ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನರ್ಹ ಶಾಸಕರಿಗೆ ಮಾತು ಕೊಟ್ಟ ಸಿಎಂ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ಉಪಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಅನರ್ಹ ಶಾಸಕರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಅನರ್ಹ ಶಾಸಕರೆಲ್ಲರೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಒಂದು ವೇಳೆ ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರಿಗೆ ಹಿನ್ನಡೆ ಆದರೂ ಸಹ ಅವರ ಕುಟುಂಬಕ್ಕೆ ಟಿಕೆಟ್ ನೀಡುವುದಾಗಿ ಸಿಎಂ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.

ಹೊಸಕೋಟೆ ಕ್ಷೇತ್ರ ಟಿಕೆಟ್ ಬಿಕ್ಕಟ್ಟು: ಬಿಜೆಪಿಯಲ್ಲಿ ಕೆಂಪು ಬಾವುಟಹೊಸಕೋಟೆ ಕ್ಷೇತ್ರ ಟಿಕೆಟ್ ಬಿಕ್ಕಟ್ಟು: ಬಿಜೆಪಿಯಲ್ಲಿ ಕೆಂಪು ಬಾವುಟ

ಅನರ್ಹ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಎಷ್ಟೇ ಬೆದರಿಕೆ ಹಾಕಿದರೂ, ಎಷ್ಟೆ ಬ್ಲಾಕ್‌ಮೇಲ್ ತಂತ್ರ ಅನುಸರಿಸಿದರೂ ಸಹ ಕೊಟ್ಟ ಮಾತನ್ನು ತಪ್ಪುವುದಿಲ್ಲವೆಂದು ಯಡಿಯೂರಪ್ಪ ಅವರು ಅನರ್ಹ ಶಾಸಕರ ಎಂಟಿಬಿ ನಾಗರಾಜು ಅವರಿಗೆ ಇಂದು ಬೆಳಿಗ್ಗೆ ಹೇಳಿರುವ ಬಗ್ಗೆ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರ ಭೇಟಿಯಾದ ಎಂಟಿಬಿ

ಯಡಿಯೂರಪ್ಪ ಅವರ ಭೇಟಿಯಾದ ಎಂಟಿಬಿ

ಇಂದು ಬೆಳಿಗ್ಗೆ ಎಂಟಿಬಿ ನಾಗರಾಜು ಅವರು ಸಿಎಂ ಅವರ ನಿವಾಸಕ್ಕೆ ತೆರಳಿದ್ದರು. ಅದೇ ಸಮಯದಲ್ಲಿ ಸಿಎಂ ನಿವಾಸದ ಹೊರಗೆ ಶರತ್ ಬಚ್ಚೇಗೌಡ ಬೆಂಬಲಿಗರು ಯಡಿಯೂರಪ್ಪ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಬಿಜೆಪಿ ಟಿಕೆಟ್ ಅನ್ನು ಶರತ್ ಬಚ್ಚೇಗೌಡ ಅವರಿಗೇ ನೀಡಬೇಕು ಎಂದು ಅವರು ಒತ್ತಾಯಿಸುತ್ತಿದ್ದರು.

ಬ್ಲಾಕ್‌ಮೇಲ್‌ಗೆ ಬಗ್ಗಲ್ಲ, ಹೆದರಬೇಡಿ: ಅನರ್ಹರಿಗೆ ಬಿಎಸ್‌ವೈ ಭರವಸೆ

ಬ್ಲಾಕ್‌ಮೇಲ್‌ಗೆ ಬಗ್ಗಲ್ಲ, ಹೆದರಬೇಡಿ: ಅನರ್ಹರಿಗೆ ಬಿಎಸ್‌ವೈ ಭರವಸೆ

ಆದರೆ ಇದರಿಂದ ವಿಚಲಿತರಾಗದ ಯಡಿಯೂರಪ್ಪ ಅವರು, ಯಾರು ಎಷ್ಟೆ ಬ್ಲಾಕ್‌ಮೇಲ್ ತಂತ್ರ ಅನುಸರಿಸಿದರೂ ಸಹ ಅನರ್ಹ ಶಾಸಕರಿಗೆ ಮೋಸ ಮಾಡುವುದಿಲ್ಲ. ಕೊಟ್ಟ ಮಾತಿನಂತೆ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವುದು ಪಕ್ಕಾ ಎಂದು ಹೇಳಿದ್ದಾರೆ.

ಯಡಿಯೂರಪ್ಪ ನಿವಾಸದ ಮುಂದೆ ಹೊಸಕೋಟೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಡಿಯೂರಪ್ಪ ನಿವಾಸದ ಮುಂದೆ ಹೊಸಕೋಟೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ

ಅನರ್ಹ ಶಾಸಕರಿಗೆ ಮಾತು ಕೊಟ್ಟಿರುವ ಯಡಿಯೂರಪ್ಪ

ಅನರ್ಹ ಶಾಸಕರಿಗೆ ಮಾತು ಕೊಟ್ಟಿರುವ ಯಡಿಯೂರಪ್ಪ

ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಅನರ್ಹ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಅಂದೇ ಯಡಿಯೂರಪ್ಪ ಅವರು ಅನರ್ಹರಿಗೆ ಮಾತು ನೀಡಿದ್ದು, ಬಿಜೆಪಿಯ ಎಷ್ಟೆ ಪ್ರಬಲ ಆಕಾಂಕ್ಷಿ ಇದ್ದರೂ ಸಹ ಎಲ್ಲ ಕ್ಷೇತ್ರಗಳಿಗೂ ಅನರ್ಹರಿಗೆ ಟಿಕೆಟ್ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಯಡಿಯೂರಪ್ಪ ವಿರುದ್ಧ ಅಸಮಾಧಾನ

ಯಡಿಯೂರಪ್ಪ ವಿರುದ್ಧ ಅಸಮಾಧಾನ

ಅನರ್ಹ ಶಾಸಕರಿಗೆ ಯಡಿಯೂರಪ್ಪ ಅವರು ಮಣೆ ಹಾಕುತ್ತಿರುವುದು ಬಿಜೆಪಿಯಲ್ಲಿ ಅನೇಕರಿಗೆ ಅಸಮಾಧಾನ ಹೆಚ್ಚಿಸಿದೆ. ಶರತ್ ಬಚ್ಚೇಗೌಡ, ರಾಜು ಕಾಗೆ, ಅಶೋಕ್ ಪೂಜಾರಿ ಇನ್ನೂ ಕೆಲವರು ನಾಯಕರು ಅನರ್ಹ ಶಾಸಕರಿಗೆ ಕೊಡಲಾಗುತ್ತಿರುವ ಗೌರವದ ವಿರುದ್ಧ ತಿರುಗಿಬಿದ್ದಿದ್ದಾರೆ.

ಮತ್ತೆ ಚುನಾವಣಾ ಅಖಾಡಕ್ಕೆ ನಿಖಿಲ್ ಕುಮಾರಸ್ವಾಮಿ? ಕ್ಷೇತ್ರ ಯಾವುದು?ಮತ್ತೆ ಚುನಾವಣಾ ಅಖಾಡಕ್ಕೆ ನಿಖಿಲ್ ಕುಮಾರಸ್ವಾಮಿ? ಕ್ಷೇತ್ರ ಯಾವುದು?

English summary
CM Yediyurappa promises by election bjp ticket to disqualified MLAs. Yediyurappa said, he won't bend to any blackmails of BJP ticket aspirants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X