ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ ಗೆಲ್ಲಲು ಯಡಿಯೂರಪ್ಪ ಭರ್ಜರಿ ಪ್ಲಾನ್

|
Google Oneindia Kannada News

Recommended Video

CM Yediyurappa planing to appoint ministers as election in charge

ಬೆಂಗಳೂರು, ಅಕ್ಟೋಬರ್ 17: ರಾಜ್ಯ ಉಪಚುನಾವಣೆಯನ್ನು ಯಡಿಯೂರಪ್ಪ ಬಹು ಗಂಭೀರವಾಗಿ ಪರಿಗಣಿಸಿದ್ದಾರೆ.

ಉಪಚುನಾವಣೆ ಫಲಿತಾಂಶದ ಮೇಲೆ ಬಿಜೆಪಿ ಸರ್ಕಾರದ ಭವಿಷ್ಯ ನಿಂತಿದೆ ಎಂಬುದು ಯಡಿಯೂರಪ್ಪ ಅವರಿಗೆ ಚೆನ್ನಾಗಿ ಅರಿವಿದೆ ಹಾಗಾಗಿ ಉಪಚುನಾವಣೆ ಬಗ್ಗೆ ವಿಶೇಷ ಕಾಳಜಿಯನ್ನು ಯಡಿಯೂರಪ್ಪ ವಹಿಸಿದ್ದಾರೆ.

ಉಪಚುನಾವಣೆ, ಫಲ ನೀಡದ ಸಂಧಾನ: ಬಿಎಸ್ವೈಗೆ ಸುಡುತ್ತಿರುವ 6 ಕ್ಷೇತ್ರಗಳುಉಪಚುನಾವಣೆ, ಫಲ ನೀಡದ ಸಂಧಾನ: ಬಿಎಸ್ವೈಗೆ ಸುಡುತ್ತಿರುವ 6 ಕ್ಷೇತ್ರಗಳು

ಉಪಚುನಾವಣೆ ಗೆಲ್ಲಲೇ ಬೇಕೆಂದು ಹಠತೊಟ್ಟಿರುವ ಯಡಿಯೂರಪ್ಪ, ಉಪಚುನಾವಣೆ ಘೋಷಣೆ ಆಗಿರುವ 15 ಕ್ಷೇತ್ರಗಳಿಗೆ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಿಸುವ ನಿರ್ಧಾರ ಮಾಡಿದ್ದಾರೆ.

Yediyurappa Planing To Appoint Ministers As In Charge In By Elections

ಎಲ್ಲ ಕ್ಷೇತ್ರಗಳಿಗೂ ಸರ್ಕಾರದ ಸಚಿವರನ್ನೇ ಉಸ್ತುವಾರಿಯನ್ನಾಗಿ ನೇಮಿಸುವ ಮೂಲಕ ಚುನಾವಣೆ ಗೆಲುವನ್ನು ಖಾತ್ರಿಗೊಳಿಸುವ ಯತ್ನ ಮಾಡಿದ್ದಾರೆ ಯಡಿಯೂರಪ್ಪ. ಆದರೆ ಇದು ಎಷ್ಟರ ಪಟ್ಟಿಗೆ ಫಲ ನೀಡುತ್ತದೆ ಎಂಬುದು ಕಾದು ನೋಡಬೇಕಿದೆ.

ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಯಡಿಯೂರಪ್ಪ, 'ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ಸಚಿವರನ್ನೇ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗುವುದು, ಕ್ಷೇತ್ರಗಳಲ್ಲಿ ಕಾರ್ಯಕರ್ತರು ಈಗಾಗಲೇ ಕೆಲಸ ಆರಂಭಿಸಿದ್ದಾರೆ' ಎಂದು ಹೇಳಿದರು.

ಉಪ ಚುನಾವಣೆ; ಸಿದ್ದರಾಮಯ್ಯ ತಂತ್ರದಿಂದ ಬಿಜೆಪಿಗೆ ಸಂಕಷ್ಟ!ಉಪ ಚುನಾವಣೆ; ಸಿದ್ದರಾಮಯ್ಯ ತಂತ್ರದಿಂದ ಬಿಜೆಪಿಗೆ ಸಂಕಷ್ಟ!

'ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಕ್ಕೆ ಜಯವಾಗುವ ನಿರೀಕ್ಷೆ ಇದೆ. ಸುಪ್ರೀಂ ತೀರ್ಪಿನ ನಂತರ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ಮುಖಂಡರು ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ' ಎಂದು ಹೇಳಿದರು.

English summary
CM Yediyurappa planing to appoint ministers as election in charge in by elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X