ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನರ್ಹರಿಗೆ ಮಂತ್ರಿಗಿರಿ ಭರವಸೆ ಹೇಳಿಕೆ ಸಮರ್ಥಿಸಿಕೊಂಡ ಬಿಎಸ್ವೈ

|
Google Oneindia Kannada News

ಬೆಂಗಳೂರು, ನವೆಂಬರ್ 17: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹಗೊಂಡ ಶಾಸಕರು ಈಗ ಉಪ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಈ ಎಲ್ಲಾ ಶಾಸಕರ ಬೆಂಬಲಕ್ಕೆ ಖುದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿಂತಿದ್ದಾರೆ.

ಅನರ್ಹರನ್ನು ಬಿಜೆಪಿಗೆ ಅಧಿಕೃತವಾಗಿ ಸೇರಿಸಿಕೊಂಡ ಸಂದರ್ಭದಲ್ಲಿ ವೇದಿಕೆಯಿಂದಲೇ ಯಡಿಯೂರಪ್ಪ ಘೋಷಣೆ ಹೊರಡಿಸಿ ಎಲ್ಲರಿಗೂ ಮಂತ್ರಿಗಿರಿ ಸಿಗಲಿದೆ ಎಂದಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿ ಇರುವಾಗಲೇ ಸಿಎಂ ಯಡಿಯೂರಪ್ಪ ಈ ರೀತಿ ಘೋಷಣೆ ಹೊರಡಿಸಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ

ಆದರೆ ತಮ್ಮ ಹೇಳಿಕೆಯನ್ನು ಬಿಎಸ್ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದು, ಹೊಸದಾಗಿ ನಾನು ಏನು ಹೇಳಿಲ್ಲ, ಅದೇನೋ ಆಶ್ವಾಸನೆಯೂ ಅಲ್ಲ, ಎಲ್ಲರಿಗೂ ಗೊತ್ತಿರುವ ಸತ್ಯ ಎಂದಿದ್ದಾರೆ. ಇದೇ ವೇಳೆ ಈ ಹೇಳಿಕೆ ಹಾಗೂ ಇನ್ನಷ್ಟು ಹೇಳಿಕೆಗಳನ್ನು ಒಟ್ಟುಗೂಡಿಸಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪ ಹೊರೆಸಿ, ಆಯೋಗಕ್ಕೆ ದೂರು ನೀಡಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರ ಕ್ರಮವನ್ನು ಯಡಿಯೂರಪ್ಪ ಖಂಡಿಸಿದರು.

Yediyurappa justifies statement promising ministerial berths to disqualified MLAs

ಕಾಂಗ್ರೆಸ್ ಎತ್ತಿರುವ ಆಕ್ಷೇಪಗಳೇನು?
ಭಾಷಾ ಆಧಾರದ ಮೇಲೆ ಮತದಾರಾರ ಓಲೈಕೆ, ಅನರ್ಹ ಶಾಸಕರನ್ನು ಸಚಿವರನ್ನಾಗಿ ಮಾಡುತ್ತೇವೆಂದು ಹೇಳುವ ಮೂಲಕ ಸಿಎಂ ಬಿ. ಎಸ್ ಯಡಿಯೂರಪ್ಪ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಶರವಣ ಅವರಿಗೆ ಟಿಕೆಟ್ ನೀಡಿದ್ದು, ನಿಮ್ಮ ಭಾಷಿಕ(ತಮಿಳು)ನಿಗೆ ಟಿಕೆಟ್ ನೀಡಿದ್ದೇವೆ, ಗೆಲ್ಲಿಸಿಕೊಡಿ ಎಂದು ಕರೆ ನೀಡಿದ್ದರು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ, ಯಡಿಯೂರಪ್ಪ ವಿರುದ್ಧ ಕ್ರಮ ಜರುಗಿಸಿ ಎಂದು ಚುನಾವಣಾ ಆಯೋಗಕ್ಕೆ ಯಡಿಯೂರಪ್ಪ ದೂರು ನೀಡಿದೆ.

ಉಪ ಚುನಾವಣೆ ಗೆಲ್ಲಲು ತಂತ್ರ ಹಣೆಗೆ ಯಡಿಯೂರಪ್ಪ!ಉಪ ಚುನಾವಣೆ ಗೆಲ್ಲಲು ತಂತ್ರ ಹಣೆಗೆ ಯಡಿಯೂರಪ್ಪ!

ಅನರ್ಹ ಶಾಸಕರು ಕಾನೂನು ಉಲ್ಲಂಘಿಸಿದ್ದಾರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಅಶ್ವಥ್ ನಾರಾಯಣ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಆಗ್ರಹಿಸಿದರು.

English summary
Chief Minister BS Yediyurappa justified his statement promising ministerial berths to disqualified MLAs and condemn Siddaramaiah and Congress leader seeking demanded that the Election Commission initiate action against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X