ. ಈ ಪಟ್ಟಿಗೆ ಹೊಸ ಹೆಸರು ಯಡಿಯೂರಪ್ಪ ಎಂದು ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಅವಮಾನ ಮಾಡಿ ಕಣ್ಣೀರಿಡಿಸಿ ರಾಜೀನಾಮೆ ಕೊಡಿಸಿದ ಮೋದಿ, ಶಾ

ಶ್ರೀ ಎಲ್.ಕೆ. ಅಡ್ವಾಣಿ, ಶ್ರೀ ಮುರಳಿ ಮನೋಹರ ಜೋಶಿಯವರನ್ನು ಮೂಲೆ ಗುಂಪು ಮಾಡಿದಂತೆಯೇ ಈಗ @BSYBJP ರವರಿಗೂ ಅವಮಾನ ಮಾಡಿ ಕಣ್ಣೀರಿಡಿಸಿ ರಾಜೀನಾಮೆ ಕೊಡಿಸಿದ @narendramodi - @AmitShah ಜೋಡಿ ಹಿರಿಯರಿಗೆ ಅಗೌರವ ತೋರುವ ಪ್ರವೃತ್ತಿ ಮುಂದುವರಿಸಿದ್ದಾರೆ. ಸ್ವಾಭಿಮಾನಿ ಕನ್ನಡಿಗರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ - ಈಶ್ವರ್ ಖಂಡ್ರೆ ಟ್ವೀಟ್.

ಡಾ.ಜಿ.ಪರಮೇಶ್ವರ್ ಮಾಡಿರುವ ಬೇಸರದ ಟ್ವೀಟ್

ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಅಂದಂತೆ ಬಿಜೆಪಿಯು ರಾಜ್ಯದಲ್ಲಿ ಆಡಳಿತ ದೊರಕಿಸಿದ, ಪಕ್ಷವನ್ನು ಕಟ್ಟಿದ ಯಡಿಯೂರಪ್ಪನವರನ್ನೇ ಕನಿಷ್ಠ ಗೌರವವನ್ನೂ ಕೊಡದೆ ರಾಜೀನಾಮೆ ನೀಡಿಸಿ ಹೊರಗೆ ತಳ್ಳುವ ಕೆಲಸ ಮಾಡುತ್ತಿದೆ. ಪಕ್ಷದಿಂದ ಪಕ್ಷಕ್ಕೆ ಹಾರಿ ಅಧಿಕಾರ ದಾಹದಿಂದ ಬಿಜೆಪಿ ಸೇರಿರುವ ಎಲ್ಲರಿಗೂ ಇದು ಒಂದು ಪಾಠವಾಗಲಿ - ಡಾ.ಜಿ.ಪರಮೇಶ್ವರ್ ಟ್ವೀಟ್.

 ಯಡಿಯೂರಪ್ಪನವರ ಬಗ್ಗೆ ನನಗೆ ಅನುಕಂಪವಿದೆ

ಯಡಿಯೂರಪ್ಪನವರ ಬಗ್ಗೆ ನನಗೆ ಅನುಕಂಪವಿದೆ

@BSYBJP ಅವರ ಬಗ್ಗೆ ನನಗೆ ಅನುಕಂಪವಿದೆ. ಅವರಿಗೆ ವಯಸ್ಸಾಯಿತೆಂದು ಅವರ ಪಕ್ಷದ ದೆಹಲಿ ನಾಯಕರೇ ಹೇಳುತ್ತಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ, ಅವರಿಗೆ ನೆಮ್ಮದಿ ಸಿಗಲಿ ಎಂದಷ್ಟೇ ನಾನು ಆಶಿಸುತ್ತೇನೆ - ಸಿದ್ದರಾಮಯ್ಯ ಟ್ವೀಟ್.

 ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀ

ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀ

'ಇಂದು ರಾಜೀನಾಮೆ ವಿಚಾರ. ಪ್ರಸ್ತಾಪಿಸಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಕಣ್ಣೀರಿಟ್ಟಿದ್ದು, ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು. ಇದರ ಹಿಂದಿನ ನೋವೇನು? ಆ ನೋವು ಕೊಟ್ಟವರಾರು? - ಡಿ.ಕೆ.ಶಿವಕುಮಾರ್ ಪ್ರಶ್ನೆ.

English summary
Yediyurappa Resignation From CM Post, Is Congress Leaders More Upset Than BJP Leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X