• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಉತ್ತರಾಧಿಕಾರಿ ಪರಂಪರೆ': ರವಿ ಹೇಳಿಕೆ ಹಿಂದಿನ ಟಾರ್ಗೆಟ್ ಬಿಎಸ್ವೈ?

|
Google Oneindia Kannada News

ತಮಿಳುನಾಡು ಉಸ್ತುವಾರಿ ಮತ್ತು ಚುನಾವಣೆಯ ನೇತೃತ್ವವನ್ನು ಸಮರ್ಥವಾಗಿ ನಿಭಾಯಿಸಿ, ರಾಜ್ಯಕ್ಕೆ ವಾಪಸ್ ಆಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೀಡಿದ ಹೇಳಿಕೆ ಹಲವು ಚರ್ಚೆಗೆ ನಾಂದಿ ಹಾಡಿದೆ.

ನಮ್ಮಲ್ಲಿ ಉತ್ತರಾಧಿಕಾರಿ ಪರಂಪರೆ ಇಲ್ಲ ಎಂದು ಹೇಳಿರುವ ರವಿಯವರ ಹಿಂದಿನ ಉದ್ದೇಶವೇನು ಎನ್ನುವುದು ಬಿಜೆಪಿ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಬಿಜೆಪಿಯ ಹಿರಿಯ ಶಾಸಕ, ಯಡಿಯೂರಪ್ಪನವರ ಕಟು ಟೀಕಾಕಾರ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ರವಿ ತಿರುಗೇಟು ನೀಡಿದ್ದಾರಾ?

ಉಪಚುನಾವಣೆ: ಸುಲಭವಾಗಿ ಗೆಲ್ಲಬಹುದಾದ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಎಡವಟ್ಟು!ಉಪಚುನಾವಣೆ: ಸುಲಭವಾಗಿ ಗೆಲ್ಲಬಹುದಾದ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಎಡವಟ್ಟು!

"ಬಿಜೆಪಿಯ ಕೇಂದ್ರ ನಾಯಕರು ರಾಜ್ಯದ ಉಸ್ತುವಾರಿಯನ್ನು ಅರುಣ್ ಸಿಂಗ್ ಅವರಿಗೆ ನೀಡಿದ್ದಾರೆಯೇ ಅಥವಾ ಬಿಎಸ್ವೈ ಮತ್ತವರ ಕುಟುಂಬದ ಉತ್ತರಾಧಿಕಾರಿ ವಿಜಯೇಂದ್ರ ಅವರಿಗೆ ನೀಡಿದೆಯೇ"ಎಂದು ಯತ್ನಾಳ್ ಪ್ರಶ್ನಿಸಿದ್ದರು.

ಮೂರು ವಿಚಾರಕ್ಕೆ ವರಿಷ್ಠರ ನಿರ್ಲಕ್ಷ್ಯ, ಬಿಎಸ್ವೈ ದಿವ್ಯಮೌನ, ರಾಜ್ಯ ಬಿಜೆಪಿ ತಬ್ಬಿಬ್ಬುಮೂರು ವಿಚಾರಕ್ಕೆ ವರಿಷ್ಠರ ನಿರ್ಲಕ್ಷ್ಯ, ಬಿಎಸ್ವೈ ದಿವ್ಯಮೌನ, ರಾಜ್ಯ ಬಿಜೆಪಿ ತಬ್ಬಿಬ್ಬು

ಯತ್ನಾಳ್ ಅವರ ಈ ಹೇಳಿಕೆಯನ್ನು ರವಿ ಉಲ್ಲೇಖಿಸದಿದ್ದರೂ, ಇತ್ತೀಚೆಗೆ ಪಕ್ಷದಲ್ಲಿ ರಂಪ ರಾಮಾಯಣ ಮಾಡಿದ್ದ ಈಶ್ವರಪ್ಪನವರ ರಾಜ್ಯಪಾಲರ ದೂರು ಪ್ರಕರಣಕ್ಕೂ ರವಿ ಹೇಳಿಕೆಗೂ ಒಂದಕ್ಕೊಂದು ಸಂಬಂಧವಿದೆಯೇ ಎನ್ನುವ ಗಂಭೀರ ಪ್ರಶ್ನೆ ಏಳುವಂತೆ ಮಾಡಿದೆ.

 ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ರಾಜ್ಯಪಾಲರಿಗೆ ದೂರು

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ರಾಜ್ಯಪಾಲರಿಗೆ ದೂರು

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪನವರು ಸಿಎಂ ವಿರುದ್ದ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಇದು ಪಕ್ಷದೊಳಗೆ ಬಿರುಗಾಳಿಯನ್ನೇ ಎಬ್ಬಿಸಿತ್ತು. ಈ ವೇಳೆ, ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಮಾತಿನಂತೆ ಅನುದಾನಕ್ಕೆ ತಡೆ ನೀಡಿದ್ದೆ ಎಂದು ಈಶ್ವರಪ್ಪ ಹೇಳಿದ್ದರು. ಇದು ಬಿಜೆಪಿ ರಾಜ್ಯ ಘಟಕದಲ್ಲಿ ಸಂಚಲನ ಮೂಡಿಸಿತ್ತು.

 ಯಡಿಯೂರಪ್ಪ ಮತ್ತು ಅವರ ಉತ್ತರಾಧಿಕಾರಿ ವಿಜಯೇಂದ್ರ

ಯಡಿಯೂರಪ್ಪ ಮತ್ತು ಅವರ ಉತ್ತರಾಧಿಕಾರಿ ವಿಜಯೇಂದ್ರ

ಇದೊಂದು ವಿಚಾರವಾದರೆ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಉತ್ತರಾಧಿಕಾರಿ ವಿಜಯೇಂದ್ರ ಎನ್ನುವ ಪದವನ್ನು ಯತ್ನಾಳ್ ಬಹಳಷ್ಟು ಬಾರಿ ಬಳಸಿದ್ದರು. ಹಾಗಾಗಿ, "ನಮ್ಮಲ್ಲಿ ಉತ್ತರಾಧಿಕಾರಿ ಪರಂಪರೆ ಇಲ್ಲ, ವಂಶ ಪಾರಂಪರ್ಯ ರಾಜಕಾರಣ ಬಿಜೆಪಿಯ ಡಿಎನ್ಎ ಅಲ್ಲ" ಎನ್ನುವ ರವಿಯವರ ಹೇಳಿಕೆ, ಬಹಳ ಮಹತ್ವನ್ನು ಪಡೆದುಕೊಂಡಿದೆ.

 ಬಿಎಸ್ವೈ ನಮ್ಮ ನಾಯಕರು, ಆದರೆ ಅವರು ಪಕ್ಷದ ಮಾಲೀಕರಲ್ಲ

ಬಿಎಸ್ವೈ ನಮ್ಮ ನಾಯಕರು, ಆದರೆ ಅವರು ಪಕ್ಷದ ಮಾಲೀಕರಲ್ಲ

ಯಡಿಯೂರಪ್ಪನವರು ನಮ್ಮ ನಾಯಕರು, ಆದರೆ ಅವರು ಪಕ್ಷದ ಮಾಲೀಕರಲ್ಲ.ಬಿಜೆಪಿಯಲ್ಲಿ ವಂಶ ಪಾರಂಪರ್ಯ ಆಡಳಿತಕ್ಕೆ ಅವಕಾಶವಿಲ್ಲ. ಕಾಂಗ್ರೆಸ್ಸಿನಲ್ಲಾದರೆ ನೆಹರೂ ಕುಟುಂಬದವರೇ ಮಾಲೀಕರು, ಜೆಡಿಎಸ್ ನಲ್ಲಿ ಗೌಡ್ರ ಕುಟುಂಬ ಮತ್ತು ಡಿಎಂಕೆಯಲ್ಲಿ ಕರುಣಾನಿಧಿ ಕುಟುಂಬ ಮಾಲೀಕರು. ಆದರೆ, ನಮ್ಮಲ್ಲಿ ಕಾರ್ಯಕರ್ತರೇ ಮಾಲೀಕರು"ಎಂದು ಸಿ.ಟಿ.ರವಿ ಹೇಳಿದ್ದಾರೆ.

  CT Ravi : ಇದರಲ್ಲಿ ರಾಜಕೀಯ ಆಟ ನಡೆಯುತ್ತಿದೆ | Oneindia Kannada
   ಬಿಎಸ್ವೈ, ಮೋದಿ, ಅಮಿತ್ ಶಾ ಕೂಡಾ ನಮ್ಮ ನಾಯಕರು, ಆದರೆ ಓನರ್ ಅಲ್ಲ

  ಬಿಎಸ್ವೈ, ಮೋದಿ, ಅಮಿತ್ ಶಾ ಕೂಡಾ ನಮ್ಮ ನಾಯಕರು, ಆದರೆ ಓನರ್ ಅಲ್ಲ

  "ಬಿಎಸ್ವೈ, ಮೋದಿ, ಅಮಿತ್ ಶಾ ಕೂಡಾ ನಮ್ಮ ನಾಯಕರು, ಆದರೆ ಓನರ್ ಅಲ್ಲ. ನಾಯಕರ ಮಕ್ಕಳು ನಮ್ಮ ಪಕ್ಷದಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಬದಲಿಗೆ ನಮ್ಮಲ್ಲಿ ಅದಕ್ಕಾಗಿ ಕಮಿಟಿಯಿದೆ"ಎಂದು ಸಿ.ಟಿ.ರವಿ ಹೇಳುವ ಮೂಲಕ, ಯತ್ನಾಳ್ ಹೇಳಿಕೆಗೆ ಉತ್ತರ ನೀಡಿದಂತಾಯಿತು, ಬಿಎಸ್ವೈಗೂ ಸಿ.ಟಿ.ರವಿ ಸಂದೇಶ ರವಾನಿಸಿದಂತಾಯಿತು.

  English summary
  CM Yediyurappa Is Our Leader, Not Our Party Owner, Said BJP National General Secretary C T Ravi.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X